ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವಾರಾಧನೆ: ಭಗವಂತನನ್ನು ಹೇಗೆ ಪೂಜಿಸಬೇಕು?

Last Updated 20 ಮೇ 2020, 20:00 IST
ಅಕ್ಷರ ಗಾತ್ರ

ಭಗವಂತನನ್ನು ಹೇಗೆ ಪೂಜಿಸಬೇಕು? ಸಹಜವಾಗಿ ಕೆಲವೊಮ್ಮೆ ಮೂಡುವ ಈ ಪ್ರಶ್ನೆಗೆ ಭಗವಂತನೇ ಉತ್ತರಿಸುತ್ತಾನೆ: ‘ಎಲೆಯೋ, ಹೂವೋ, ಹಣ್ಣೋ ಅಥವಾ ಬರಿ ಜಲವೋ, ಭಕ್ತಿಯಿಂದ ಅರ್ಪಿಸಿದ್ದನು ಸ್ವೀಕರಿಸುತ್ತೇನೆ.’ (ಗೀತೆ, 9.26). ಎಂದರೆ, ಅರ್ಪಿಸುವ ವಸ್ತು ಗೌಣವಾಗಿ ಅರ್ಪಿಸಬೇಕೆಂಬ ಭಾವವೇ ಮುಖ್ಯವಾಗುತ್ತದೆ. ಸ್ವಯಂಪೂರ್ಣನಾದ ಸರ್ವಶಕ್ತನಿಗೆ ನಮ್ಮನ್ನೇ ಅರ್ಪಿಸಿಕೊಳ್ಳುವುದರ ಹೊರತು ಮತ್ತಾವ ಅರ್ಪಣೆಯೂ ಬೇಕಿಲ್ಲ!

ಈ ನೆಲೆಯನ್ನೇ ಮತ್ತಷ್ಟು ವಿಸ್ತರಿಸಿ, ಸಾಮಾನ್ಯರಿಗಾಗಿ ಸರಳಗೊಳಿಸುವ ಶಂಕರರು, ತಮ್ಮ ಶಿವಮಾನಸಪೂಜಾಸ್ತೋತ್ರದಲ್ಲಿ ‘ಹೇ ಶಂಭು! ನೀನೇ ನನ್ನ ಆತ್ಮ, ಗಿರಿಜೆಯೇ ನನ್ನ ಬುದ್ಧಿ, ನಿನ್ನ ಸಹಚರರೇ ನನ್ನ ಪ್ರಾಣ’ ಮೊದಲಾಗಿ ಹೇಳಿ ಪರಮಾತ್ಮನೊಂದಿಗೆ ಅವಿನಾಭಾವವೇಪರ್ಡಿಸಿ, ‘ಯದ್ಯದ್ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್’ ಎಂದು ನಮ್ಮ ಸಹಜ ಇರುವಿಕೆಯನ್ನೇ ಭಗವದಾರಾಧನೆಯ ಎತ್ತರಕ್ಕೆ ಕೊಂಡೊಯ್ಯುತ್ತಾರೆ.

ಇದೇ ಸಾರವನ್ನೇ ‘ಕಾಯಕವೇ ಕೈಲಾಸ’ ಎಂದು ಲೋಕಕ್ಕೆ ಸಾರಿ ‘ನಾನೇನ ಮಾಡಲಿ ಬಡವನಯ್ಯ’ ಎಂಬ ಅಳುಕನ್ನ ಬಸವಣ್ಣನವರು ನೀಗಿಸುತ್ತಾರೆ. ‘ಸುಲಭಪೂಜೆಯ ಮಾಡಿ ಬಲವಿಲ್ಲದವರು’ ಎಂದು ಪುರಂದರದಾಸರು ಹೇಳಿದ್ದು ಕೂಡ, ಪರಮಾತ್ಮ ಹೇಳಿದ ಅದೇ ಭಾವದ ಮುಂದುವರಿಕೆಯೇ! ಇತ್ತೀಚನವರೆಗೂ ಇದ್ದ ವೆಂಕಟಾಚಲ ಅವಧೂತರು ‘ಲಕ್ಷ ಬಿಲ್ವಾರ್ಚನೆಗಿಂತ ಒಂದು ಬಿಲ್ವಮರಕ್ಕೆ ನಿತ್ಯ ಒಂದು ಚೆಂಬು ನೀರು ಹಾಕೋದು ಮೇಲಲ್ವೇ!’ ಎನ್ನುತ್ತಾ ತಮ್ಮ ಶಿಷ್ಯರನ್ನು ತಿದ್ದಿದ್ದು ಮತ್ತದೇ ಭಾವದಿಂದಲ್ಲದೇ ಮತ್ತೇನಲ್ಲ. ಅಲ್ಲವೇ!

ನಾವು ಮಾಡುವ ಎಲ್ಲವನ್ನೂ ಭಗವಂತನಿಗೆ ಪ್ರೀತಿಯಿಂದ ಅರ್ಪಿಸಬೇಕೆಂಬ ಭಾವದ ಜೊತೆಗೆ, ನಾವು ಮಾಡುವ ಎಲ್ಲವನ್ನೂ ಭಗವಂತನಿಗೆ ಪ್ರಿಯವಾಗುವಂತೆ ಮಾಡಬೇಕು ಎಂಬ ಎಚ್ಚರಿಕೆಯನ್ನೂ ಈ ಎಲ್ಲ ದಾರ್ಶನಿಕರ, ಸುಧಾರಕರ, ಭಕ್ತವರೇಣ್ಯರ, ಅವಧೂತರ ಮಾತುಗಳೂ ಧ್ವನಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT