ರತ್ನಾಕರಃ ಕಿಂ ಕುರುತೇ ಸ್ವರತ್ನೈಃ

ವಿಂಧ್ಯಾಚಲಃ ಕಿಂ ಕರಿಭಿಃ ಕರೋತಿ ।

ಶ್ರೀಖಂಡಖಂಡೈಃ ಮಲಯಾಚಲಃ ಕಿಂ

ಪರೋಪಕಾರಾಯ ಸತಾಂ ವಿಭೂತಯಃ ।।

ಇದರ ತಾತ್ಪರ್ಯ ಹೀಗೆ:

‘ಸಮುದ್ರಕ್ಕೆ ರತ್ನಗಳಿಂದ ಏನು ಪ್ರಯೋಜನ? ವಿಂಧ್ಯಪರ್ವತವು ತನ್ನಲ್ಲಿರುವ ಆನೆಗಳಿಂದ ಏನು ಮಾಡುತ್ತದೆ? ಮಲಯಪರ್ವತವು ತನ್ನಲ್ಲಿರುವ ಶ್ರೀಗಂಧದ ಮರಗಳಿಂದ ಏನು ಮಾಡುತ್ತದೆ? ಎಂದರೆ ಸತ್ಪುರುಷರ ಸಂಪತ್ತು ಇತರರ ಸಹಾಯಕ್ಕಾಗಿಯೇ ಮೀಸಲಾಗಿರುತ್ತದೆ.’

ನಾವು ಜೀವನದಲ್ಲಿ ಸಂಪತ್ತನ್ನು ಗಳಿಸುತ್ತೇವೆ; ನಮ್ಮ ಅಗತ್ಯಕ್ಕೂ ಮೀರಿ ಸಂಪಾದನೆಯನ್ನು ಮಾಡುತ್ತೇವೆ. ಆದರೆ ಅದರಿಂದ ಪ್ರಯೋಜನವೇನು? ಸುಭಾಷಿತ ಅದನ್ನೇ ಇಲ್ಲಿ ಕೇಳುತ್ತಿರುವುದು. ಪ್ರಕೃತಿಯಲ್ಲಿರುವ ಕೆಲವೊಂದು ವಿವರಗಳ ಮೂಲಕ ಐಶ್ವರ್ಯದ ಸಂಗ್ರಹ ಮತ್ತು ಅದರ ವಿನಿಯೋಗದ ಬಗ್ಗೆ ಮಾತನಾಡುತ್ತಿದೆ.

ಸಮುದ್ರಕ್ಕೆ ರತ್ನಾಕರ ಎಂಬ ಹೆಸರಿದೆ; ಅದು ತನ್ನ ಒಡಲಲ್ಲಿ ರತ್ನಗಳನ್ನು ಇಟ್ಟುಕೊಂಡಿರುವುದರಿಂದ. ಸಮುದ್ರ ಈ ರತ್ನಗಳನ್ನು ಏನು ಮಾಡುತ್ತದೆ? ಅದು ತನ್ನ ಮಗಳಿಗೋ ಹೆಂಡತಿಗೋ ಸೊಸೆಗೋ ಮೊಮ್ಮಕ್ಕಳಿಗೋ ಕೊಡುವುದಿಲ್ಲವಷ್ಟೆ! ವಿಂಧ್ಯಪರ್ವತದಲ್ಲಿ ಆನೆಗಳು ಹೆಚ್ಚಾಗಿ ವಾಸಿಸುತ್ತವೆ ಎಂಬ ನಂಬಿಕೆಯಿದೆ. ಈ ಆನೆಗಳನ್ನು ಬಳಸಿಕೊಂಡು ಆ ಪರ್ವತ ಏನಾದರೂ ವ್ಯಾಪಾರ ಮಾಡುತ್ತಿದೆಯೆ? ದಂತಗಳನ್ನು ಕಳ್ಳಸಾಗಣಿಕೆ ಮಾಡಿ, ಹಣವನ್ನು ಸಂಪಾದನೆ ಮಾಡುತ್ತಿದೆಯೆ? ಕಾಡಿನ ಮರಗಳನ್ನು ಕತ್ತರಿಸಿ, ಅದನ್ನು ಲಾರಿಗಳಲ್ಲಿ ತುಂಬಿಸಲು ಆ ಆನೆಗಳನ್ನು ಬಳಸಿಕೊಳ್ಳುತ್ತಿದೆಯೆ? ಇನ್ನು ಮಲಯಪರ್ವತ; ಇದು ಶ್ರೀಗಂಧಮರಗಳಿಗೆ ಪ್ರಸಿದ್ಧವಾಗಿದೆ. ಹೀಗೆಂದು ಆ ಪರ್ವತ ಆ ಶ್ರೀಗಂಧದ ಮರಗಳನ್ನು ತನಗಾಗಿ ಬಳಸಿಕೊಳ್ಳುತ್ತಿದೆಯೆ? ಶ್ರೀಗಂಧದ ಎಣ್ಣೆಯ ಕಾರ್ಖಾನೆಯನ್ನು ನಡೆಸುತ್ತದೆಯೆ? ಗಂಧದ ಮರದಲ್ಲಿ ಮೂರ್ತಿಗಳನ್ನು ಕೆತ್ತಿ ಮಾರಾಟ ಮಾಡಿ, ಪ್ರದರ್ಶನ ಮಾಡುತ್ತಿದೆಯೆ?

ಸಮುದ್ರ, ವಿಂಧ್ಯಾಚಲ ಮತ್ತು ಮಲಯಪರ್ವತಗಳನ್ನು ಸುಭಾಷಿತ ಸತ್ಪುರುಷರೊಂದಿಗೆ ಸಮೀಕರಣ ಮಾಡಿದೆ. ಹೀಗೆ ಈ ಮೂರು ಅವುಗಳಲ್ಲಿರುವ ಸಂಪತ್ತನ್ನು ಅವೇ ಬಳಸಿಕೊಳ್ಳುವುದಿಲ್ಲವೋ ಹಾಗೆಯೇ ಸಜ್ಜನರು ಕೂಡ ತಮ್ಮಲ್ಲಿರುವ ಸಂಪತ್ತನ್ನು ಬೇರೆಯವರಿಗಾಗಿಯೇ, ಎಂದರೆ ಸಮಾಜದ ಒಳಿತಿಗಾಗಿಯೇ ವಿನಿಯೋಗಿಸುತ್ತಾರೆ ಎಂಬುದು ಅದರ ಭಾವ. ಈ ಸಮೀಕರಣದಿಂದ ನಾವು ಸುಲಭವಾಗಿ ನಮ್ಮ ಸಮಾಜದಲ್ಲಿರುವ ಸಿರಿವಂತರಲ್ಲಿ ಯಾರು ಸಜ್ಜನರು, ಯಾರು ಸಜ್ಜನರಲ್ಲ – ಎಂದು ಸುಲಭವಾಗಿ ವರ್ಗೀಕರಿಸಬಹುದಾಗಿದೆ.

ಕಾಲಿದಾಸನ ಈ ಪದ್ಯವೂ ಇಂಥದೇ ಭಾವವನ್ನು ಹೇಳುತ್ತಿದೆ:

ಭವಂತಿ ನಮ್ರಾಸ್ತರವಃ ಫಲಾಗಮೈಃ

ನವಾಂಬುಭಿರ್ದೂರವಿಲಂಬಿನೋ ಘನಾಃ ।

ಅನುದ್ಧತಾಃ ಸತ್ಪುರುಷಾಃ ಸಮೃದ್ಧಿಭಿಃ

ಸ್ವಭಾವ ಏವೈಷ ಪರೋಪಕಾರಿಣಾಮ್ ।।

ಎಂದರೆ, ಮರಗಳು ಹಣ್ಣುಗಳ ಭಾರದಿಂದ ಬಗ್ಗುತ್ತವೆ; ನೀರು ತುಂಬಿದ ಮೋಡಗಳು ದೂರದ ಆಕಾಶದಲ್ಲಿ ಕೆಳಮಟ್ಟದಲ್ಲಿ ತೇಲುತ್ತವೆ. ಉತ್ತಮರಲ್ಲಿ ಎಷ್ಟೇ ಐಶ್ವರ್ಯ ಇರಬಹುದು, ಅವರು ಅಹಂಕಾರ ಪಡುವುದಿಲ್ಲ. ಪರೋಪಕಾರಿಗಳು ಇರುವ ಕ್ರಮವೇ ಹೀಗೆ.

ಸಜ್ಜನರು ತಮ್ಮಲ್ಲಿರುವ ಸಂಪತ್ತಿನಿಂದ ಗರ್ವವನ್ನೂ ಪಡೆಯುವುದಿಲ್ಲ; ಅದನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದೂ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.