ಬುಧವಾರ, ನವೆಂಬರ್ 25, 2020
21 °C

ವಾರ ಭವಿಷ್ಯ: 01-11-2020 ರಿಂದ 07-11-2020ರ ವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ, ಸಂಪರ್ಕಕ್ಕೆ 81973 04680

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)
ಮಹತ್ವದ ವಿಷಯಗಳಲ್ಲಿ ನಿಮ್ಮ ನಿಲುವು ಅತ್ಯಂತ ದೃಢವಾಗಿರುವುದು ಒಳ್ಳೆಯದು. ಇದರಿಂದ ಎಲ್ಲರ ಪ್ರಶಂಸೆಗೆ ಪಾತ್ರರಾಗುವಿರಿ. ದೊಡ್ಡ ಯೋಜನೆಗಳನ್ನು ಈಗ ಆರಂಭಿಸಬೇಡಿ. ಸಮಾಧಾನದ ವರ್ತನೆಯಿಂದ ಕುಟುಂಬ ಮತ್ತು ಬಂಧುಗಳ ನಡುವೆ ಉತ್ತಮ ಬಾಂಧವ್ಯ ಹೊಂದುವಿರಿ. ನೀವು ಆರಂಭಿಸಿದ ವ್ಯವಹಾರಗಳಿಗೆ ವಿದೇಶಿ ಕಂಪನಿಗಳಿಂದ ಸಹಾಯಹಸ್ತ ದೊರೆಯಲಿದೆ. ಸಂಗಾತಿಯು ನಡೆಸುವ ವ್ಯವಹಾರಗಳಲ್ಲಿ ಹಣದ ಗಳಿಕೆ ನಿಧಾನವಾಗಿ ಹೆಚ್ಚುತ್ತದೆ. ಸ್ಥಿರಾಸ್ತಿಯ ದಾಖಲೆಗಳನ್ನು ಸರಿಯಾಗಿ ಕಾಯ್ದುಕೊಳ್ಳಿ.

ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಕೌಟುಂಬಿಕ ವಿಷಯದಲ್ಲಿ ಹೊಸದಾಗಿ ಕಿರಿಕಿರಿ ಉಂಟಾಗಬಹುದು. ಸಂಗಾತಿಯೊಡನೆ ವಾದ– ವಿವಾದ ಮಾಡುವ ಬದಲು ತಾಳ್ಮೆಯಿಂದ ಇರಿ. ಮಕ್ಕಳಿಂದ ಉತ್ತಮ ಸಹಕಾರ ದೊರೆಯುವುದು. ನಿಮ್ಮ ಉದ್ದಿಮೆಗಳಿಗೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಉತ್ತಮ, ಇದರಿಂದ ಉತ್ಪಾದನೆಯಲ್ಲಿ ಆಗುತ್ತಿದ್ದ ವಿಳಂಬ ನಿಲ್ಲುವುದು. ರಾಜಕೀಯ ವ್ಯಕ್ತಿಗಳಿಗೆ ಅನಿರೀಕ್ಷಿತ ಹುದ್ದೆಗಳು ದೊರೆಯಬಹುದು. ಲೇವಾದೇವಿಯ ವ್ಯವಹಾರದವರು ತಮ್ಮ ಹಣಕಾಸಿನ ಲೆಕ್ಕಗಳನ್ನು ಸರಿಯಾಗಿ ಇಟ್ಟುಕೊಳ್ಳುವುದು ಉತ್ತಮ. ಹೆಣ್ಣುಮಕ್ಕಳ ಅಭಿವೃದ್ಧಿಯು ಉತ್ತಮವಾಗಿರುತ್ತದೆ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ನಿಮ್ಮ ಬೇಜವಾಬ್ದಾರಿತನ ನಿಮಗೆ ನಷ್ಟ ತರಬಹುದು. ಸರ್ಕಾರಿ ಸಾಲಗಳು ಸುಲಭವಾಗಿ ಸಿಗುವ ಸಾಧ್ಯತೆ ಇದೆ. ವ್ಯವಹಾರಗಳಲ್ಲಿ ಉತ್ತಮ ಬೆಳವಣಿಗೆ ಇದೆ. ಸಂಗಾತಿ ಆಶಿಸುತ್ತಿದ್ದ ಸ್ಥಿರಾಸ್ತಿ ಈಗ ಕೈಸೇರುವ ಸಾಧ್ಯತೆ ಇದೆ. ಅವಿವಾಹಿತರಿಗೆ ವಿವಾಹ ಒದಗಿ ಬರುವುದು. ವೃತ್ತಿಜೀವನದಲ್ಲಿ ಇದ್ದ ತೊಡಕುಗಳು ನಿಧಾನವಾಗಿ ಕರಗುವುದು. ವಿದ್ಯಾರ್ಥಿಗಳಿಗೆ ಉತ್ತಮ ಸಾಧನೆಗೆ ಅನುಕೂಲತೆಗಳು ಒದಗುತ್ತವೆ. ವಿದ್ಯುತ್ ಉಪಕರಣ ತಯಾರಿಸುವವರಿಗೆ ಉತ್ತಮ ಮಾರುಕಟ್ಟೆ ಒದಗುತ್ತದೆ. ತಾಯಿಯಿಂದ ಹಣಕಾಸಿನ ಸಹಾಯವು ಒದಗಿಬರುತ್ತದೆ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ಬಹಳ ದಿನಗಳಿಂದ ಎಳೆದಾಡುತ್ತಿದ್ದ ಕೆಲಸವೊಂದು ಈಗ ಅಂತಿಮ ಹಂತಕ್ಕೆ ತಲುಪುತ್ತದೆ. ನಿಮ್ಮ ಬದುಕಿಗೆ ಸಂಬಂಧ ಪಟ್ಟ ಕೆಲವೊಂದು ತೀರ್ಮಾನಗಳನ್ನು ಈಗ ತೆಗೆದುಕೊಳ್ಳಬಹುದು. ಅಪೇಕ್ಷಿತರ ಭೇಟಿಯಾಗಿ ವ್ಯವಹಾರದಲ್ಲಿನ ಕೆಲವು ಒಪ್ಪಂದಗಳನ್ನು ಸರಿಪಡಿಸಿಕೊಳ್ಳುವಿರಿ. ದುಡಿಮೆಗೆ ಹೆಚ್ಚಿನ ಅವಕಾಶಗಳನ್ನು ನೀವು ಪಡೆಯುವಿರಿ. ಹಣ ಕಾಸಿನ ವಿಷಯದಲ್ಲಿ ಅಪರಿಚಿತರ ಜೊತೆ ವ್ಯವಹಾರ ಬೇಡ, ಮೋಸ ಹೋಗುವ ಸಾಧ್ಯತೆಗಳು ಹೆಚ್ಚಿಗೆ ಇದೆ ಎಚ್ಚರ. ನಿಮ್ಮ ತಾಯಿಯ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಾಣಬಹುದು. ಹಿರಿಯರ ಆಸ್ತಿಗಳು ಈಗ ನಿಮಗೆ ಒದಗುವ ಸಾಧ್ಯತೆ ಇದೆ.

ಸಿಂಹ ರಾಶಿ (ಮಖ ಪೂರ್ವ ಪಲ್ಗುಣಿ ಉತ್ತರ ಫಲ್ಗುಣಿ 1)
ಹಣಕಾಸಿನ ಸ್ಥಿತಿ ಸ್ವಲ್ಪ ಸುಧಾರಣೆಯತ್ತ ಇರುತ್ತದೆ. ಸಹೋದ್ಯೋಗಿಗಳೊಡನೆ ಉತ್ತಮ ಬಾಂಧವ್ಯವನ್ನು ನೀವು ಹೊಂದಿದ್ದರೂ ಹಿತಶತ್ರುಗಳು ಒಳಗೆ ಇರುವರು ಗಮನಿಸಿರಿ. ಚುರುಕಾದ ನಡವಳಿಕೆಯಿಂದ ಎಲ್ಲರ ಗಮನ ಸೆಳೆಯುವಿರಿ. ಮೂಳೆ ನೋವುಗಳು ಅಥವಾ ಉದರ ರೋಗಗಳು ಅಲ್ಪ ತಹಬಂದಿಗೆ ಬರುವುವು. ವಿದೇಶದಲ್ಲಿ ವೃತ್ತಿಯಲ್ಲಿ ಇರುವವರಿಗೆ ಸ್ವಲ್ಪ ಅಭಿವೃದ್ಧಿ ಇದೆ. ದಿನಸಿ ವ್ಯಾಪಾರಿಗಳ ವ್ಯವಹಾರವು ವೃದ್ಧಿಸುತ್ತದೆ. ಕೃಷಿಕರಿಗೆ ಅನಿರೀಕ್ಷಿತ ಸಹಾಯಗಳು ಒದಗಿ ಬರುತ್ತವೆ. ಮಕ್ಕಳ ಶೈಕ್ಷಣಿಕ ಬೆಳವಣಿಗೆಯು ತೃಪ್ತಿದಾಯಕವಾಗಿರುತ್ತದೆ. ಸಂತಾನ ಅಪೇಕ್ಷಿತರಿಗೆ ಶುಭ ವಾರ್ತೆಗಳು ಇರುತ್ತವೆ.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಆರ್ಥಿಕ ಸ್ಥಿತಿಯು ಚೇತರಿಕೆಯ ಹಾದಿಯಲ್ಲಿ ಇರುತ್ತದೆ. ಸರ್ಕಾರಿ ಸಹಾಯಧನಗಳು ಒದಗಿ ಬರುತ್ತವೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ವಾರ. ಸ್ವತಂತ್ರ ಉದ್ಯೋಗಿಗಳಿಗೆ ಅಭಿವೃದ್ಧಿ ಇರುತ್ತದೆ. ಸಂಸ್ಥೆಗಳಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವವರಿಗೆ ಹೊಸ ಜವಾಬ್ದಾರಿ ಬರಬಹುದು. ತೆರಿಗೆ ತಜ್ಞರಿಗೆ ಬೇಡಿಕೆ ಹೆಚ್ಚಾಗುವುದು. ಇತರರ ವಿಷಯದಲ್ಲಿ ವಿನಾಕಾರಣ ಮೂಗು ತೂರಿಸುವುದು ಬೇಡ. ಹೊಸ ರೀತಿಯ ವ್ಯವಹಾರ ಆರಂಭಿಸಲು ಆಲೋಚಿಸುವಿರಿ. ಖಾಸಗಿ ಪಾಠ ಮಾಡುವವರಿಗೆ ಹೆಚ್ಚಿನ ಆದಾಯ ಬರುವ ಸಾಧ್ಯತೆಯಿದೆ. ಮಕ್ಕಳ ವಿಷಯದಲ್ಲಿ ಬೇರೆಯವರಿಂದ ಸಣ್ಣ ಮಾತುಗಳನ್ನು ಕೇಳಬೇಕಾಗಬಹುದು.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಕೆಲಸದ ಒತ್ತಡಕ್ಕೆ ಹೆದರಿ ಹಿಂಜರಿಯದಿರಿ. ದುಡುಕದೆ ಶ್ರಮವಹಿಸಿದಲ್ಲಿ ಯಶಸ್ಸು ಹಾಗೂ ಹೆಚ್ಚಿನ ಸ್ಥಾನ ನಿಮ್ಮದಾಗಿರುತ್ತದೆ. ಸಾಮಾಜಿಕ ಕಾರ್ಯಗಳಲ್ಲಿ ಸ್ವಲ್ಪ ಹಿನ್ನಡೆ. ನಿಮ್ಮ ಅಹಂಕಾರದ ಮಾತುಗಳು ಸಂಬಂಧಗಳನ್ನು ಹಾಳುಗೆಡವಬಹುದು. ಬಂಧುಗಳೊಡನೆ ಮತ್ತು ನೆರೆಹೊರೆಯವರೊಡನೆ ಸಂಬಂಧ ಸುಧಾರಿಸಿಕೊಳ್ಳುವುದು ಉತ್ತಮ. ಆರ್ಥಿಕ ಭದ್ರತೆಯ ಬಗ್ಗೆ ಗಮನ ಹರಿಸಿರಿ. ಹಣಕಾಸಿನ ವ್ಯವಹಾರಗಳಲ್ಲಿ ಸ್ನೇಹಿತರು ಸಹಾಯ ಮಾಡುವರು. ಕೆಲವರಿಗೆ ಉದ್ಯೋಗ ನಷ್ಟದ ಭೀತಿ ಎದುರಾಗಬಹುದು. ಸ್ಥಿರಾಸ್ತಿಯ ದಾಖಲೆಗಳನ್ನು ಸರಿಯಾಗಿ ಕಾಪಾಡಿಕೊಳ್ಳಿರಿ.

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)
ನಿಮ್ಮ ಆಕರ್ಷಕ ಮಾತಿನಿಂದ ಎಲ್ಲರನ್ನೂ ನಿಮ್ಮತ್ತ ಸೆಳೆಯುವಿರಿ. ಪಾಲುದಾರಿಕೆ ವ್ಯವಹಾರದಲ್ಲಿ ನಿಮ್ಮ ನಿರ್ಧಾರಗಳು ಬಹಳ ಪ್ರಶಂಸೆಗೆ ಒಳಗಾಗುತ್ತವೆ. ಗುತ್ತಿಗೆ ವ್ಯವಹಾರಗಳಲ್ಲಿ ನಂಬಿದವರಿಂದ ಮೋಸಹೋಗುವ ಸಾಧ್ಯತೆಯಿದೆ ಎಚ್ಚರ. ಹಣದ ಒಳಹರಿವಿನಲ್ಲಿ ಏರಿಕೆಯಾಗುವುದು. ಬಂಧುಬಳಗದವರ ಸಹಕಾರದಿಂದ ಕುಟುಂಬದ ಕೆಲಸಗಳು ಸರಾಗವಾಗಿ ಆಗುವುದು. ಮಕ್ಕಳ ಅಭಿಲಾಷೆಗಾಗಿ ಹೆಚ್ಚಿನ ಹಣ ಖರ್ಚು ಮಾಡುವಿರಿ. ನಿಮ್ಮ ಒಳಪಟ್ಟುಗಳು ಎದುರಾಳಿಯ ಧೈರ್ಯ ಮತ್ತು ಶಕ್ತಿ ಕುಂದಿಸುವುದು.

ಧನಸ್ಸು ರಾಶಿ( ಮೂಲ ಪೂರ್ವಾಷಾಢ ಉತ್ತರಾಷಾಢ 1 )
ಆತ್ಮಗೌರವ ಹೆಚ್ಚಾಗಿರುತ್ತದೆ. ಹಣದ ಒಳಹರಿವಿನಲ್ಲಿ ಮಂದಗತಿ ಇರುತ್ತದೆ. ಆದಾಯದಷ್ಟೇ ಖರ್ಚು ಸಹ ಇರುತ್ತದೆ. ನಿಮ್ಮ ಕೆಲವು ತಂತ್ರಗಳಿಂದ ಶತ್ರುಗಳನ್ನು ಮಣಿಸಬಹುದು. ಕೃಷಿಕರಿಗೆ ಆದಾಯ ಹೆಚ್ಚುವುದು. ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಸಿಗುತ್ತವೆ. ಕಬ್ಬಿಣದ ವ್ಯಾಪಾರಿಗಳಿಗೆ ವ್ಯವಹಾರ ಹೆಚ್ಚಾಗುವುದು. ತಂದೆಯೊಡನೆ ಹೊಸ ವ್ಯವಹಾರದಲ್ಲಿ ಭಾಗಿಯಾಗಿ ಅದರ ಒಳಸುಳಿಗಳನ್ನು ತಿಳಿಯಬಹುದು. ವೃತ್ತಿಯಲ್ಲಿ ಅಲ್ಪ ವೇತನ ಏರಿಕೆ ಕಾಣಬಹುದು. ದಿನಸಿ ಮತ್ತು ಆಹಾರ ಪದಾರ್ಥ ಮಾರಾಟ ಮಾಡುವವರ ವ್ಯವಹಾರ ವೃದ್ಧಿಸುತ್ತದೆ. ಹಿರಿಯ ನಾಗರಿಕರಿಗೆ ವೃತ್ತಿಯಲ್ಲಿ ಎಂದೊ ಬರಬೇಕಾಗಿದ್ದ ಹಳೆಯ ಬಾಕಿ ಹಣ ಈಗ ಬರುತ್ತದೆ.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಕೆಲಸ ಕಾರ್ಯಗಳಲ್ಲಿ ಇದ್ದ ಒತ್ತಡಗಳು ನಿವಾರಣೆಯಾಗಿ ಸ್ವಲ್ಪ ನಿರಾಳತೆ ಅನುಭವಿಸುವಿರಿ. ಸಹೋದ್ಯೋಗಿಗಳಿಗೆ ಸಹಾಯ ಮಾಡಲು ಶಕ್ತಿಮೀರಿ ಪ್ರಯತ್ನ ಪಡುವಿರಿ. ಖರ್ಚು ಹೆಚ್ಚಾಗುವ ಸಾಧ್ಯತೆಯಿದೆ. ಹೊಸ ಉದ್ಯಮದ ಬಗೆಗಿನ ಆಶಾವಾದಕ್ಕೆ ಎಲ್ಲರ ಸಹಕಾರ ದೊರೆತು ಆ ಬಗ್ಗೆ ಕಾರ್ಯಪ್ರವೃತ್ತರಾಗುವಿರಿ. ಸಿಗುವ ಅವಕಾಶಗಳನ್ನು ಸರಿಯಾಗಿ ಬಳೆಸಿಕೊಳ್ಳಿರಿ. ವಿದ್ಯಾರ್ಥಿಗಳಿಗೆ ವಿಶೇಷ ಅಧ್ಯಯನದಲ್ಲಿ ಆಸಕ್ತಿ ಹೆಚ್ಚಾಗುವುದು. ಅದರಲ್ಲೂ ವಿದೇಶಿ ಭಾಷೆಗಳನ್ನು ಕಲಿಯುವವರಿಗೆ ಸೂಕ್ತ ಅವಕಾಶ ದೊರೆಯುವುದು. ಕೆಲವು ಸರ್ಕಾರಿ ಅಧಿಕಾರಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಕುಟುಂಬದಲ್ಲಿ ಸಾಮರಸ್ಯ ತರಲು ಬಹಳ ಯತ್ನಿಸುವಿರಿ. ಕೃಷಿ ಉತ್ಪನ್ನಗಳನ್ನು ಮಾರುವವರಿಗೆ ಆದಾಯ ಹೆಚ್ಚುತ್ತದೆ. ಆಸ್ತಿಯ ದಾಖಲೆಗಳಲ್ಲಿ ಇದ್ದ ವ್ಯತ್ಯಾಸಗಳನ್ನು ಈಗ ಸರಿಪಡಿಸಿಕೊಳ್ಳಬಹುದು. ವೃತ್ತಿಯಲ್ಲಿ ಸ್ಥಾನ ಬದಲಾವಣೆಯ ಸಾಧ್ಯತೆ ಇದೆ. ಹಿಂದಿನ ಕೈ ಸಾಲಗಳಿಂದ ಈಗ ಮುಕ್ತಿ ಹೊಂದಬಹುದು. ನಿಮ್ಮ ವಿರುದ್ಧ ವಿರೋಧಿಗಳು ಹೂಡುವ ಸಂಚು ವಿಫಲವಾಗುವುದು ಮತ್ತು ನಿಮ್ಮ ಗೌರವಗಳು ಹೆಚ್ಚಾಗುವುದು. ಹಣದ ಒಳಹರಿವಿನಲ್ಲಿ ಚೇತರಿಕೆ ಕಾಣಬಹುದು. ವಿವಾಹಿತರಿಗೆ ಸಂಗಾತಿ ಸಿಗುವ ಭಾಗ್ಯವಿದೆ.

ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ನಿಮ್ಮ ಸಂಕೋಚ ಸ್ವಭಾವ ಬಿಟ್ಟು ಹೊರಬನ್ನಿ. ಮುಲಾಜಿಗೆ ಒಳಗಾಗದೆ ಪಕ್ಕಾ ವ್ಯವಹಾರ ಮಾಡಿದಲ್ಲಿ ಲಾಭ ಪಡೆಯಬಹುದು. ಹಣಕಾಸಿನ ಚೇತರಿಕೆ ಕಾಣಬಹುದು. ಆಸೆಪಟ್ಟು ನಿರ್ವಹಿಸಿದ ಕಾರ್ಯಗಳು ಸರಾಗವಾಗಿ ಈಡೇರುತ್ತವೆ. ಆತ್ಮೀಯರ ಭೇಟಿಯ ಸಾಧ್ಯತೆ ಇದೆ. ಒಡಹುಟ್ಟಿದವರ ಮೇಲೆ ಸಣ್ಣಮಟ್ಟಿಗಿನ ಅಸಮಾಧಾನಗಳು ಮೂಡಬಹುದು. ಮಕ್ಕಳಿಂದ ಧನ ಸಹಾಯ ಒದಗಿಬರುತ್ತದೆ. ಸಂಗಾತಿಯ ಸಹಕಾರ ನಿಮ್ಮೆಲ್ಲಾ ಕಾರ್ಯಗಳಿಗೆ ಇರುತ್ತದೆ. ಖರ್ಚಿಗೆ ಕಡಿವಾಣ ಹಾಕುವುದು ಉತ್ತಮ. ಶ್ರಮಿಕರ ಆದಾಯವು ನಿಧಾನವಾಗಿ ಹೆಚ್ಚುವುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.