ಗುರುವಾರ , ಜೂನ್ 4, 2020
27 °C

ವಾರ ಭವಿಷ್ಯ | 10-5-2020ರಿಂದ 16–5–2020 ರವರೆಗೆ

ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಈ ಭವಿಷ್ಯ ರಾಶಿಯನ್ನು ಅವಲಂಬಿಸಿದೆ

ಮೇಷ

ಹಣಕಾಸಿನ ಸ್ಥಿತಿಯು ಉತ್ತಮವಾಗುತ್ತಾ ಹೋಗುತ್ತದೆ .ಇದುವರೆಗೂ ಸವೆಸಿದ ದಾರಿಗಳಿಗಿಂತ ಬೇರೆ ದಾರಿಯನ್ನೇ ಆಯ್ಕೆ ಮಾಡಿಕೊಂಡು ಮುಂದುವರೆಯುವಿರಿ . ನಿಮ್ಮದೇ ಆದ ಪ್ರತ್ಯೇಕ ಪ್ರಯತ್ನಗಳು ಫಲ ಕೊಟ್ಟು ಉದ್ಯಮದಲ್ಲಿ ಮುಂದುವರೆಯುವಿರಿ. ಸರ್ಕಾರದ ಸೌಲತ್ತುಗಳು ಸರಾಗವಾಗಿ ಹರಿದುಬರುತ್ತದೆ. ಉದ್ಯಮಿಗಳಿಗೆ ತೆರಿಗೆ ಅಧಿಕಾರಿಗಳ ಕಾಟಬರಬಹುದು. ಮಹತ್ವದ ದಿನಗಳನ್ನು ಎದುರು ನೋಡುತ್ತಿರುವ ನಿಮಗೆ ಹೊಸ ಜವಾಬ್ದಾರಿ ಹೆಗಲೇರುತ್ತದೆ.

ವೃಷಭ

ಧನ ಸಂಗ್ರಹ ನಿಮ್ಮ ಆಕಾಂಕ್ಷೆಗೆ ತಕ್ಕಂತೆ ಇರುತ್ತದೆ. ಮಕ್ಕಳ ವಿಷಯದಲ್ಲಿ ಸಂತೋಷಕರ ವಾತಾವರಣ ಇರುತ್ತದೆ. ಎದುರಾಗುವ ಅನಿರೀಕ್ಷಿತ ಟೀಕೆಗಳನ್ನು ಧೈರ್ಯದಿಂದ ಎದುರಿಸಿರಿ. ವ್ಯಾಜ್ಯಗಳಿದ್ದರೂ ಧೈರ್ಯದಿಂದ ಎದುರಿಸಿರಿ. ಸಹೋದರನ ವ್ಯವಹಾರದಲ್ಲಿ ತಲೆ ಹಾಕಿದರೆ ನಿಮಗೆ ನಷ್ಟ. ನಿಮ್ಮ ಕೆಲಸಗಳಲ್ಲಿ ಇದ್ದ ಮಂದಗತಿ ಹೋಗಿ ಚುರುಕಾಗಿ ಫಲಿತಾಂಶ ಬರುವುದು. ವಿದೇಶಗಳಲ್ಲಿ ಉದ್ಯೋಗದಲ್ಲಿರುವವರಿಗೆ ಮದುವೆ ಕೂಡಿಬರುವ ಸಂದರ್ಭ ನಿಚ್ಚಳವಾಗಿ ಕಾಣುತ್ತಿದೆ.

ಮಿಥುನ

ಸಾಲ ತೆಗೆದುಕೊಂಡವರ ಬಗ್ಗೆ ನಿಷ್ಠುರವಾಗಿ ವರ್ತಿಸದೆ ವಿಧಿಯಿಲ್ಲ. ಕಠಿಣ ಪರಿಶ್ರಮ ನಂಬಿಕೆಯಿಂದ ಮಾಡಿದ ಕೆಲಸಗಳು ಉತ್ತಮ ಫಲಿತಾಂಶವನ್ನು ನೀಡುತ್ತವೆ. ಬರಬೇಕಾಗಿದ್ದ ಪಿತ್ರಾರ್ಜಿತ ಆಸ್ತಿಗಳು ಒದಗಿಬರುತ್ತವೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಮುಖ್ಯಾಧಿಕಾರಿ ಅನವಶ್ಯಕ ಕೋಪವನ್ನು ತೋರಿಸಿದರೂ ತಾಳ್ಮೆಯಿಂದ ಇರುವುದು ಒಳಿತಾಗುತ್ತದೆ. ಹಳೆಯ ಕಡತಗಳನ್ನು ಬಿಸಾಡುವಾಗ ಒಮ್ಮೆ ಪರಿಶೀಲಿಸಿ. ಕೆಲವರು ನೀಡುವ ಪೊಳ್ಳು ಭರವಸೆಗಳನ್ನು ನಂಬಬೇಡಿ, ಇದರಿಂದ ಮೋಸಹೋಗುವ ಸಾಧ್ಯತೆ ಹೆಚ್ಚು.

ಕಟಕ

ಸ್ನೇಹಿತರ ಸಹಕಾರ ಮತ್ತು ಮಾರ್ಗದರ್ಶನ ನಿಮಗೆ ಹೊಸ ಹುರುಪು ತರುತ್ತದೆ. ಶೀತ ಭಾದೆಯನ್ನು ಭಾದೆಯನ್ನು ಅಲಕ್ಷಿತಬೇಡಿ. ದನದ ಒಳಹರಿವು ಉತ್ತಮವಾಗಿರುತ್ತದೆ. ಆದರೂ ಖರ್ಚಿಗೆ ಮಿತಿ ಹೇರುವುದು ಅಗತ್ಯ. ಮನೆಯಲ್ಲಿ ವಿನಾಕಾರಣ ಜಗಳ ಮಾಡಿ ಶಾಂತಿಯನ್ನು ನಿರ್ಮಿಸ ಬೇಡಿರಿ. ಉದ್ಯೋಗದಲ್ಲಿ ಅಭಿವೃದ್ಧಿಯ ಸೂಚನೆಗಳು ದಟ್ಟವಾಗಿ ಕಾಣುತ್ತದೆ. ಸ್ತ್ರೀಯರ ಸಿದ್ಧಪಡಿಸಿದ ಉಡುಪುಗಳನ್ನು ಮಾರುವವರಿಗೆ ವ್ಯಾಪಾರದ ವೃದ್ಧಿಯ ಜೊತೆಗೆ ಲಾಭವೂ ಹೆಚ್ಚುವುದು.

ಸಿಂಹ

ನಿಮ್ಮ ಅಮೂಲ್ಯ ದಾಖಲೆಗಳನ್ನು ಸ್ವಲ್ಪ ಜೋಪಾನವಾಗಿ ನೋಡಿಕೊಳ್ಳಿ. ಮುಂದಿನ ಪ್ರಮುಖ ಯೋಜನೆಗಳ ಪೂರ್ವಭಾವಿ ವಿಚಾರವನ್ನು ಈಗ ಮಾಡಬಹುದು. ಹಿರಿಯರೊಡನೆ ಮನಸ್ತಾಪ ಮಾಡಿಕೊಳ್ಳಬೇಡಿರಿ. ಮೂಳೆಯ ತೊಂದರೆಗಳನ್ನು ಅಲಕ್ಷಿತ ಬೇಡಿ ಮತ್ತು ಸ್ವಯಂವೈದ್ಯ ಬೇಡ. ಮಕ್ಕಳ ಅಭಿವೃದ್ಧಿ ನಿರೀಕ್ಷೆಗೆ ಮೀರಿ ಇರುತ್ತದೆ. ಸ್ನೇಹಿತರೊಡನೆ ಪ್ರವಾಸ ಹೋಗುವ ಸಾಧ್ಯತೆಯಿದೆ. ಕೃಷಿಕರಿಗೆ ಸಿಗಬೇಕಾಗಿದ್ದ ಸರ್ಕಾರಿ ಸಹಾಯಧನಗಳು ಈಗ ಬರುತ್ತವೆ. ತಂದೆಯಿಂದ ಧನಸಹಾಯದ ಜೊತೆಗೆ ಮಾರ್ಗದರ್ಶನ ಸಹ ಸಿಗುತ್ತದೆ.

ಕನ್ಯಾ

ಅತಿ ಒತ್ತಡ ಹೇರಿ ಸಾಲ ಪಡೆಯುವವರು ನಿಮ್ಮನ್ನು ಕಷ್ಟಕ್ಕೆ ಸಿಲುಕಿಸುವರು. ಬಹಳ ದಿನದ ಆಸೆಯೊಂದು ಈಗ ಈಡೇರಿ ಒಂದು ದೊಡ್ಡ ಸಮಸ್ಯೆಯೂ ಪರಿಹಾರವಾಗುತ್ತದೆ.ನೆರೆಹೊರೆಯವರ ಜೊತೆ ಮಾತುಕತೆಯು ಸ್ನೇಹಪೂರ್ಣವಾಗಿರಲಿ. ಹೊಸ ಯೋಜನೆಗಳನ್ನು ಆರಂಭಿಸುವ ಮುನ್ನ ಸಾಕಷ್ಟು ಪರಿಶೀಲಿಸಿರಿ. ಈ ಹಿಂದೆ ನೀವು ಹಿಯಾಳಿಸಿದ್ದ ಜನರ ಬಳಿ ಸಹಾಯ ಪಡೆಯಲು ಹೋಗಬೇಕಾಗುತ್ತದೆ. ಮಕ್ಕಳ ಪ್ರಗತಿಯ ಉತ್ತಮವಾಗಿರುತ್ತದೆ. ಹಣಕಾಸಿನ ಸ್ಥಿತಿ ಸಾಮಾನ್ಯವಾಗಿರುತ್ತದೆ.

ತುಲಾ

ನಿಮ್ಮ ವೈರಿಗಳ ಕುರಿತು ಎಚ್ಚರಿಕೆ ಇರಲಿ. ಅವರು ನಿಮ್ಮಎಲ್ಲ ನಡೆಗಳನ್ನು ಪರಿಶೀಲಿಸುತ್ತಿರುವರು. ಧನದ ಒಳಹರಿವು ಸಾಮಾನ್ಯವಾಗಿರುತ್ತದೆ. ಅತಿಯಾದ ಖರ್ಚು ಒಳ್ಳೆಯದಲ್ಲ. ನಿಮ್ಮ ಆಸ್ತಿಯ ವಿವರಗಳನ್ನು ತಿಳಿದ ಸ್ನೇಹಿತರು ನಿಮ್ಮನ್ನು ಆಟ ಆಡಿಸುವರು. ನೀವು ಆರಂಭಿಸಿದ ವ್ಯವಹಾರಗಳಲ್ಲಿ ಆದಾಯಕ್ಕೆ ಹೊಸ ಮಾರ್ಗ ಗೋಚರಿಸುವುದು. ವಿದೇಶದಲ್ಲಿರುವ ಕೆಲವರ ಉದ್ಯೋಗಗಳು ಖಾಯಂ ಆಗುವ ಸೂಚನೆಯಿದ್ದು ವೇತನ ಏರಿಕೆಯು ಆಗುವ ಎಲ್ಲಾ ಲಕ್ಷಣಗಳಿವೆ.

ವೃಶ್ಚಿಕ

ಹೊಗಳುವ ಮಂದಿಯನ್ನು ಎಂದೂ ನಂಬಬೇಡಿ. ಇವರು ನಿಮಗೆ ಮೋಸ ಮಾಡಲೆಂದೇ ಬರುವರು. ಹಿರಿಯರೊಬ್ಬರು ಸಕಾಲದಲ್ಲಿ ಎಚ್ಚರಿಸಿ ನಿಮ್ಮನ್ನು ಸರಿದಾರಿಗೆ ತರುವರು. ತಾಯಿಯಿಂದ ಧನಸಹಾಯ ಒದಗಿಬರುತ್ತದೆ. ಬಹಳ ದಿನದಿಂದ ಕಾಯುತ್ತಿದ್ದ ಯೋಜನೆಗೆ ಸರ್ಕಾರದ ಅನುಮೋದನೆ ದೊರೆಯುತ್ತದೆ. ಸಾಹಸ ವೃತ್ತಿಯನ್ನು ಮಾಡುವವರಿಗೆ ಉತ್ತಮ ಅವಕಾಶ ಮತ್ತು ವೇತನ ದೊರೆಯುತ್ತದೆ. ಸಂಗಾತಿ ನಡೆಸುವ ವ್ಯಾಪಾರಗಳಲ್ಲಿ ಲಾಭ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಸಾಮಾನ್ಯವಾದ ವಾರ.

ಧನಸ್ಸು

ಪದೇ ಪದೇ ಪ್ರಯತ್ನಿಸುತ್ತಿದ್ದ ಕೆಲಸವೊಂದು ಈಡೇರಿ ಸಂತೋಷವಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಬಿಗಿಧೋರಣೆ ತಳೆಯುವುದು ಅತಿ ಅಗತ್ಯ. ಧನದ ಒಳಹರಿವು ಉತ್ತಮವಾಗಿರುತ್ತದೆ. ಶೃಂಗಾರ ವಸ್ತುಗಳನ್ನು ಮಾರಾಟ ಮಾಡುವವರಿಗೆ ವ್ಯಾಪಾರ ಹೆಚ್ಚು. ಹಿರಿಯರು ಮಾತನಾಡುವಾಗ ಸ್ವಲ್ಪ ನಿಗಾ ಇರಲಿ,ವಿನಾಕಾರಣ ಯಾರನ್ನೂ ದೂಷಿಸುವುದು ಬೇಡ. ನಿಮ್ಮದೇ ಆದ ಸ್ಥಿರಾಸ್ತಿಯನ್ನು ಹೊಂದುವ ವಿಚಾರದಲ್ಲಿ ಶುಭ ಸಮಾಚಾರವಿದೆ. ಅದಕ್ಕೆ ಪೂರಕವಾದ ಧನಸಹಾಯ ಒದಗಿಬರುತ್ತದೆ.

ಮಕರ

ಬಹಳ ದಿನಗಳ ಕನಸೊಂದು ಈಗ ಈಡೇರುವ ಕಾಲ. ಹಣಕಾಸಿನ ಸ್ಥಿತಿಯು ಬಹಳ ಉತ್ತಮವಾಗಿ ಇರುತ್ತದೆ. ಸಂಗಾತಿಯ ಸಲಹೆಗಳು ಬಹಳ ಉಪಯುಕ್ತವಾಗಿರುತ್ತದೆ. ಅವಿವಾಹಿತರಿಗೆ ವಿವಾಹ ಒದಗಿಬರುವ ಸಂದರ್ಭ. ನೀವು ನಿರೀಕ್ಷಿಸಿದ್ದ ಆರ್ಥಿಕ ಸಹಾಯ ಒದಗಿ ನಿಮ್ಮ ಉದ್ದಿಮೆ ಬೆಳೆಯುತ್ತದೆ. ಕೃಷಿಕರಿಗೆ ಉತ್ತಮ ಆದಾಯ ಬರುತ್ತದೆ. ದಿನಸಿ ವ್ಯಾಪಾರಿಗಳ ವಹಿವಾಟು ವಿಸ್ತರಿಸುತ್ತದೆ. ತಾಯಿಗಾಗಿ ಸ್ವಲ್ಪ ಹಣ ಖರ್ಚು ಮಾಡುವಿರಿ. ಮಕ್ಕಳಿಂದ ನಿಮಗೆ ಗೌರವ ಒದಗಿಬರುತ್ತದೆ.

ಕುಂಭ

ಉದ್ಯೋಗದಲ್ಲಿರುವ ಯುವಕರು ಗ್ರಾಹಕರಿಗೆ ತೋರಿಸುವ ಉಡಾಫೆ ನಡವಳಿಕೆ ಅವರಿಗೆ ಮುಳುವಾಗುವುದರ ಜೊತೆಗೆ ಉದ್ಯೋಗ ನಷ್ಟದ ಭೀತಿ ಎದುರಾಗುತ್ತದೆ. ಧನದ ಒಳಹರಿವು ನಿರೀಕ್ಷೆಗೆ ಮೀರಿ ಇರುತ್ತದೆ. ಮಠಮಾನ್ಯಗಳನ್ನು ನಡೆಸುವವರಿಗೆ ಸಹಾಯದ ಜೊತೆಗೆ ಗೌರವ ಸಹ ದೊರೆಯುತ್ತದೆ. ವಿದೇಶಿ ವ್ಯವಹಾರಗಳಲ್ಲಿ ಹೆಚ್ಚು ಧನ ಹೂಡಿಕೆ ಮಾಡುವುದು ಬೇಡ. ಹೈನುಗಾರಿಕೆಯನ್ನು ಮಾಡುತ್ತಿರುವವರಿಗೆ ತಳಿ ಸಂರಕ್ಷಣೆ ಮಾಡುವ ಅವಕಾಶ ದೊರೆಯುತ್ತದೆ ಹಾಗೂ ಆದಾಯದಲ್ಲಿ ಏರಿಕೆಯಾಗುತ್ತದೆ.

ಮೀನ

ಹಮ್ಮಿಕೊಳ್ಳುವ ಕೆಲಸಗಳಲ್ಲಿ ಯಶಸ್ಸು ಇರುತ್ತದೆ. ಹದಗೆಟ್ಟಿದ್ದ ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಆಸ್ತಿ ಖರೀದಿ ಮಾಡಲು ಯತ್ನಿಸುತ್ತಿದ್ದ ಹಣಕಾಸಿನ ಸಹಾಯ ಈಗ ಸಿಗುತ್ತದೆ. ಮನೆಪಾಠ ಮಾಡುವವರಿಗೆ ಆದಾಯದಲ್ಲಿ ಸಾಕಷ್ಟು ಏರಿಕೆ. ಉದ್ದಿಮೆದಾರರಿಗೆ ಸರ್ಕಾರದಿಂದ ಇದ್ದ ತೊಡಕು ನಿವಾರಣೆಯಾಗುತ್ತದೆ. ಮಕ್ಕಳಿಂದ ಸ್ವಲ್ಪ ಒತ್ತಡವನ್ನು ಎದುರಿಸಬೇಕಾಗುತ್ತದೆ. ಒಡ ಹುಟ್ಟಿದವರು ನಿಮ್ಮ ಆಸ್ತಿಯ ಬಗ್ಗೆ ಕರುಬುವರು. ವೃತ್ತಿಯಲ್ಲಿ ಸ್ವಲ್ಪ ಹಿತ ಶತ್ರುಗಳ ಕಾಟವಿರುತ್ತದೆ.

***

ಡಾ.ಎಂ.ಎನ್.ಲಕ್ಷ್ಮೀನರಸಿಂಹಸ್ವಾಮಿ, ಮಾದಾಪುರ, ಜ್ಯೋತಿಷ್ಯ ಪದ್ಮಭೂಷಣ

ಸಂಪರ್ಕ: 8197304680

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.