ಬುಧವಾರ, ಫೆಬ್ರವರಿ 8, 2023
16 °C

ವಚನಾಮೃತ: ಸೋಲುಗಳನ್ನು ಗೆಲುವಿನ ಮೆಟ್ಟಿಲಾಗಿಸಿ

ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಕೃಪಾಮಯಿ ಶಾರದಾಶ್ರಮ, ವಿಜಯಪುರ Updated:

ಅಕ್ಷರ ಗಾತ್ರ : | |

Prajavani

‘ಅಸ್ಥಿರಂ ಜೀವಿತಂ ಲೋಕೇ

ಅಸ್ಥಿರೇ ಧನ ಯವ್ವನೇ|                                                                             

ಅಸ್ಥಿರಃ ಪುತ್ರ ಧಾರಾಶ್ಚ ಧರ್ಮಕೀರ್ತಿ ದ್ವಯಂ ಸ್ಥಿರಂ||

ನಮ್ಮ ಜೀವಿತ ಸ್ಥಿರವಲ್ಲ: ಧನ, ಯೌವನವೂ ಸ್ಥಿರವಲ್ಲ: ಹಾಗಾದರೆ ಸ್ಥಿರವಾದದ್ದು ಯಾವುದು ಅಂದರೆ ಧರ್ಮಕೀರ್ತಿಗಳು ಮಾತ್ರ. ಶರೀರಗಳು ಕ್ಷೀಣಿಸುವಂತಹವು. ಸಂಪತ್ತು ಶಾಶ್ವತವಲ್ಲ. ಮೃತ್ಯು ಯಾವಾಗಲೂ ಸಮೀಪದಲ್ಲೇ ಹೊಂಚಿ ಕುಳಿತಿರುತ್ತದೆ. ಇದ್ದಷ್ಟು ದಿನ ಧರ್ಮ ಕಾರ್ಯಗಳನ್ನು ಮಾಡಬೇಕು. ಪ್ರಪಂಚಕ್ಕೆ ಆಂಟಿಕೊಳ್ಳುವುದಕ್ಕಿಂತ ಭಗವಂತನಿಗೆ ಅಂಟಿಕೊಳ್ಳಿ. ಆಗ ಶಕ್ತಿ ಲಭಿಸುವುದು.

‘ನಮಗೆ ಅಳಲು ಸಮಯವಿಲ್ಲ’ ಎಂದು ವಿವೇಕಾನಂದರು  ಹೇಳುತ್ತಿದ್ದರು. ನಾವು ಕ್ರಿಯಾಶೀಲರಾಗಬೇಕು. ಅದೇ ನಿಜವಾದ ಪರಾಕ್ರಮ.

ನಮಗೆ ಸಮತೋಲನ ಬೇಕು, ಆಂತರಿಕ ಸಮನ್ವಯ ಬೇಕು, ನಮ್ಮ ಬಗ್ಗೆ, ಪ್ರಪಂಚದ ಬಗ್ಗೆ ನಮ್ಮ ದೃಷ್ಟಿಕೋನ ಬದಲಾಗಬೇಕು. ಜೀವನದ ಕಷ್ಟಗಳು ನಿಜವಾಗಿಯೂ ನಮಗೆ ಸಹಾಯಮಾಡುತ್ತವೆ. ಸೋಲನ್ನೇ ವಿಜಯವನ್ನಾಗಿ ಪರಿವರ್ತಿಸಲು ಪ್ರಯತ್ನಿಸಿ. ಪ್ರಪಂಚಕ್ಕೆ ನಾವು ಅಂಟಿಕೊಂಡರೆ ಅದನ್ನು ನಾವು ಮೀರಿ ಹೋಗಲಾರೆವು. ಶಕ್ತಿಯೊಡನೆ ದಯೆ ಮತ್ತು ಸಹಾನುಭೂತಿ ಇರಬೇಕು. ನಿಜವಾದ ಶಕ್ತಿ ಶಾಲಿಗಳು ದಯೆ ಮತ್ತು ಸಹಾನುಭೂತಿ ಉಳ್ಳವರಾಗಿರುತ್ತಾರೆ.

ಜೀವನದ ತಪ್ಪು ದೃಷ್ಟಿಕೋನದಿಂದ ಮಾನಸಿಕ ದುಗುಡ ಉಂಟಾಗುತ್ತದೆ. ಸರಿಯಾದ ಮಾನಸಿಕ ದೃಷ್ಟಿ, ಬೌದ್ಧಿಕ ದೃಷ್ಟಿಯಿಂದ ಜೀವನದ ವಾಸ್ತವತೆಗಳನ್ನು ಎದುರಿಸಿ. ಯಾವುದರಿಂದಲೂ ವಿಚಲಿತರಾಗದಿರಲು ಕಲಿಯಿರಿ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು