ಶನಿವಾರ, ಆಗಸ್ಟ್ 13, 2022
23 °C

ಮಾಸ ಭವಿಷ್ಯ: 2020ರ ಡಿಸೆಂಬರ್‌ 1 ರಿಂದ 31ರವರೆಗೆ

ಪ್ರಶಾಂತ ಭಟ್ ಹೆಗ್ಗಾರ್ Updated:

ಅಕ್ಷರ ಗಾತ್ರ : | |

ಮಾಸ ಭವಿಷ್ಯ: 2020ರ ಡಿಸೆಂಬರ್‌ 1 ರಿಂದ 31ರವರೆಗೆ

ಮೇಷ

ವೈಯಕ್ತಿಕ ಮತ್ತು ವೃತ್ತಿಪರ ಬದಲಾವಣೆಗಳನ್ನು ಎದುರಿಸಲು ಸಿದ್ಧರಾಗಿ. ಮನೆಯ ಬದಲಾವಣೆ, ನವೀಕರಣ ಅಥವಾ ಹೊಸ ವಾಸಸ್ಥಳಕ್ಕೆ ಹೋಗಬಹುದು. ಹಣಕಾಸು ಸ್ಥಿತಿ ಸುಧಾರಿಸಲಿದೆ. ಆದಾಯ ಮತ್ತು ಆರ್ಥಿಕ ಅಭಿವೃದ್ಧಿಗೆ ಹೊಸ ಮಾರ್ಗಗಳು ಗೋಚರಿಸಲಿವೆ.

ಶುಭ: 3, 4, 9, 21, 30

ಅಶುಭ: 19, 20, 27, 29

ವೃಷಭ

ಸಕಾರಾತ್ಮಕ ಬದಲಾವಣೆಗಳು ಹೊಸ ನಿರೀಕ್ಷೆಗಳನ್ನು ಹುಟ್ಟಿಸಬಹುದು. ಸಂಗಾತಿಯ ಜೊತೆ ಸೇರಿ ಹಣಕಾಸಿನ ಕಾರ್ಯತಂತ್ರಗಳು ಮತ್ತು ಹೂಡಿಕೆಗಳಲ್ಲಿನ ದೋಷಗಳನ್ನು ಸರಿಪಡಿಸಲು ಸುಸಮಯ. ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಸಾಧ್ಯತೆ. ಆರೋಗ್ಯಕ್ಕಾಗಿ ಉತ್ತಮ ಆಹಾರ, ವ್ಯಾಯಾಮ ಅನುಸರಿಸಿ.

ಶುಭ: 7, 11, 12, 15, 19

ಅಶುಭ: 6, 27, 28, 30

ಮಿಥುನ

ದಂಪತಿಗಳ ನಡುವೆ ಹೊಂದಾಣಿಕೆ ಹೆಚ್ಚುತ್ತದೆ. ಅವಿವಾಹಿತರಿಗೆ ಹೊಸ ಸಂಬಂಧಗಳನ್ನು ಬೆಸೆಯುವ ಅವಕಾಶಗಳಿವೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಅತ್ಯಗತ್ಯ. ಔದ್ಯೋಗಿಕ ಅಭಿವೃದ್ಧಿ, ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಶುಭ: 7, 17, 19, 25, 27

ಅಶುಭ: 18, 20, 24, 30

ಕಟಕ

ಸಹಯೋಗ ಮತ್ತು ಸಹಕಾರವು ಅಭಿವೃದ್ಧಿ ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ. ವೃತ್ತಿಜೀವನದಲ್ಲಿ ಪ್ರಮುಖ ಬದಲಾವಣೆಗಳಾಗಬಹುದು. ಹಣದ ಹರಿವು ಸಾಮಾನ್ಯವಾಗಿರುತ್ತದೆ. ಹೊಸ ಹೂಡಿಕೆಗಲಿಗೆ ಇದು ಸರಿಯಾದ ಸಮಯವಲ್ಲ.

ಶುಭ: 2, 7, 17, 18, 23

ಅಶುಭ: 1, 3, 8, 24

ಸಿಂಹ

ಗ್ರಹಣಗಳ ಪ್ರಭಾವದಿಂದ ಈ ತಿಂಗಳು ನಿಮ್ಮ ಜೀವನದಲ್ಲಿ ಗಮನಾರ್ಹ ಪರಿವರ್ತನೆಗಳು ಕಂಡುಬರಲಿವೆ. ಹಣದ ಹರಿವಿನ ಎಲ್ಲ ಅಡೆತಡೆಗಳು ದೂರಾಗಲಿವೆ. ನಿಮ್ಮ ಯೋಜನೆಗಳನ್ನು ಸುಲಭವಾಗಿ ಸಾಧಿಸುವಿರಿ. ಕೆಲಸದ ಸ್ಥಳದಲ್ಲಿ ಸಂಬಂಧಗಳು ಸೌಹಾರ್ದಯುತವಾಗಿರುತ್ತವೆ.

ಶುಭ: 6, 7, 8, 13, 27

ಅಶುಭ: 20, 21, 26, 30

ಕನ್ಯಾ

ವೃತ್ತಿ, ಪ್ರೀತಿ, ಸಂಬಂಧಗಳು, ಕುಟುಂಬದ ಸಮಸ್ಯೆಗಳು ಮತ್ತು ವೈಯಕ್ತಿಕ ಆಕಾಂಕ್ಷೆಗಳು ನಿಮ್ಮನ್ನು ಬೇರೆ ಬೇರೆ ದಿಕ್ಕಿಗೆ ಎಳೆಯಲಿವೆ. ಈ ಎಲ್ಲಾ ವಿಷಯಗಳನ್ನು ಎಷ್ಟು ಸಮತೋಲನದಿಂದ ನೋಡುವಿರಿ, ಯಾವುದಕ್ಕೆ ಆದ್ಯತೆ ನೀಡುವಿರಿ ಎನ್ನುವುದರ ಮೇಲೆ ನಿಮ್ಮ ಯಶಸ್ಸು ಅವಲಂಬಿಸುತ್ತದೆ.

ಶುಭ: 1, 4, 5, 21, 27

ಅಶುಭ: 14, 20, 29, 30

ತುಲಾ

ಆರೋಗ್ಯ ಪರಿಸ್ಥಿತಿಗಳು ನಿಮ್ಮನ್ನು ಚಿಂತೆಗೆ ಹಚ್ಚಬಹುದು. ಈ ತಿಂಗಳ 21 ರ ನಂತರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಗಂಭೀರ ಕಾಯಿಲೆಗಳು ಮರುಕಳಿಸುವ ಸಾಧ್ಯತೆಯಿದೆ, ತಕ್ಷಣ ವೈದ್ಯಕೀಯ ಆರೈಕೆ ಪಡೆಯಿರಿ. ಹಣದ ಹರಿವು ಉತ್ತಮವಾಗಿರಲಿದೆ.

ಶುಭ: 2, 12, 15, 19, 27

ಅಶುಭ: 11, 14, 18, 20

ವೃಶ್ಚಿಕ

ಉದ್ಯೋಗ ಬದಲಾವಣೆಯ ಮೂಲಕ ವೃತ್ತಿಜೀವನದ ಬೆಳವಣಿಗೆಗೆ ಉತ್ತಮ ಅವಕಾಶಗಳು ಎದುರಾಗಲಿವೆ. ಹಣದ ಹರಿವು ಸುಗಮವಾಗಿರುತ್ತದೆ. ಕೌಟುಂಬಿಕ ಸೌಹಾರ್ದತೆ ಕಾಪಾಡಲು ತಾಳ್ಮೆಯಿಂದ ವರ್ತಿಸುವುದು ಬಹಳ ಮುಖ್ಯ.

ಶುಭ: 11, 15, 20, 22, 24

ಅಶುಭ: 10, 21, 28, 29

ಧನು

ಈ ತಿಂಗಳು ನಿಮಗೆ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಆಕಾಂಕ್ಷೆಗಳು ಮುಖ್ಯವಾಗುತ್ತವೆ. ಎಲ್ಲವೂ ನಿಮ್ಮ ಅನುಕೂಲಕ್ಕೆ ತಕ್ಕಂತೆ ನಡೆಯುತ್ತಿರುವುದರಿಂದ ರಾಜಿ ಮಾಡಿಕೊಳ್ಳುವ ಅಗತ್ಯವಿಲ್ಲ. ಹಣದ ಹರಿವು ಸಾಮಾನ್ಯ. ಕುಟುಂಬದ ವೆಚ್ಚಗಳು ನಿಯಂತ್ರಣದಲ್ಲಿರಲಿ.

ಶುಭ: 8, 9, 13, 21, 23

ಅಶುಭ: 10, 11, 14, 18

ಮಕರ

ನಿಮ್ಮ ವರ್ಚಸ್ಸು ಹೆಚ್ಚಲಿದೆ. ಅದಕ್ಕನುಗುಣವಾಗಿ ಆತ್ಮವಿಶ್ವಾಸವೂ ಅಧಿಕವಾಗಲಿದೆ. ಯಾವುದೇ ಸವಾಲುಗಳಿದ್ದರೂ ಸುಲಭವಾಗಿ ಜಯಿಸುವಿರಿ. ಆರಂಭದಲ್ಲಿ ವೃತ್ತಿ ಜೀವನ ಬೇಸರ ತರಿಸಬಹುದು. ಮುಂದೆ ಎಲ್ಲವೂ ಸರಿಹೋಗಲಿದೆ.

ಶುಭ: 2, 9, 11, 18, 22

ಅಶುಭ: 21, 26, 27, 29

ಕುಂಭ

ಕುಟುಂಬ ಜೀವನ, ವೃತ್ತಿ ಬದುಕು, ಆರೋಗ್ಯ, ಹಣಕಾಸು ಎಲ್ಲಾ ವಿಷಯಗಳಲ್ಲಿಯೂ ಅಭಿವೃದ್ಧಿ ಕಂಡುಬರಲಿದೆ. ಕುಟುಂಬದ ವಾತಾವರಣವು ಸಂತೋಷ ಮತ್ತು ನೆಮ್ಮದಿಯಿಂದ ತುಂಬಿರುತ್ತದೆ. ಇತರರಿಗೆ ಸಹಾಯಹಸ್ತ ಚಾಚಲು ಇದು ಉತ್ತಮ ಸಮಯ.

ಶುಭ: 16, 17, 24, 29, 30

ಅಶುಭ: 11, 15, 18, 28

ಮೀನ

ಕೌಟುಂಬಿಕ ವಾತಾವರಣವು ಘರ್ಷಣೆಗಳಿಂದ ತುಂಬಿರುತ್ತದೆ. ಹಿರಿಯರೊಂದಿಗೆ ಮನಸ್ತಾಪ ಉಂಟಾಗಬಹುದು. ತಾಳ್ಮೆಯಿಂದಿರುವುದು ಬಹಳ ಮುಖ್ಯ. ವೃತ್ತಿಯಲ್ಲಿನ ಪ್ರಮುಖ ಬದಲಾವಣೆಗಳು ಒತ್ತಡವನ್ನು ಸೃಷ್ಟಿಸಬಹುದು. ಆದರೆ ಈ ಬದಲಾವಣೆ ಮುಂದೆ ನಿಮಗೆ ಅನುಕೂಲಕರವಾಗಲಿದೆ.

ಶುಭ: 7, 14, 18, 23, 25

ಅಶುಭ: 5, 11, 27, 30

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.