ತಮ್ಮೆಲ್ಲರಿಗೂ ತಿಳಿದಿರುವ ಹಾಗೆ ಮರ್ತ್ಯದ ಮಹಾಮನೆ ಹಾಳಾದಾಗಲೆಲ್ಲಾ, ಪ್ರವಾದಿಗಳು, ದಾರ್ಶನಿಕರು, ಸಿದ್ಧರು, ಯೋಗಿ ಮಹಾಶಯರೆಲ್ಲಾ ಜನ್ಮವೆತ್ತಿ ಅಖಂಡ ಭಾರತದ ಭವ್ಯ ಬುನಾದಿಯಾಗಿರುವರು. ಸೃಷ್ಟಿಯ ಅನಾದಿಯಿಂದಲೂ ತಾನೊಂದೇ ಉಳಿದಿರುವ ಚಿದಾತ್ಮವನ್ನು ಅನೇಕರು ಆದಿಯಲ್ಲಿ ಲಿಂಗೈಕ್ಯ ಅನುಭವವನ್ನು ಅನುಭವಿಸಿ ನಮ್ಮೆಲ್ಲರಿಗೂ ಧರ್ಮೋಪದೇಶವನ್ನು ಮಾಡುತ್ತಾ ಬಂದಿರುವರು. ಅದರಲ್ಲಿ ಬಸವಾದಿಶರಣರು ಅಗ್ರಗಣ್ಯರು.

ಪ್ರಪಂಚದ ಯಾವ ಜೀವಿಯಾಗಲಿ ಅವನಲ್ಲಿರುವ ಚಿಲ್ಲಿಂಗವೊಂದೆ. ಧರ್ಮ, ಮತ, ಜಾತಿ, ಪಂಥ, ಹೆಣ್ಣು-ಗಂಡು ಎಲ್ಲವನ್ನೂ ಮೀರಿ ತಾನು ಮಾತ್ರ ತಾನಾಗಿರುವ ಏಕೈಕ ವಸ್ತು. ಅದೇ ನಮ್ಮ ನಿಮ್ಮೆಲ್ಲರ ಒಡಲೊಳಗಣ ಅಖಂಡ ಚಿದ್ಬಳಕೂ, ಚಿದಾತ್ಮವೂ ಆದ ಶಿವ. ಶಿವ-ಶಕ್ತಿ, ಪ್ರಕೃತಿ-ಪುರುಷರಿಂದ ಸಕಲಕಾಧಾರವಾದ ಸರ್ವಶೂನ್ಯ ನಿರಾಲಂಭ ಚಿನ್ಮಯವೂ ಒಂದೇ, ಅದೇ ಬಸವ ಧರ್ಮದ ಸರ್ವವೂ, ಮೂಲವು. ನಾದ, ಬಿಂದು, ಕಳಾತೀತ ತೂರಿಯ ಚಿದಾನಂದ ತನ್ನ ಸುಖವ ತಾನೇ ಬಲ್ಲ, ತನ್ನ ನಿಲುವ ಉಪಮಿಸಲಾರ. ವಾಕ್ ಮನಕ್ಕೆ ಅಗೋಚರವೆನಿಸಿ ಸಮಸ್ತಕ್ಕೂ ಆಧಾರವಾದ ಮೂಲ ವಸ್ತುವಿನ ಅಂದರೆ ಲಿಂಗ(ಆತ್ಮ)ದ ಚಿಂತನದಿಂದಲೇ ಕಲಿ ಪ್ರಭಾವವನ್ನು ನಾವು ಕಡಿಮೆ ಮಾಡಬಹುದು.

‘ಪ್ರಸ್ತುತ ಅತ್ಯಾಚಾರ, ಅನಾಚಾರ, ಕೊಲೆ, ಮೋಸ, ಸಂಬಂಧಗಳ ಬೆಲೆಹಾನಿ, ಪಾಪಾತ್ಮಕ ಅನೇಕ ಹೀನಕೃತ್ಯ, ಧರ್ಮ, ಜಾತಿ, ಹೋರಾಟ ಹಾಗೂ ಅಧ್ಯಾತ್ಮಿಕ ಶೋಷಣೆ, ರಾಜಕೀಯ ಅಸಮತೋಲನ ಎಲ್ಲಕ್ಕೂ ಕಾರಣವೇ ಮೂಲ ಚಿಂತನೆಯ ಮರೆವು’. ಬಸವಾದಿಶರಣರ ವಚನ ಸಾಹಿತ್ಯದ ಮೂಲ ವಸ್ತು (ಆತ್ಮ) ಚಿಂತನೆ.

ಶರಣ– ಶರಣೆಯರೆ ನೀವೆಲ್ಲರೂ ಶಿವನೆಂದು ಶಂಕರರೂ ಅಧ್ವೈತ ತತ್ವವನ್ನು ಸವಿಸ್ತಾರವಾಗಿ ತಿಳಿಯ ಹೇಳಿದರೂ ಬಸವಣ್ಣನವರು ತೂರಿಯಾತೀತ ಸ್ಥಿತಿಯನ್ನು ಅನುಭವಿಸುತ್ತಲೇ ಅಸಂಖ್ಯಾತ ಪ್ರಮಥಗಣಂಗಳಿಂದ ಅನುಭವ ಮಂಟಪದಲ್ಲಿ ಶೂನ್ಯ ಸಂಪಾದನೆಯನ್ನು ಭಕ್ತಿ ರಸಾಮೃತದಲ್ಲಿ ಉಣಬಡಿಸಿದರು. ವಿವೇಕಾನಂದರು, ಏಸು, ಪೈಗಂಬರ್, ನಾನಕ್, ಪರಮಹಂಸಯೋಗಾನಂದರು, ಕಬೀರ, ಸಂತಶಿಶುನಾಳ ಶರೀಫರು, ಪರಮಹಂಸರಾದ ಅನೇಕ ದಾರ್ಶನಿಕರು, ರಾಮಕೃಷ್ಣರು, ಆತ್ಮ ಜ್ಞಾನಿಗಳು ಎಲ್ಲರೂ ಕಂಡದ್ದೂ ಒಂದೇ ಅನುಭವಿಸಿದ ಅನುಭಾವ ಆತ್ಮವೊಂದೇ.

ಮಹಾಂತರೇ ಮುಕ್ತಾತ್ಮರು ಕಂಡದ್ದನ್ನೂ ಕಂಡಂತೆ ಹೇಳಿದರೂ, ತಿಳಿದವರು ತಿದ್ದಿದರೂ, ಆದರೂ ಅನಾದಿ ಋಷಿ ಪರಂಪರೆಯಿಂದಲೂ ಮೂಲವಸ್ತು ಚಿಂತನೆ ಉಪನಿಷತ್ತಿನಿಂದ ಹಿಡಿದೂ ಬಸವಾದಿಶರಣರವರೆಗೂ ಜ್ಞಾನಸಿಂಧುವಿನಂತೆ ಪಸರಿಸಿದ ಜ್ಞಾನದ ಅಲೆಯೊಂದೇ ಆತ್ಮ(ಲಿಂಗ )ಸತ್ಯ. ಮಾಯಾ ಜಗನ್ (ಪ್ರಪಂಚ) ಮಿಥ್ಯ. ಚಿದಾತ್ಮ ನಿರಂಜನರೇ ತನ್ನಾತ್ಮವ ತಾನೇ ಅರಿತು ಆಚರಿಸಿ ಚಿಂತಿಸಿ, ಚಿದಗ್ನಿಯಲ್ಲಿ ಮಾಯೆಯನ್ನು ಬಸವಾದಿಶರಣರ ತತ್ವ ಆಚರಣೆಯಿಂದ ಅರಿತು ನೋಡಿ, ಅನುವನ್ನೊಮ್ಮೆ ಅನುಭವಿಸಿ ಅಮೃತರಾಗಿ.

ಶಿವಸ್ವರೂಪಿಗಳೇ ನಿಮ್ಮ ಮನದ ಮೊನೆಯ ಕೊನೆಯಲ್ಲಿರುವ ಶಿವನ ಕೊಂಬ ಮೆಟ್ಟಿ ಕೂಗಿ, ಭಕ್ತಿಯ ಪಕ್ಷಿಗೆ ಜ್ಞಾನ ವೈರಾಗ್ಯವೆಂಬ ರೆಕ್ಕೆಯಿತ್ತು ಶಿವಬಸವನಾಗಿ ಹಾರಾಡಿ ನೋಡಿ!'

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ,

ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ,

ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ,

ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ,

ಕೂಡಲಸಂಗನ ಶರಣರ ಅನುಭಾವದ ಬಲದಿಂದ

ಎನ್ನ ಭವದ ಕೇಡು ನೋಡಯ್ಯಾ.

ಎಂಬ ಬಸವಣ್ಣನವರ ಕಿಂಕರ ಭಾವವನ್ನು, ಸಕಲ ಜೀವರಾಶಿಗಳಿಗೂ

ಲೇಸ ಬಯಸಿದ ಶರಣರ ತತ್ವ ಅರಿತು ಆಚರಿಸಿ.

ಸೋಹಂ ಎನ್ನದೆ ದಾಸೋಹಂ ಎಂದೆನಿಸಿದ ಬಸವಾದಿಶರಣರ ತತ್ವ, ವಚನ ಸಾಹಿತ್ಯವನ್ನು ಅಧ್ಯಯನ ಮಾಡಿ ಭವವನ್ನು ಗೆದ್ದು ನಿತ್ಯ ಮುಕ್ತರಾಗಿ.

ಲೇಖಕರು: ಸಾಧಕರು, ಶ್ರೀ ವಿರಕ್ತ ಮಠ, ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.