ಮಂಗಳವಾರ, ಜೂನ್ 22, 2021
27 °C

ವಾರ ಭವಿಷ್ಯ | 2-8-2020ರಿಂದ 8-8-2020ರವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ  

ಸಂಪರ್ಕ: 8197304680

***

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)

ವಿದ್ಯಾರ್ಥಿಗಳಿಗೆ ಉತ್ತಮ ಕಾಲ. ಹೊಸ ಹೊಸ ವಿಷಯಗಳ ಮಾಹಿತಿ ದೊರಕುತ್ತದೆ. ನಿಮ್ಮ ದುಡಿಮೆಯ ಹಣ ಸಂಗಾತಿಯ ಕಡೆಯ ಹಿರಿಯರ ಆರೋಗ್ಯಕ್ಕಾಗಿ ಖರ್ಚಾಗುವುದು. ಆಸ್ತಿ ವಿವಾದಗಳು ಪರಿಹಾರದತ್ತ ಬರುತ್ತವೆ. ಮಕ್ಕಳ ಸುಖಕ್ಕಾಗಿ ಹಣ ಖರ್ಚಾಗುವುದು. ಕೈ ಕಾಲು ನೋವು ಕಾಣಿಸಬಹುದು. ಹಿರಿಯರು ಸಣ್ಣ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಳ್ಳಬೇಡಿ, ಇದರಿಂದ ದೂರು ಬರುವ ಸಾಧ್ಯತೆ ಇದೆ. ವೃತ್ತಿಯಲ್ಲಿ ನಿಧಾನಗತಿಯ ಪ್ರಗತಿ ಕಾಣಬಹುದು.

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ವಿದೇಶದಲ್ಲಿರುವವರಿಗೆ ಮದುವೆ ಸಂಬಂಧಗಳ ಬಗ್ಗೆ ವಿಷಯಗಳು ಕೇಳಿ ಬರಬಹುದು. ಒಡಹುಟ್ಟಿದವರ ಜೊತೆ ಅನ್ಯೋನ್ಯತೆ ಹೆಚ್ಚುತ್ತದೆ. ಮನೆ ಕಟ್ಟುವ ಆಸೆ ಕೆಲದಿನ ಮುಂದೂಡಿ. ಚಿಕ್ಕಮಕ್ಕಳಿಗೆ ಆಹಾರ ವ್ಯತ್ಯಾಸದಿಂದ ಆರೋಗ್ಯ ತಪ್ಪುವ ಸಾಧ್ಯತೆ. ಕೆಲವು ಕೆಲಸಗಳು ಪೂರ್ಣವಾಗದೆ ಮನಸ್ಸಿಗೆ ಕಿರಿಕಿರಿ ಎನಿಸಬಹುದು. ಕೌಟುಂಬಿಕ ಖರ್ಚುಗಳು ಏರುವ ಸಾಧ್ಯತೆ. ಹಿರಿಯರ ಕೃಷಿಭೂಮಿ ಕೊಳ್ಳುವ ಯೋಗವಿದೆ. ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆಯಿಂದ ಸಂಪಾದನೆ ಹೆಚ್ಚುತ್ತದೆ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ನಿಂತಿದ್ದ ಸರ್ಕಾರಿ ಅನುದಾನ ಬರಲಾರಂಭಿಸುತ್ತದೆ. ಮಾತನಾಡುವಾಗ ಎಚ್ಚರವಹಿಸಿ. ರಾಜಕೀಯ ವ್ಯಕ್ತಿಗಳಿಗೆ ಅನಿರೀಕ್ಷಿತ ದೂರು ಬರುವ ಸಾಧ್ಯತೆ ಇದೆ. ಖರ್ಚು ಹೆಚ್ಚಾದರೂ ಅದನ್ನು ತೂಗಿಸುವಷ್ಟು ಧನ ಬರುತ್ತದೆ. ಅವಿವಾಹಿತರಿಗೆ ವಿವಾಹ ಸಾಧ್ಯತೆಯಿದೆ. ಅಷ್ಟಮ ಶನಿಯಿಂದ ವ್ಯಾಪಾರ-ವ್ಯವಹಾರದಲ್ಲಿ ನಿಧಾನಗತಿ. ಕೌಟುಂಬಿಕ ಸಮಸ್ಯೆಗಳು ಕೆಲವು ಬಗೆಹರಿದರೂ ಮತ್ತೆ ಕೆಲವು ಕಾಡುತ್ತವೆ. ಭೂಮಿ ಕೊಳ್ಳುವಾಗ ಎಚ್ಚರ ಇರಲಿ, ದಾಖಲೆಗಳಲ್ಲಿ ಮೋಸ ಹೋಗುವ ಸಾಧ್ಯತೆ ಇದೆ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)

ಆತ್ಮಗೌರವಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುವಿರಿ. ಹಣದ ಒಳಹರಿವು ನಿಧಾನವಾಗಿ‌ ವೃದ್ಧಿಸಲಿದೆ. ಮನೆಯ ಕಾರ್ಯಗಳಿಗೆ ಒಡಹುಟ್ಟಿದವರು ಬರಬಹುದು. ಕೃಷಿ ವಿದ್ಯಾರ್ಥಿಗಳಿಗೆ ಸಂಶೋಧನೆಯ ಅವಕಾಶ ಸಿಗಲಿದೆ. ತಂದೆ-ಮಕ್ಕಳ ಸಂಬಂಧದಲ್ಲಿ ಸ್ವಲ್ಪ ಮುಸುಕಿನ ಗುದ್ದಾಟ ಇರುತ್ತದೆ. ಬೇಗನೆ ಕೆಲಸ ಮುಗಿಸುವ ಆತುರ ಒಳಿತಲ್ಲ. ಉದ್ಯೋಗದಲ್ಲಿ ಕೆಲವರಿಗೆ ದೂರದ ಊರಿಗೆ ವರ್ಗಾವಣೆಯ ಸಾಧ್ಯತೆಗಳಿವೆ. ಕೆಲವು ಜನರು ಸಲಹೆ ಮತ್ತು ಸಹಕಾರಗಳಿಗಾಗಿ ನಿಮ್ಮ ಬಳಿ ಬರುವರು.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) 

ಹಣದ ಹರಿವು ನಿರೀಕ್ಷಿಸಿದಷ್ಟು ಬರದಿದ್ದರೂ ಬೇರೆ ಮೂಲದಿಂದ ಸ್ವಲ್ಪ ಬರುತ್ತದೆ. ಸಹೋದರರ ವ್ಯವಹಾರದಲ್ಲಿ ನಿಮಗೂ ಭಾಗವಹಿಸುವ ಅವಕಾಶ ಸಿಗುತ್ತದೆ. ಕ್ಷಿಪಣಿ ತಂತ್ರಜ್ಞಾನ ಅಭಿವೃದ್ಧಿಪಡಿಸುವವರಿಗೆ ಮುನ್ನಡೆ. ಆಡಳಿತಾತ್ಮಕ ಹುದ್ದೆಗಳಲ್ಲಿರುವ ಅಧಿಕಾರಿಗಳಿಗೆ ಪ್ರಸಂಶೆ ದೊರೆಯುತ್ತದೆ. ನೀವು ಮಾಡಿದ ಕೆಲಸ ಮಾತ್ರ ಸರಿ ಬೇರೆಯವರದು ತಪ್ಪು ಎಂಬ ಭಾವನೆ ಬೇಡ, ಎಲ್ಲರನ್ನೂ ಪ್ರೋತ್ಸಾಹಿಸಿದಲ್ಲಿ ನಿಮ್ಮ ಕೆಲಸಗಳು ಸುಲಭವಾಗುತ್ತವೆ. ಆಹಾರದ ವ್ಯತ್ಯಾಸದಿಂದ ಹೊಟ್ಟೆಯಲ್ಲಿ ವಾಯು ಪ್ರಕೋಪ ಕಾಣಿಸಲಿದೆ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಸರ್ಕಾರಿ ಮಟ್ಟದಲ್ಲಿ ನಿಮ್ಮ ಕೆಲಸಗಳು ಸುಲಭವಾಗಿ ಆಗುತ್ತವೆ. ವಿದೇಶಿ ಕಂಪನಿಗಳಿಗೆ ವಸ್ತುಗಳನ್ನು ಪೂರೈಸುತ್ತಿದ್ದವರಿಗೆ ಪುನಃ ಅವಕಾಶ ಸಿಗಲಿದೆ. ಕೃಷಿಕರಿಗೆ ಇದ್ದ ಕೆಲವು ತೊಂದರೆ ನಿವಾರಣೆಯಾಗಿ ಸಹಾಯಧನ ಸಿಗಲಿದೆ. ಮಕ್ಕಳ ಬಗ್ಗೆ ಬೇರೆಯವರು ದೂಷಿಸಬಹುದು, ಮಕ್ಕಳ ಬಗ್ಗೆ ವಿಶೇಷ ಗಮನ ಅಗತ್ಯ. ಸಂಗಾತಿಯ ವರ್ಗಾವಣೆ ಕೊನೆ ಕ್ಷಣಗಳಲ್ಲಿ ನಿಲ್ಲಬಹುದು. ಬೇರೆಯವರ ವಿಚಾರದಲ್ಲಿ ತಲೆ ಹಾಕದಿರುವುದು ಸೂಕ್ತ. ಸಮಯ ಮತ್ತು ಜನರೊಂದಿಗೆ ಹೊಂದಿಕೊಂಡಲ್ಲಿ ಜೀವನ ಸರಾಗ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಧಾರ್ಮಿಕ ಪ್ರಜ್ಞೆ ಹೆಚ್ಚು ಜಾಗೃತವಾಗಲಿದೆ. ಕೃಷಿ ಭೂಮಿ ಹದಗೊಳಿಸುವಿಕೆ ನಿಧಾನವಾಗಬಹುದು. ಪ್ರಮುಖ ದಾಖಲೆಗಳಲ್ಲಿನ ವ್ಯತ್ಯಾಸ ಸರಿಯಾಗಲು ಸಮಯ ಬೇಕಾಗುತ್ತದೆ. ಆಗಾಗ ಮಾನಸಿಕ ಒತ್ತಡ ಮತ್ತು ಉದಾಸೀನತೆ ಅನುಭವಕ್ಕೆ ಬರುತ್ತದೆ. ಕಾರ್ಯಕ್ಷೇತ್ರಗಳಲ್ಲಿ ನಿಮ್ಮ ಕೈಕೆಳಗಿನ ಕೆಲಸಗಾರರೊಂದಿಗೆ ಹೊಂದಾಣಿಕೆ ಮುಖ್ಯ. ಆಭರಣ ತಯಾರಕರಿಗೆ ನಿಂತಿದ್ದ ಬೇಡಿಕೆ ಈಗ ಪುನಃ ಆರಂಭವಾಗುತ್ತದೆ. ಸಂಗಾತಿಯ ಜೊತೆಗೆ ವಾದ-ವಿವಾದ ಆಗಬಹುದು.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)  

ಬಂಧು ಮಿತ್ರರ ಸಹಕಾರದಿಂದ ವ್ಯಾಪಾರ ಮತ್ತು ವ್ಯವಹಾರ ಕುದುರುತ್ತವೆ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ಸೂಕ್ತ ಮಾಹಿತಿ ದೊರೆಯುತ್ತದೆ. ನಿಮ್ಮ ಸಮಸ್ಯೆಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಅದಕ್ಕೆ ಪರಿಹಾರ ದೊರೆಯುವ ಸಾಧ್ಯತೆಯಿದೆ. ದೂರ ಪ್ರಯಾಣ ಸದ್ಯಕ್ಕೆ ಬೇಡ. ವೈರಿಗಳನ್ನು ಮಣಿಸಲು ನೀವು ಹೂಡುವ ತಂತ್ರಗಳು ಫಲಿಸುತ್ತವೆ. ಮಕ್ಕಳ ಏಳಿಗೆಯು ಉತ್ತಮ. ಹಿರಿಯರಿಂದ ನಿಮ್ಮ ವ್ಯವಹಾರಕ್ಕೆ ಧನಸಹಾಯವಾಗಲಿದೆ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)

ಪಾಲುದಾರರ ಸಹಕಾರದಿಂದ ವ್ಯವಹಾರಗಳು ಸುಸ್ಥಿತಿಗೆ ಬರುತ್ತವೆ. ಅವಿವಾಹಿತರಿಗೆ ಕಂಕಣ ಬಲ ಬರಲಿದೆ. ಧನದ ಒಳಹರಿವು ನಿಧಾನ. ಸ್ಥಿರಾಸ್ತಿ ಖರೀದಿ ಯತ್ನ ಮುಂದುವರಿಸಬಹುದು. ಮಕ್ಕಳ ಪ್ರಗತಿಯಲ್ಲಿ ಸಂತೋಷ ಪಡುವಿರಿ. ಹಿರಿಯರು ಆಡುವ ಕುಹಕದ ಮಾತುಗಳು ಅವರಿಗೇ ತಿರುಗು ಬಾಣವಾಗಬಹುದು. ಸಂಗಾತಿಯೊಡನೆ ಮುನಿಸು ಬಂದರೂ ನಂತರ ವಾತಾವರಣ ತಿಳಿಯಾಗುವುದು. ವೃತ್ತಿಯಲ್ಲಿ ಹಿರಿಯರ ಸಹಾಯ ದೊರೆತು, ತೊಂದರೆಗಳು ನಿವಾರಣೆಯಾಗುತ್ತವೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)  

ನಿರುದ್ಯೋಗಿಗಳಿಗೆ ಉದ್ಯೋಗದ ಸಾಧ್ಯತೆಗಳು ನಿಚ್ಚಳ. ಹಿತಶತ್ರುಗಳಿಂದ ಸ್ವಲ್ಪ ಸಮಸ್ಯೆ ಬರಬಹುದು. ಉದ್ಯೋಗದಲ್ಲಿ ಅನಿರೀಕ್ಷಿತ ಪ್ರಗತಿ ಕಾಣಬಹುದು. ವ್ಯಾಪಾರಿಗಳಿಗೆ ನಿಧಾನಗತಿಯ ವ್ಯವಹಾರ ವೃದ್ಧಿ. ಈ ಹಿಂದೆ ಅನಾದರ ಮಾಡಿದ್ಡವರೇ ಈಗ ನಿಮ್ಮಲ್ಲಿ ಸಹಾಯಕ್ಕಾಗಿ ಬರುವರು. ಪಶುಸಂಗೋಪನೆಯವರಿಗೆ ಬೆಳವಣಿಗೆ ಇದೆ. ಸರ್ಕಾರಿ ಕೆಲಸಗಳಲ್ಲಿ ಸ್ವಲ್ಪ ಹಿನ್ನಡೆ ಇರಬಹುದು. ಧರ್ಮ ವಿದ್ಯೆಗಳಲ್ಲಿ ಮತ್ತು ದೇವತಾ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ಮೂಡುತ್ತದೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ನೆರೆಹೊರೆಯವರ ಸೌಹಾರ್ದ ಸಹಕಾರದಿಂದ ಬಾಕಿ ಕೆಲಸ ಮುಗಿಸಬಹುದು. ಅಂತರಂಗದ ಗುಟ್ಟು ಹಂಚಿಕೊಳ್ಳಬೇಡಿ. ನಿಮ್ಮ ಕೆಲವು ಕೆಲಸಗಳು ನಿಧಾನವಾದರೂ ಫಲಿತಾಂಶ ಬಂದು ಧನ ಸಹಾಯವಾಗುತ್ತದೆ. ಚಿನ್ನ-ಬೆಳ್ಳಿಯ ವರ್ತಕರು ವ್ಯಾಪಾರದಲ್ಲಿ ಎಚ್ಚರ ವಹಿಸಿ. ಕಳ್ಳತನದ ಸಾಧ್ಯತೆಯಿದೆ. ಕೃಷಿಕರ ಬೆಳೆಗೆ ಉತ್ತಮ ಬೆಲೆ ಸಿಗುವ ಲಕ್ಷಣಗಳಿವೆ. ಕೌಟುಂಬಿಕ ಸಹಕಾರ ಉತ್ತಮವಾಗಿದ್ದು, ಮಾನಸಿಕ ಸಂತೃಪ್ತಿ ಹೊಂದುವಿರಿ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಚಿಂತಿತ ಕೆಲಸಗಳಿಗೆ ಚಾಲನೆ ಸಿಗಲಿದೆ. ಆದಾಯವು ತಕ್ಕಮಟ್ಟಿಗೆ ಇದ್ದರೂ ಖರ್ಚಿಗೆ ಕಡಿವಾಣ ಹಾಕಿ. ದೂರ ಪ್ರಯಾಣದಲ್ಲಿ ಎಚ್ಚರ. ಕಾರ್ಯಕ್ಷೇತ್ರದಲ್ಲಿ ಅಡ್ಡಿ-ಆತಂಕ ಎದುರಾದರೂ ಧೃತಿಗೆಡ‌ಬೇಡಿ. ಕೆಲವರಿಗೆ ವೃತ್ತಿಯಲ್ಲಿ ವರ್ಗಾವಣೆಯ ಸಾಧ್ಯತೆ ಇದೆ. ಕಬ್ಬಿಣದ ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿ. ಲೇಖಕರಿಗೆ ಸನ್ಮಾನದ ಸಾಧ್ಯತೆ. ವಾಹನ ದುರಸ್ತಿದಾರರಿಗೆ ಕೈತುಂಬಾ ಕೆಲಸ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ವೈಯಕ್ತಿಕ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಾಣಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.