ಬೆಂಗಳೂರು: ನವರಾತ್ರಿಯ 7ನೇ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ. ಹೆಸರೇ ಹೇಳುವಂತೆ ದೇವಿಯು ಅತಿ ಭಯಾನಕ ರೂಪವನ್ನು ತಾಳಿರುತ್ತಾಳೆ. ಆಕೆಯ ಬಣ್ಣ ಗಾಢ ಕಪ್ಪಾಗಿದ್ದು, ಆಕೆಯನ್ನು ಶುಭಾಂಕರಿ ಎಂದು ಕೂಡ ಕರೆಯಲಾಗುತ್ತದೆ. ಕಾಳರಾತ್ರಿ ದೇವಿಯ ಆರಾಧನೆ ಮಾಡುವುದು ಹೇಗೆ? ಯಾವ ಯಾವ ನೈವೇದ್ಯವನ್ನು ಮಾಡಬೇಕು ಎಂಬ ಮಾಹಿತಿ ನೋಡೋಣ ಬನ್ನಿ.

ಕಾಳರಾತ್ರಿಯು ಕರಾಳ ರಾತ್ರಿಯಲ್ಲಿ ರಕ್ಕಸರನ್ನು ಸಂಹಾರ ಮಾಡುತ್ತಾಳೆ. ದುಷ್ಟಶಕ್ತಿಗಳು ಹಾಗೂ ನಕಾರಾತ್ಮಕ ಶಕ್ತಿಗಳಿಂದ ಭಕ್ತರನ್ನು ಪಾರು ಮಾಡುತ್ತಾಳೆ. ಕಾಳರಾತ್ರಿಯು ತನ್ನ ಭಕ್ತರಿಗೆ ಶಾಂತಿ ಹಾಗೂ ನೆಮ್ಮದಿಯನ್ನು ಕರುಣಿಸುತ್ತಾಳೆ ಎಂದು ಹೇಳಲಾಗುತ್ತದೆ.
.ನವರಾತ್ರಿ 6ನೇ ದಿನ | ಕಾತ್ಯಾಯಿನಿಗೆ ಹೀಗೆ ಪೂಜೆ ಸಲ್ಲಿಸಿ.
ಪೂಜಾ ವಿಧಾನ ಹಾಗೂ ಪೂಜಾ ಸಮಯ:

ಕಾಳರಾತ್ರಿಯನ್ನು ಭಕ್ತಿಯಿಂದ ಆರಾಧಿಸಿದರೆ ಅಜ್ಞಾನ ನಾಶವಾಗುತ್ತದೆ ಎಂದು ಹೇಳಲಾಗುತ್ತದೆ. ಕಾಳರಾತ್ರಿಯ ಆರಾಧನೆ ಜೊತೆಗೆ ಸರಸ್ವತಿಯನ್ನು ಪೂಜಿಸುವುದು ಅತ್ಯಂತ ಶುಭವೆಂದು ಜ್ಯೋತಿಷ ಹೇಳುತ್ತದೆ.

ಜ್ಯೋತಿಷದ ಪ್ರಕಾರ ಕಾಳರಾತ್ರಿ ದೇವಿಯನ್ನು ಬೆಳಿಗ್ಗೆ 9:28 ರಿಂದ ಮಧ್ಯಾಹ್ನ 12:50 ರವರೆಗೆ ಪೂಜೆ ಸಲ್ಲಿಸುವುದು ಉತ್ತಮ ಎನ್ನಲಾಗಿದೆ.

ಬಣ್ಣ ಮತ್ತು ನೈವೇದ್ಯ:

ಬಣ್ಣ: ಕೇಸರಿ ಬಣ್ಣ

ನೈವೇದ್ಯ: ಕೋಸಂಬರಿ, ಕಡಬು ಹಾಗೂ ಶಾವಿಗೆ ಪಾಯಿಸ ನೈವೇದ್ಯ ಮಾಡುವುದರಿಂದ ದೇವರ ಆಶೀರ್ವಾದ ಪಡೆಯಬಹುದು ಎಂದು ಜ್ಯೋತಿಷ ತಿಳಿಸಿದೆ.

ಪೂಜೆಯ ಮಂತ್ರ:

ಓಂ ದೇವಿ ಕಾಲರಾತ್ರೈ ನಮಃ (ಈ ಮಂತ್ರವನ್ನು 108 ಬಾರಿ ಪಠಿಸಬೇಕು)

ಯಾ ದೇವಿ ಸರ್ವಭೂತೇಶು ಮಾ ಕಾಳರಾತ್ರಿ ರೂಪೇಣ ಸಂಸ್ಥಿತಾ

ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ
.ನವರಾತ್ರಿಯಲ್ಲಿ ಗೊಂಬೆ ಇಟ್ಟು ಪೂಜಿಸುವುದು ಏಕೆ? ಇಲ್ಲಿದೆ ಮಹತ್ವದ ಮಾಹಿತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.