ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವರಮಹಾಲಕ್ಷ್ಮೀ ಹಬ್ಬಕ್ಕೆ ಮನೆಯಲ್ಲಿರಲಿ ‘ವಿಷ್ಣುಲಕ್ಷ್ಮಿ’

Published 9 ಆಗಸ್ಟ್ 2024, 23:30 IST
Last Updated 9 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ಹಿಂದೂ ಸಂಪ್ರದಾಯದಲ್ಲಿ ವರಮಹಾಲಕ್ಷ್ಮೀ ಹಬ್ಬಕ್ಕೆ ಮಹತ್ವದ ಸ್ಥಾನವಿದೆ. ಸಂಪತ್ತು, ಸಮೃದ್ದಿ, ಹಾಗೂ ಧೈರ್ಯದ ವೃದ್ಧಿಗಾಗಿ ಮಹಾಲಕ್ಷ್ಮಿಯನ್ನು ಪೂಜಿಸುತ್ತಾರೆ. ದಕ್ಷಿಣ ಭಾರತದ ಕರ್ನಾಟಕ, ತೆಲಂಗಾಣ, ಆಂದ್ರಪ್ರದೇಶದ ಭಾಗಗಳಲ್ಲಿ ಶ್ರಾವಣ ಮಾಸದಲ್ಲಿ ಲಕ್ಷ್ಮೀದೇವಿಯನ್ನು ಪೂಜಿಸುತ್ತಾರೆ ಅದರಲ್ಲಿಯೂ ಶ್ರಾವಣ ಶುಕ್ರವಾರದ ಹುಣ್ಣಿಮೆಯು ಬಹಳ ವಿಷೇಶವಾಗಿದೆ. ಮದುವೆಯಾದ ಮಹಿಳೆಯರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಉಪವಾಸವನ್ನು ಮಾಡುವುದೂ ರೂಢಿಯಲ್ಲಿದೆ. 

ಮನೆ ಹಾಗೂ ದೇವರನ್ನು ಹೂವು, ಹಣ್ಣು, ರಂಗೋಲಿಗಳಿಂದ ಅಲಂಕರಿಸಿ ಸಿಹಿಯನ್ನು ತಯಾರಿಸಲಾಗುತ್ತದೆ. ಕುಟುಂಬದ ಒಳಿತನ್ನು ಬಯಸಿ ಈ ಪೂಜೆ ನಡೆಯುತ್ತದೆ. ಹೆಂಗಳೆಯರು ರೇಷ್ಮೆ ಸೀರೆಯನ್ನು ಉಟ್ಟು, ಬಂಗಾರವನ್ನು ಧರಿಸಿ, ಹೂವುಗಳನ್ನು ಮುಡಿದು ಸುಂದರವಾಗಿ ಸಿಂಗರಿಸಿಕೊಂಡು ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಜೊತೆಗೆ ಸುಮಧುರ ಗೀತೆಯಿಂದ ಲಕ್ಷ್ಮಿಯನ್ನು ಭಜಿಸುತ್ತಾರೆ. ಹಬ್ಬದಂದು ಒಬ್ಬಟ್ಟು, ಕೋಸುಂಬರಿ, ಪುಳಿಯೊಗರೆ, ಸಾರು, ಬೇಳೆ ಪಲ್ಯಗಳನ್ನು ತಯಾರಿಸಿ ದೇವಿಗೆ ಸಮರ್ಪಿಸುತ್ತಾರೆ ನಂತರ ಕುಟುಂಬಮ ಗೆಳೆಯರೊಟ್ಟಿಗೆ ಊಟದ ಸಂಭ್ರಮವೂ ಇದೆ.   

ಈ ದಿನ ಮಹಾಲಕ್ಷ್ಮೀ ದೇವಿಯನ್ನು ಪೂಜಿಸಿದರೆ ಅಷ್ಟಲಕ್ಷ್ಮಿಯರಾದ ಭೂಮಿ, ಸಂಪತ್ತು, ಸರಸ್ವತಿ, ಪ್ರೀತಿ, ಕೀರ್ತಿ, ಶಾಂತಿ, ತೃಪ್ತಿ, ಶಕ್ತಿ ದೇವತೆಗಳನ್ನು ಪೂಜಿಸಿದ ಫಲವು ದೊರಕುತ್ತದೆ. ಸಂಪತ್ತಿನ ಸಮೃದ್ಧಿಗಾಗಿ ಬೆಳ್ಳಿ,ಬಂಗಾರವನ್ನು ವರಮಹಾಲಕ್ಷ್ಮೀ ಹಬ್ಬದ ಸಂಭ್ರಮದಿಂದ ತೆಗೆದುಕೊಳ್ಳುವ ರೂಢಿಯಿದೆ. 

ವರಮಹಾಲಕ್ಷ್ಮೀ ಹಬ್ಬದ ಸುಸಂದರ್ಭದಲ್ಲಿ ಮಹಾಲಕ್ಷ್ಮಿಯನ್ನು ಪೂಜಿಸಿ ಸುಖ,ಶಾಂತಿ ಸಕಲರೂ ಪಡೆಯಲಿ. ಕೃಷ್ಣಯ್ಯ ಚೆಟ್ಟಿಯವರ ’ಗರುಡಾದ್ರಿ ಮಹಾವಿಷ್ಣು ವರಲಕ್ಷ್ಮೀ’ಯಿಂದ ಆಶಿರ್ವಾದವನ್ನು ಪಡೆಯಿರಿ. ವಿಷ್ಣು ಪುರಾಣದಿಂದ ಪ್ರೇರಿತವಾದ ಈ ಅಪರೂಪದ ಚಿತ್ರಣದಲ್ಲಿ ವಿಷ್ಣುವು ಗರುಡಾದ್ರಿಯ ಜೊತೆಗೆ ಸಾಕಾರಗೊಂಡಿದೆ. ವಿಷ್ಣುವಿನ ವಾಹನ ಗರುಡ ಭಕ್ತಿಯಿಂದ ದೇವರನ್ನು ತನ್ನ ಭುಜದ ಮೇಲೆ ಕೂರಿಸಿಕೊಂಡಿದೆ. ವಿಷ್ಣುವಿನ ಜೊತೆಯಲ್ಲಿ ಕನಕವರ್ಷಿಣಿ ಲಕ್ಷ್ಮೀಯು ಆಸೀನಳಾಗಿದ್ದಾಳೆ. ಮಹಾವಿಷ್ಣುವಿನ ಭಕ್ತರಾದ ಹನುಮಾನ್‌ ಹಾಗೂ ಚಾಮರಧಾರಿ ದೇವತೆಯ ಪಕ್ಕದಲ್ಲಿ ನಿಂತಿದ್ದಾರೆ. 

ಈ ವಿಗ್ರಹದಲ್ಲಿ ಸಂಪತ್ತು, ಸಮೃದ್ಧಿಯ ಸಂಕೇತವಾಗಿ ಮಹಾಲಕ್ಷ್ಮೀ ತನ್ನೆರಡು ಕೈಳಿಂದ ಬಂಗಾರವನ್ನು ದಯಪಾಲಿಸುತ್ತಿದ್ದಾಳೆ. ಶಕ್ತಿ, ರಕ್ಷಣೆ, ಸ್ವಾತಂತ್ರ್ಯದ ಸಂಕೇತ ಗರುಡನ ಕೆತ್ತನೆಯಿದೆ, ಪಕ್ಕದಲ್ಲಿ ನಿಂತು ಗೌರವವನ್ನು ನೀಡುತ್ತಿರುವ ಹನುಮಾನ್‌ ಹಾಗೂ ಚಾಮರಧಾರಿ, ದೇವತೆಯ ಮೂಗುತ್ತಿಯು ದೇವತೆಯ ಆಯುಧವಾಗಿ ಗುರುತಿಸಿಕೊಂಡಿದೆ. ವಿಷ್ಣುವಿನ ಹಿಂದೆ ಶೇಷಶಾಯಿ, ವಿಷ್ಣು ತಿಲಕ, ದೇವಸ್ಥಾನದ ಗೋಪುರ  ಹೀಗೆ ಪ್ರತಿಯೊಂದು ಮಾಹಿತಿಯನ್ನು ಬಹಳ ಸೂಕ್ಷ್ಮವಾಗಿ ಕೆತ್ತಲಾಗಿದೆ.  

ಹಿಂದು ಗ್ರಂಥ ವಿಷ್ಣುಪುರಾಣದ ಆಧಾರವಾಗಿ ಈ ಕೆತ್ತನೆಯನ್ನು ಮಾಡಲಾಗಿದೆ. ವಿಷ್ಣು ಸೂರ್ಯ, ಚಂದ್ರರನ್ನು ಕೈಗಳಲ್ಲಿ ಹಿಡಿದಿರುವುದು ಹಗಲು ಮತ್ತು ರಾತ್ರಿಯ ಮೇಲಿನ ನಿಯಂತ್ರಣವನ್ನು ಸೂಚಿಸುತ್ತದೆ. ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್‌ ಆಫ್‌ ಜ್ಯುವೆಲ್ಲರಿ ಈ ವಿಗ್ರಹವನ್ನು ನೀಡುತ್ತಿದೆ. 

155 ವರ್ಷದ ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್‌ ಆಫ್‌ ಜ್ಯುವೆಲರಿಯ ವ್ಯವಸ್ಥಾಪಕ ನಿರ್ದೇಶಕ, ಹಾಗೂ ನಿರ್ದೇಶಕ ಡಾ.ಸಿ.ವಿನೋದ್ ಹಯಗ್ರೀವ. ವಿಷ್ಣು ಪುರಾಣದ ಪ್ರೇರಣೆಯಿಂದ ಈ ವಿಗ್ರಹದ ಪ್ರತಿಯೊಂದು ಅಂಶವನ್ನು ಕೆತ್ತನೆ ಮಾಡಲಾಗಿದೆ. ವಿಗ್ರಹವು ಈ ವರಮಹಾಲಕ್ಷ್ಮೀ ಹಬ್ಬದಂದು ಮನೆ ಮನೆಯಲ್ಲಿ ಸುಖ, ಸಮೃದ್ಧಿಯನ್ನು ತುಂಬಲಿ.

ತಾಮ್ರ ಮತ್ತು ಬೆಳ್ಳಿಯಿಂದ ಮಾಡಲಾಗಿದೆ. ವಿಷ್ಣುವಿನ ಹಿಂಬಾಗದಲ್ಲಿ ಗೋಪುರ ತಿಲಕಗಳನ್ನು ತಾಮ್ರದಲ್ಲಿ ಸಂಕೀರ್ಣವಾಗಿ ಕೆತ್ತಲಾಗಿದೆ. ವಿಗ್ರಹಗಳು ಬೆಳ್ಳಿಯಿಂದ ಮಾಡಲಾಗಿದೆ ಹಾಗೂ ಲಕ್ಷ್ಮೀ ಬಂಗಾರದ ಲೇಪನದಿಂದ ಕೂಡಿದೆ. 
ತಾಮ್ರ ಮತ್ತು ಬೆಳ್ಳಿಯಿಂದ ಮಾಡಲಾಗಿದೆ. ವಿಷ್ಣುವಿನ ಹಿಂಬಾಗದಲ್ಲಿ ಗೋಪುರ ತಿಲಕಗಳನ್ನು ತಾಮ್ರದಲ್ಲಿ ಸಂಕೀರ್ಣವಾಗಿ ಕೆತ್ತಲಾಗಿದೆ. ವಿಗ್ರಹಗಳು ಬೆಳ್ಳಿಯಿಂದ ಮಾಡಲಾಗಿದೆ ಹಾಗೂ ಲಕ್ಷ್ಮೀ ಬಂಗಾರದ ಲೇಪನದಿಂದ ಕೂಡಿದೆ. 
 ಇದರಲ್ಲಿ 990 ಶುದ್ಧವಾದ ಬೆಳ್ಳಿ ಹಾಗೂ ಮಹಾಲಕ್ಷ್ಮಿಗೆ ಬಂಗಾರದ ಲೇಪನವನ್ನು ಮಾಡಲಾಗಿದೆ. 
 ಇದರಲ್ಲಿ 990 ಶುದ್ಧವಾದ ಬೆಳ್ಳಿ ಹಾಗೂ ಮಹಾಲಕ್ಷ್ಮಿಗೆ ಬಂಗಾರದ ಲೇಪನವನ್ನು ಮಾಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT