ಸೋಮವಾರ, ಜುಲೈ 13, 2020
29 °C

ಮಾಸ ಭವಿಷ್ಯ | 2020ರ ಜೂನ್ 1 ರಿಂದ 30ರವರೆಗೆ

ಪ್ರಶಾಂತ ಭಟ್ ಹೆಗ್ಗಾರ್ Updated:

ಅಕ್ಷರ ಗಾತ್ರ : | |

ಮೇಷ

ನಿಮ್ಮ ಕ್ರಿಯಾಶೀಲ ವಿಚಾರಗಳು ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ನಿಮ್ಮನ್ನು ಭಿನ್ನ ಸ್ಥಾನದಲ್ಲಿ ನಿಲ್ಲಿಸುತ್ತವೆ. ಆದ್ಯತೆಗಳಿಗೆ ಅನುಗುಣವಾಗಿ ಜವಾಬ್ದಾರಿಗಳನ್ನು ನಿರ್ವಹಿಸಿ. ಆತಂಕಗಳು ಶೀಘ್ರವಾಗಿ ದೂರವಾಗಲಿವೆ.

ಶುಭ: 3, 7, 17, 18, 25, 27
ಅಶುಭ: 6, 8, 19, 20, 29

ವೃಷಭ

ಮನರಂಜನೆಗೆ ಸಂಬಂಧಿಸಿದ ವಿಷಯಗಳು ಅದೃಷ್ಟ ತರಲಿವೆ. ಅಗತ್ಯ ವಿಶ್ರಾಂತಿಗೆ ಇದು ಅತ್ಯುತ್ತಮ ಸಮಯ. ಆದರೆ ಉತ್ಸಾಹ ಮತ್ತು ಆಶಾವಾದವನ್ನು ಕುಂದಲು ಬಿಡಬೇಡಿ. ಮುಂದೆ ಗೆಲುವಿದೆ.

ಶುಭ: 1, 5, 9, 14, 15, 27
ಅಶುಭ: 5, 7, 24, 25, 30

ಮಿಥುನ

ವೃತ್ತಿಪರ ವಿಷಯಗಳಿಗೆ ಇದು ಉತ್ತಮ ಮಾಸ. ಈ ತಿಂಗಳು ಅನೇಕ ಸಾಧ್ಯತೆಗಳು ತೆರೆದುಕೊಳ್ಳುತ್ತವೆ. ನಿಮ್ಮ ತಲೆಯಲ್ಲಿ ಹರಿದಾಡುತ್ತಿದ್ದ ಅನೇಕ ವಿಚಾರಗಳು ಈಗ ಕಾರ್ಯರೂಪಕ್ಕೆ ಬರಲಿವೆ. ಆದರೆ, ಜಾಗರೂಕರಾಗಿರಿ.

ಶುಭ: 3, 7, 9, 13, 25, 26
ಅಶುಭ: 8, 10, 24, 27, 28

ಕರ್ಕಾಟಕ

ಪ್ರೀತಿಪಾತ್ರರೊಂದಿಗೆ ನಿಮ್ಮ ಸಂಬಂಧ ಸುಧಾರಿಸಲಿದೆ. ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ವಿಶ್ಲೇಷಿಸಿ ಮತ್ತು ಅದರ ಆಧಾರದ ಮೇಲೆ ಸ್ವಂತದ ಬಜೆಟ್ ತಯಾರಿಸಿಕೊಳ್ಳಿ. ಅನಗತ್ಯ ಖರ್ಚುಗಳು ಕಡಿಮೆಯಾಗಲಿ.

ಶುಭ: 2, 7, 10, 15, 24, 28
ಅಶುಭ: 11, 12, 13, 29, 30

ಸಿಂಹ

ತಿಂಗಳ ಮಧ್ಯದಲ್ಲಿ ನಿಮ್ಮ ವೃತ್ತಿಜೀವನ ಪುನರಾರಂಭಗೊಳ್ಳಲಿದೆ. ಸಹೋದ್ಯೋಗಿಗಳೊಂದಿಗೆ ನಿಕಟ ಸಂಬಂಧ ಮುಂದುವರಿಯಲಿದೆ. ಕೆಲವು ವಿಷಯಗಳಲ್ಲಿ ಅನುಭವಿಗಳ ಮತ್ತು ಪರಿಣತರ ಸಲಹೆ ಪಡೆಯಿರಿ.

ಶುಭ: 3, 4, 13, 17, 26, 30
ಅಶುಭ: 14, 15, 27, 28, 29

ಕನ್ಯಾ

ಮಾಡಬೇಕಿರುವ ಕೆಲಸಗಳನ್ನು ಎಚ್ಚರಿಕೆಯಿಂದ ಯೋಜಿಸಿ. ಬಳಿಕ ಅವುಗಳನ್ನು ಪರಿಷ್ಕರಿಸಿ. ಮುಂದಿನ ದಿನಗಳು ಹೆಚ್ಚು ಲಾಭದಾಯಕ ಮತ್ತು ಆನಂದದಾಯಕವಾಗುತ್ತವೆ. 

ಶುಭ: 1, 6, 7, 11, 15, 29
ಶುಭ: 3, 4, 10, 28, 30

ತುಲಾ

ಹಣಕಾಸಿಗೆ ಸಂಬಂಧಿಸಿದಂತೆ ಚೇತರಿಕೆಯ ತಿಂಗಳು. ಹಿಂದಿನ ಹೂಡಿಕೆಯೊಂದು ಫಲ ಕೊಡಲಿದೆ. ಅಲ್ಲದೆ, ಈಗ ನೀವು ಕೆಲ ಉಪಯುಕ್ತ ಮತ್ತು ಲಾಭದಾಯಕ ಹೂಡಿಕೆಯನ್ನು ಯೋಜಿಸಬಹುದು.

ಶುಭ: 8, 12, 13, 16, 22, 30
ಅಶುಭ: 3, 4, 21, 28, 29

ವೃಶ್ಚಿಕ

ಹೊಸ ಸ್ನೇಹಿತರನ್ನು ಮಾಡಿಕೊಳ್ಳುವಿರಿ. ಬೌದ್ಧಿಕ ಚಟುವಟಿಕೆ ನಡೆಸುವ ಜನರ ಸಹವಾಸ ಖುಷಿ ಕೊಡಲಿದೆ. ಆನ್‌ಲೈನ್‌ ಹೊಸ ಕಲಿಕೆ ನಿಮ್ಮ ಜ್ಞಾನವನ್ನು ಹೆಚ್ಚಿಸುವ ಜೊತೆಗೆ, ಮುಂದಿನ ದಿನಗಳಲ್ಲಿ ನೆರವಿಗೆ ಬರಲಿದೆ.

ಶುಭ: 3, 26, 28, 29
ಅಶುಭ: 2, 4, 14, 27, 28

ಧನು

ಕುಟುಂಬಕ್ಕೆ ಹೆಚ್ಚಿನ ಗಮನ ನೀಡಿ. ನಿಮ್ಮ ಮನಸ್ಸು ಹೇಳಿದಂತೆ ಕೇಳಿ. ನಿಮ್ಮಲ್ಲಿನ ವಿಧೇಯತೆ ಹೊಸ ಅವಕಾಶಗಳನ್ನು ತಂದುಕೊಡಲಿದೆ. ಬೇರೆಯವರ ಜೀವನದಲ್ಲಿ ನೀವು ಧನಾತ್ಮಕ ಪ್ರಭಾವ ಬೀರಲಿದ್ದೀರಿ.

ಶುಭ: 7, 8, 13, 17, 21, 25
ಅಶುಭ: 4, 9, 10, 28, 29

ಮಕರ

ಈ ತಿಂಗಳು ಆತಂಕ ತುಸು ಹೆಚ್ಚಲಿದೆ. ಮಾಡುವ ಕೆಲಸವನ್ನು ಯೋಚಿಸಿ ಕೈಗೆತ್ತಿಕೊಂಡರೆ ಅನಾಹುತವನ್ನು ತಪ್ಪಿಸಲು ಸಾಧ್ಯ. ಕವಲು ದಾರಿಯ ಸಮಯವಿದು. ಸರಿಯಾದ ದಿಕ್ಕಿನಲ್ಲಿ ಹಜ್ಜೆಗಳನ್ನು ಇಡಿ.

ಶುಭ: 1, 14, 15, 18, 24, 29
ಅಶುಭ: 2, 10, 16, 21, 22

ಕುಂಭ

ಜೀವನವು ನಿಮಗೆ ತುಂಬಾ ಆಹ್ಲಾದಕರ ಮತ್ತು ಆನಂದದಾಯಕವಾಗಿ ಕಾಣಲಿದೆ. ಇದು ವರ್ಷದ ಉತ್ತಮ ಸಮಯ ಎಂದು ಹೇಳಬಹುದು. ಇತರರನ್ನು ಹೆಚ್ಚು ಅವಲಂಬಿಸಬೇಡಿ.  

ಶುಭ: 5, 12, 17, 18, 25, 26
ಅಶುಭ: 1, 2, 4, 16, 20

ಮೀನ

ಬಿಡುವಿಲ್ಲದ ಕೆಲಸಗಳಿಂದ ಒತ್ತಡ ಹೆಚ್ಚಲಿದೆ ಮತ್ತು ನೀವು ನಿರೀಕ್ಷಿಸಿದಷ್ಟು ಬೇಗ ಅಥವಾ ಸುಲಭವಾಗಿ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುವುದಿಲ್ಲ. ಹಾಗೆಂದು ನಿಮ್ಮ ಪ್ರಯತ್ನಗಳನ್ನು ನಿಲ್ಲಿಸದಿರಿ. 

ಶುಭ: 10, 11, 19, 21, 23, 27
ಅಶುಭ: 9, 18, 20, 25, 30

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.