ಕೊಲಂಬೊ: ಆತಿಥೇಯ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಣ ಮಹಿಳಾ ಏಕದಿನ ವಿಶ್ವಕಪ್ ಪಂದ್ಯ ಮಂಗಳವಾರ ಮಳೆಯಿಂದಾಗಿ ಅಪೂರ್ಣಗೊಂಡಿತು. ಎರಡೂ ತಂಡಗಳು ತಲಾ ಒಂದು ಪಾಯಿಂಟ್ ಪಡೆದವು.

ಲಂಕನ್ನರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ 6 ವಿಕೆಟ್ಗೆ 258 ರನ್ಗಳ ಸವಾಲಿನ ಮೊತ್ತ ಗಳಿಸಿದ್ದರು. ಟಾಸ್ ಗೆದ್ದು ಬ್ಯಾಟ್ ಮಾಡಿದ ಆತಿಥೇಯರಿಗೆ ವಿಶ್ಮಿ ಗುಣರತ್ನೆ (42, 83ಎ) ಮತ್ತು ನಾಯಕಿ ಚಾಮರಿ ಅಟಪಟ್ಟು (53, 72ಎ) ಅವರು 101 ರನ್ಗಳ ಜೊತೆಯಾಟದಲ್ಲಿ ಭಾಗಿಯಾಗಿ ಉತ್ತಮ ಆರಂಭ ಒದಗಿಸಿದ್ದರು. ಮೂರನೇ ಕ್ರಮಾಂಕದಲ್ಲಿ ಹಸಿನಿ ಪೆರೇರಾ (44, 61ಎ) ಕೂಡ ಉಪಯುಕ್ತ ಕೊಡುಗೆ ನೀಡಿದ್ದರು.

ಆದರೆ ತಂಡ 250ರ ಗಡಿ ದಾಟಲು ನೀಲಾಕ್ಷಿಕಾ ಡಿಸಿಲ್ವ ಅವರ ಅಜೇಯ ಅರ್ಧ ಶತಕ ಕಾರಣವಾಯಿತು. ಬಿರುಸಿನ ಆಟವಾಡಿದ ಅವರು ಕೇವಲ 28 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಏಳು ಬೌಂಡರಿಗಳಿದ್ದ 55 ರನ್ ಗಳಿಸಿದರು. ಕಿವೀಸ್ ಕಡೆ ಸೋಫಿ ಡಿವೈನ್ 3 ವಿಕೆಟ್ ಗಳಿಸಿದರು.

ಆದರೆ ನ್ಯೂಜಿಲೆಂಡ್ ತಂಡ ಇನಿಂಗ್ಸ್ ಆರಂಭಿಸುವಷ್ಟರಲ್ಲಿ ಮಳೆ ಆರಂಭವಾಯಿತು.

ಲಂಕಾ 4 ಪಂದ್ಯಗಳಿಂದ 2 ಪಾಯಿಂಟ್ಸ್ ಗಳಿಸಿದ್ದು ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿ ಮುಂದುವರಿದಿದೆ. ಮೂರು ಪಾಯಿಂಟ್ಸ್ ಹೊಂದಿರುವ ನ್ಯೂಜಿಲೆಂಡ್ ಐದನೇ ಸ್ಥಾನದಲ್ಲಿದೆ. ಶ್ರೀಲಂಕಾ– ಆಸ್ಟ್ರೇಲಿಯಾ ನಡುವಣ ಪಂದ್ಯವೂ ಮಳೆಗೆ ಕೊಚ್ಚಿಹೋಗಿತ್ತು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 50 ಓವರುಗಳಲ್ಲಿ 6ಕ್ಕೆ 258 (ವಿಶ್ಮಿ ಗುಣರತ್ನೆ 42, ಚಾಮರಿ ಅಟಪಟ್ಟು 53, ಹಸಿನಿ ಪೆರೇರಾ 44, ಹರ್ಷಿತಾ ಸಮರವಿಕ್ರಮ 26, ನೀಲಾಕ್ಷಿಕಾ ಸಿಲ್ವ ಔಟಾಗದೇ 55; ಬ್ರೀ ಇಲಿಂಗ್ 39ಕ್ಕೆ2, ಸೋಫಿ ಡಿವೈನ್ 54ಕ್ಕೆ3) ವಿರುದ್ಧ ನ್ಯೂಜಿಲೆಂಡ್; ಪಂದ್ಯ ರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.