ಸೋಮವಾರ, ಅಕ್ಟೋಬರ್ 26, 2020
24 °C

ವಾರ ಭವಿಷ್ಯ: 16-8-2020ರಿಂದ 22-8-2020ರವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

prajavani

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ

ಸಂಪರ್ಕಕ್ಕೆ 8197304680

***

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)

ಮನೆಯಲ್ಲಿನ ಕೆಲವು ಸಮಸ್ಯೆಗಳು ಪರಿಹಾರವಾಗಿ ಮನಸ್ಸಿಗೆ ನೆಮ್ಮದಿ. ಶ್ರಮದಿಂದ ಮಾಡಿದ ಕೆಲವು ಕೆಲಸಗಳಿಗೆ ಪ್ರತಿಫಲ ಸಿಗದು. ನಿರೀಕ್ಷೆಯಲ್ಲಿದ್ದ ಅವಕಾಶವೊಂದು ಕೈಸೇರಲಿದೆ. ನೀರಾವರಿ ಜಮೀನನ್ನು ಅಭಿವೃದ್ಧಿಪಡಿಸಲು ಮುಂದಾಗುವಿರಿ. ದೇಹದಲ್ಲಿ ಆಯಾಸ ಕಾಣಿಸಿಕೊಂಡು, ಸ್ವಲ್ಪ ವಿಶ್ರಾಂತಿಯ ಅಗತ್ಯವಿರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ವಾರ. ಕಿರಿಯರಿಂದ ಧಾರ್ಮಿಕ ವಿಷಯ ತಿಳಿಯಲು ಬಹಳ ಉತ್ಸಾಹ ತೋರುವಿರಿ. ವೃತ್ತಿಯಲ್ಲಿ ಸ್ವಲ್ಪ ಒತ್ತಡಗಳು ಹೆಚ್ಚುತ್ತವೆ.

***

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ವ್ಯಾಪಾರಿಗಳು ಸಿಂಹಾವಲೋಕನದಿಂದ ಅಭಿವೃದ್ಧಿಯ ಪಥ ಕಂಡುಕೊಳ್ಳುವುದು ಉತ್ತಮ. ಧನಾದಾಯವು ನಿರೀಕ್ಷಿತ ಮಟ್ಟದಲ್ಲಿರಲಿದೆ. ಖರ್ಚು ಹೆಚ್ಚಾಗಬಹುದು. ನಿಮ್ಮ ಬಂಧುಗಳು ನಿಮ್ಮ ವ್ಯವಹಾರದಲ್ಲಿ ಪಾಲುದಾರರಾಗಲು ಆಸಕ್ತಿ  ತೋರುವರು. ವಿದ್ಯುತ್ ಉಪಕರಣಗಳನ್ನು ತಯಾರಿಸಿ ಮಾರುವವರಿಗೆ ವ್ಯವಹಾರ ವಿಸ್ತರಣೆ ಸಾಧ್ಯತೆ ಇದೆ. ಹಂಗಾಮಿ ನೌಕರರಿಗೆ ವೃತ್ತಿ ಕಾಯಂ ಆಗುವ ಸಾಧ್ಯತೆ ಇದೆ. ಮಕ್ಕಳ ಪ್ರಗತಿ ಇರಲಿದೆ. ಸೂಕ್ತ ಸಮಯದಲ್ಲಿ ಧನ ಸಹಾಯ ಸಿಗಲಿದೆ.

***

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಶೈಕ್ಷಣಿಕ ಕಾರ್ಯಗಳಿಗೆ ಉತ್ತೇಜನ ದೊರೆಯುತ್ತದೆ. ಮಕ್ಕಳ ನಡುವೆ ಸ್ವಲ್ಪ ವಿರಸ ಉಂಟಾಗಬಹುದು. ಸಣ್ಣ ವಿಚಾರಗಳಲ್ಲೂ  ಹೆಚ್ಚು ಹಣ ಖರ್ಚಾಗಬಹುದು. ಬಯಸಿದ ಜಾಗಕ್ಕೆ ವರ್ಗಾವಣೆಯ ಸಾಧ್ಯತೆಯಿದೆ. ಸಾಮಾಜಿಕ ಕೆಲಸಗಳಿಗಾಗಿ ಓಡಾಟ ನಡೆಸುವಿರಿ. ಮಿತ್ರರೊಡನೆ ಅಥವಾ ಸಹೋದ್ಯೋಗಿಗಳೊಡನೆ ವಾಗ್ವಾದ ನಡೆಯುವ ಸಂದರ್ಭವಿದೆ, ಸ್ವಲ್ಪ ಎಚ್ಚರ. ಹಣದ ಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ವ್ಯಾಪಾರ, ವ್ಯವಹಾರಗಳಲ್ಲಿ ಅಭಿವೃದ್ಧಿ. ವಾಹನ ಖರೀದಿಗೆ ತಯಾರಿ ನಡೆಸುವಿರಿ.

***

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)

ಆತ್ಮೀಯ ವ್ಯಕ್ತಿ ಎಂದು ನಂಬಿ ನಿಮ್ಮ ಎಲ್ಲಾ ವಿಚಾರಗಳನ್ನು ಹೇಳದಿರಿ. ಇವರೇ ನಿಮ್ಮ ವಿರೋಧಿಗಳಿಗೆ ನಿಮ್ಮ ವಿಚಾರಗಳನ್ನು ತಿಳಿಸುವರು. ನೆರೆಹೊರೆಯವರೊಂದಿಗೆ ಬಾಂಧವ್ಯ ವೃದ್ಧಿಸುತ್ತದೆ. ವಿದ್ಯಾರ್ಥಿಗಳು ಓದಿನಲ್ಲಿ ಚೇತರಿಕೆ ಕಾಣಬಹುದು. ಸ್ತ್ರೀಯರು ತಮ್ಮ ಸಂಗಾತಿಯ ಪದೋನ್ನತಿ ನಿರೀಕ್ಷಿಸಬಹುದು. ಸಂಗಾತಿಯ ಮುನ್ನೆಚ್ಚರಿಕೆಯ ಫಲವಾಗಿ ಎದುರಾಗಲಿದ್ದ ತೊಂದರೆಯು ನಿವಾರಣೆಯಾಗುತ್ತದೆ. ಸ್ತ್ರೀಯರು ನಡೆಸುವ ವ್ಯವಹಾರಗಳಲ್ಲಿ ಲಾಭವಿದೆ. ಧನದ ಆದಾಯ ಸಾಮಾನ್ಯ, ಖರ್ಚು ಹೆಚ್ಚು.

***

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) 

ನೀವು ಬುದ್ದಿವಂತರರಿದ್ದರೂ ನಿಮ್ಮ ಅವಸರ ನಿಮ್ಮ ಕೆಲಸ ಹದಗೆಡಿಸಬಹುದು. ತಾಳ್ಮೆಯಿಂದ ಕೆಲಸ ಮಾಡಿದಲ್ಲಿ ಯಶಸ್ಸು ಸಿಗಲಿದೆ. ಕೃಷಿ ಮತ್ತು ತೋಟಗಾರಿಕೆ ಕೆಲಸಗಳಲ್ಲಿ ಅತಿ ಆಸಕ್ತಿ  ತಳೆಯುವಿರಿ. ಕೃಷಿ ವಿಧಾನದಲ್ಲಿ ಹೊಸತನ ಅಳವಡಿಸುವಿರಿ. ಒತ್ತಡದ ನಡುವೆಯೂ ವಿರೋಧಿಗಳ ಜತೆ ಹೊಂದಿಕೊಂಡು ಕೆಲಸ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಖರ್ಚು ಹೆಚ್ಚಾಗುವ ಸಂದರ್ಭವಿದೆ. ಹಣದ ಹರಿವು ಸಾಮಾನ್ಯ. ಮಕ್ಕಳಿಂದ ಧನಸಹಾಯ ಒದಗಿ ಬರುತ್ತದೆ.

***

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ವಿವಿಧ ರೀತಿಯಲ್ಲಿ ಧನ ಸಂಗ್ರಹದಿಂದ ಕಾರ್ಯ ಸಿದ್ಧಿ. ಮಕ್ಕಳ ಅಭ್ಯಾಸದ ಬಗ್ಗೆ ಗಮನ ಹರಿಸುವುದು ಒಳ್ಳೆಯದು. ಕೆಲವು ಮುಖ್ಯ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಸಂಗಾತಿಯ ಸಲಹೆ ಪಡೆದು ಮುನ್ನಡೆಯುವುದು ಒಳ್ಳೆಯದು. ನಿರುದ್ಯೋಗಿಗಳು ಬಂದ ಅವಕಾಶ ಬಳಸಿಕೊಳ್ಳುವುದು ಒಳಿತು. ಉನ್ನತ ಶಿಕ್ಷಣಕ್ಕಾಗಿ ಆಶಿಸುತ್ತಿರುವವರೆಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯು  ದೊರೆಯುತ್ತದೆ. ನಿಮ್ಮ ಪಾಲುದಾರಿಕೆ ವ್ಯವಹಾರದಲ್ಲಿ ಲಾಭ  ಹೆಚ್ಚುತ್ತದೆ. ಸರ್ಕಾರಿ ಕೆಲಸಗಳು ಸರಾಗವಾಗಿ ಸಾಗುತ್ತವೆ.

***

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2)

ರಾಜಕೀಯ ವ್ಯಕ್ತಿಗಳಿಗೆ ಸ್ಥಾನ-ಮಾನ ಸಿಗುವ ಸಾಧ್ಯತೆಗಳಿವೆ. ವ್ಯಾಪಾರ-ವ್ಯವಹಾರಕ್ಕೆ ಬಂಧುಗಳಿಂದ ಸಹಾಯ ದೊರೆಯುತ್ತದೆ. ಮುಂದಾಲೋಚನೆಯಿಲ್ಲದೆ ದೊಡ್ಡಪ್ರಮಾಣದಲ್ಲಿ ಹಣವನ್ನು ಯಾವುದೇ ವ್ಯವಹಾರದಲ್ಲೂ ಹೂಡಿಕೆ ಬೇಡ.   ಭೂಮಿ ವ್ಯವಹಾರ ಮಾಡುವವರಿಗೆ ಸ್ವಲ್ಪ ಹಿನ್ನಡೆ. ಪ್ರಯಾಣದಲ್ಲಿ ಕಳ್ಳಕಾಕರ ಬಗ್ಗೆ ಎಚ್ಚರ. ಹಣದ ಹರಿವು ಸಾಮಾನ್ಯ. ಸರ್ಕಾರಿ ಸಂಸ್ಥೆಗಳಿಗೆ ವಸ್ತುಗಳನ್ನು ಪೂರೈಸುವವರಿಗೆ ಹೊಸ ಪೂರೈಕೆಯ ಆದೇಶಗಳು ಸಿಗುತ್ತವೆ. ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾವಹಿಸಿ.

***

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)  

ಕೆಲಸಕಾರ್ಯಗಳಲ್ಲಿ ನಿಧಾನಗತಿ. ಆದರೂ ಕೆಲವು ಕೆಲಸಗಳು ಪುನಃ ಆರಂಭಗೊಳ್ಳುತ್ತವೆ. ಸರ್ಕಾರಿ ಕೆಲಸಗಳಲ್ಲಿ ಸ್ವಲ್ಪ ಮುನ್ನಡೆ ಕಾಣಬಹುದು. ಉದ್ಯಮಿಗಳು ಹೊಸ ಯಂತ್ರಗಳನ್ನು ಸ್ಥಾಪಿಸಲು ಮತ್ತು ಆಧುನೀಕರಿಸಲು ಮುಂದಾಗುವಿರಿ. ಹಣದ ಹರಿವು ಏರುಗತಿಯಲ್ಲಿರಲಿದೆ. ಹೈನುಗಾರಿಕೆಯವರಿಗೆ ಆದಾಯ ವೃದ್ಧಿ. ಅನಾರೋಗ್ಯ ಪೀಡಿತರ ಆರೋಗ್ಯ ಸುಧಾರಣೆಯತ್ತ ಸಾಗುತ್ತದೆ. ಹಿಡಿದ ಕೆಲಸ ಸಾಧಿಸಲು ನೀವು ಬಳಸುವ ತಂತ್ರಗಳು ಫಲ ಕೊಡುತ್ತದೆ.

***

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)

ಆಗಾಗ ಹಿನ್ನೆಡೆ  ಕಂಡರೂ ವ್ಯಾಪಾರ ಮತ್ತು ವ್ಯವಹಾರಗಳು ಮುಂದುವರೆಯುತ್ತವೆ. ಮಕ್ಕಳಿಂದ ಕಿರಿಕಿರಿ ಎದುರಾಗುತ್ತದೆ. ಪತ್ನಿಯ ಆರೋಗ್ಯದಲ್ಲಿ ಸುಧಾರಣೆ. ನಿಮ್ಮ ಯೋಜನೆಗಳ ಬಗ್ಗೆ ಗೋಪ್ಯತೆ ಕಾಪಾಡಿಕೊಳ್ಳಿ. ಹಣದ ಹರಿವು ಸಾಮಾನ್ಯ. ಸಂಗಾತಿಗೆ ವೃತ್ತಿಯಲ್ಲಿ ಅಭಿವೃದ್ಧಿ. ಆಸ್ತಿಗೆ ಸಂಬಂಧಪಟ್ಟ ದಾಖಲಾತಿಯ ವ್ಯತ್ಯಾಸಗಳು ಈಗ ಸರಿಯಾಗುತ್ತವೆ. ಸಂಗಾತಿ ಹಣ ಹೂಡಿದ್ದ ಜಾಗಗಳಲ್ಲಿ ಹೆಚ್ಚಿನ ಲಾಭ ಬರುತ್ತದೆ. ಉನ್ನತ ಶಿಕ್ಷಣಕ್ಕೆ ಹೋಗುವವರಿಗೆ ಅನುಕೂಲ ಒದಗುತ್ತದೆ.

***

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)  

ಸ್ವಲ್ಪ ಆಲಸಿ ಮನೋಭಾವ ಮೂಡಬಹುದು. ಒಂದೆರಡು ದಿನಗಳಲ್ಲೇ ಬಹಳ ಚುರುಕುತನ ಪಡೆಯುವಿರಿ. ಆದಾಯದಷ್ಟೇ ಖರ್ಚು. ಸರ್ಕಾರಿ ಉನ್ನತದ ಅಧಿಕಾರಿಗಳಿಗೆ ಸಾಮಾಜಿಕ ಗೌರವ ಲಭಿಸಲಿದೆ. ರೈತಾಪಿಗಳಿಗೆ ಆದಾಯದಲ್ಲಿ ತುಸು ಏರಿಕೆ. ವಿದ್ಯಾರ್ಥಿಗಳು ಓದಿನತ್ತ ಗಮನ ಹರಿಸುವುದು ಉತ್ತಮ. ಕೋರ್ಟ್ ಕಚೇರಿ ಕೆಲಸಗಳಲ್ಲಿ ನಿಮ್ಮ ಕೈ ಮೇಲಾಗುತ್ತದೆ. ಹಿರಿಯರ ವ್ಯವಹಾರದಲ್ಲಿನ ಸೂಕ್ಷ್ಮತೆಗಳು ಈಗ ಅರಿವಿಗೆ ಬರಲಿವೆ. ವೃತ್ತಿಯಲ್ಲಿ ನಿಮ್ಮ ಮೇಲಿನ ಅಧಿಕಾರಿಗಳ ಗಮನವನ್ನು ಸೆಳೆಯುವಿರಿ.

***

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶ ಸಿಗುತ್ತದೆ. ಕೃಷಿಕರಿಗೆ ಉತ್ತಮ ವರಮಾನದ ಸಾಧ್ಯತೆ ಇದೆ.  ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವವರೆಗೆ ಉತ್ತಮ ಕಾಲ. ಸಂಗಾತಿಯ ಸಂತೋಷಕ್ಕಾಗಿ ಹಣ ಖರ್ಚು ಮಾಡಬೇಕಾಗಬಹುದು. ದಿನಸಿ ಸಗಟು ವ್ಯಾಪಾರಿಗಳಿಗೆ ಈಗ ಭರಪೂರ ವ್ಯಾಪಾರ. ಉದ್ಯಮಿಗಳು ಹಿಂದೆ ಆದ ತಪ್ಪನ್ನು ಮರುಕಳಿಸದಂತೆ ಎಚ್ಚರ ವಹಿಸಿ. ಪಾರಂಪರಿಕ ವಿದ್ಯೆಗಳನ್ನು ಹಿರಿಯರಿಂದ ಗಳಿಸಬಹುದು. ವಿದ್ಯುತ್ ಉಪಕರಣಗಳನ್ನು ದುರಸ್ತಿ ಮಾಡುವವರಿಗೆ ಕೈತುಂಬಾ ಕೆಲಸವಿರುತ್ತದೆ.

***

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ನಿಮ್ಮನ್ನು ಇತರರೊಂದಿಗೆ ಹೋಲಿಸಿಕೊಂಡು ಕೀಳರಿಮೆ ಪಡದಿರಿ. ಹಿಡಿದ ಕಾರ್ಯವನ್ನು ಛಲದಿಂದ ಸಾಧಿಸಿರಿ, ಗೆಲುವು ನಿಮ್ಮದೇ. ಸ್ಥಿರಾಸ್ತಿಗಳ ವ್ಯವಹಾರದಿಂದ ಹೆಚ್ಚಿನ ಲಾಭ ಪಡೆಯುವಿರಿ. ಗಣಿ ಉದ್ಯಮಗಳಿಗೆ ಅವರ ಉದ್ಯಮಕ್ಕೆ ಬೇಕಾದ ಪೂರಕ ಪತ್ರ ಸರ್ಕಾರದಿಂದ ದೊರೆಯುತ್ತದೆ. ಕಟ್ಟಡ ನಿರ್ಮಾಣ ಕೆಲಸಗಾರರಿಗೆ ಸಾಕಷ್ಟು ಕೆಲಸ ದೊರೆಯುತ್ತದೆ. ಸಿದ್ಧಪಡಿಸಿದ ಆಹಾರಗಳನ್ನು ಮಾರುವವರಿಗೆ ಅಭಿವೃದ್ಧಿ ಇರುತ್ತದೆ. ಹಣದ ಹರಿವು ನಿಮ್ಮ ಅನಿಸಿಕೆಗೆ ತಕ್ಕಂತೆ ಇರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.