ದೇಶದಲ್ಲಿ ಕೋವಿಡ್ನ ಹೊಸ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದೆ. ಮಾರ್ಚ್ ಮೂರನೇ ವಾರದ ವೇಳೆಗೆ ಪ್ರತಿದಿನ ದಾಖಲಾಗುವ ಹೊಸ ಪ್ರಕರಣಗಳ ಸಂಖ್ಯೆ ಒಂದು ಸಾವಿರದ ಆಸುಪಾಸಿನಲ್ಲಿತ್ತು. ಈಗ ಪ್ರತಿದಿನ ಪತ್ತೆಯಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ 10,000ದ ಗಡಿ ದಾಟಿದೆ. ಭಾರತ ಮಾತ್ರವಲ್ಲ ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಹಲವು ದೇಶಗಳಲ್ಲಿ ಕೋವಿಡ್ನ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ, ರೋಗಿಗಳಲ್ಲಿ ಕೋವಿಡ್ ಉಂಟುಮಾಡುತ್ತಿರುವ ಆರೋಗ್ಯದ ಸಮಸ್ಯೆಗಳ ತೀವ್ರತೆ ಕಡಿಮೆ ಇದೆ. ಹೀಗಿದ್ದೂ ಕೋವಿಡ್ ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ವಹಿಸಬೇಕು ಎಂದು ತಜ್ಞರು ಹೇಳಿದ್ದಾರೆ.

ದೇಶದಲ್ಲಿ ಕೋವಿಡ್ನ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯು ಮಾರ್ಚ್ ಕೊನೆಯ ವಾರದಲ್ಲಿಯೇ ಆರಂಭವಾಗಿತ್ತು. ನಂತರದ ದಿನಗಳಲ್ಲಿ ಏರಿಕೆ ಪ್ರಮಾಣ ಹೆಚ್ಚುತ್ತಲೇ ಹೋಯಿತು. ಆನಂತರದಲ್ಲಿ ದೇಶದಾದ್ಯಂತ ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಏರಿಸಲಾಯಿತು. ಹೀಗಾಗಿ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದು ಪತ್ತೆಯಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ.

ಬುಧವಾರ ಒಂದೇ ದಿನ 10,158 ಹೊಸ ಪ್ರಕರಣಗಳು ದಾಖಲಾಗಿವೆ. ಅದೇ ದಿನ ದೇಶದಾದ್ಯಂತ ಕೋವಿಡ್ನಿಂದ ಒಟ್ಟು 19 ಜನರು ಮೃತಪಟ್ಟಿದ್ದಾರೆ. 2022ರ ಏಪ್ರಿಲ್ನಲ್ಲಿ ಕೋವಿಡ್ ದೃಢಪಡುವ ಪ್ರಮಾಣ ಶೇ 0.6ರಷ್ಟು ಇತ್ತು. ಅಂದರೆ 1,000 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದರೆ, ಅವರಲ್ಲಿ ಆರು ಮಂದಿಯಲ್ಲಷ್ಟೇ ಕೋವಿಡ್ ದೃಢಪಡುತ್ತಿತ್ತು. ಈಗ ಕೋವಿಡ್ ದೃಢಪಡುವ ಪ್ರಮಾಣ ಶೇ 4.42ಕ್ಕೆ ಏರಿಕೆಯಾಗಿದೆ. ಮಾರ್ಚ್ನಲ್ಲಿ ಈ ಪ್ರಮಾಣ ಶೇ 2.06ರಷ್ಟು ಇತ್ತು. ಏಪ್ರಿಲ್ ಎರಡನೇ ವಾರದಲ್ಲಿ ಶೇ 3.4ಕ್ಕೆ ಏರಿಕೆಯಾಗಿತ್ತು. ಕೊರೊನಾ ಸೋಂಕು ಮತ್ತೆ ಹರಡುತ್ತಿದೆ ಎಂಬುದನ್ನು ಈ ದತ್ತಾಂಶಗಳು ಹೇಳುತ್ತವೆ. ತಜ್ಞರ ಅಂದಾಜಿನ ಪ್ರಕಾರ ಏಪ್ರಿಲ್ ಕೊನೆಯ ವಾರದ ವೇಳೆಗೆ ದೇಶದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಗರಿಷ್ಠಮಟ್ಟವನ್ನು ಮುಟ್ಟಲಿದೆ. ಆನಂತರ ಅವುಗಳ ಸಂಖ್ಯೆಯಲ್ಲಿ ಇಳಿಕೆಯಾಗಲಿದೆ. ಆದರೆ, ಕೋವಿಡ್ ಮೊದಲ ಅಲೆ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಉಂಟಾಗಿದ್ದಂತಹ ಸ್ಥಿತಿ ತಲೆದೋರುವ ಸಾಧ್ಯತೆಗಳು ಇಲ್ಲವೇ ಇಲ್ಲ ಎಂದು ತಜ್ಞರು ಹೇಳಿದ್ದಾರೆ.

ಈಗ ಕೋವಿಡ್ ದೃಢಪಟ್ಟಿರುವವರಲ್ಲೂ ರೋಗ ಲಕ್ಷಣಗಳು ಸೌಮ್ಯ ರೂಪದ್ದಾಗಿವೆ. ಗಂಟಲು ನೋವು ಮತ್ತು ಕೆರೆತ, ನೆಗಡಿ, ಜ್ವರ ಮತ್ತು ಮೈ–ಕೈ ನೋವಿನಂತಹ ಲಕ್ಷಣಗಳು ಈ ಕೋವಿಡ್ ರೋಗಿಗಳಲ್ಲಿ ಕಾಣಿಸಿಕೊಳ್ಳಲಿದೆ. ಇಷ್ಟೇ ಲಕ್ಷಣಗಳು ಇದ್ದರೆ, ಅಂತಹವರು ಆಸ್ಪತ್ರೆಗೆ ದಾಖಲಾಗುವ ಅಗತ್ಯ ಇಲ್ಲ. ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ಕೋವಿಡ್ನಿಂದ ಗುಣಮುಖರಾಗಬಹುದು. ತೀವ್ರವಾದ ಕೆಮ್ಮು, ಉಸಿರಾಟದ ಸಮಸ್ಯೆ, ಆಮ್ಲಜನಕದ ಪ್ರಮಾಣ ಕಡಿಮೆಯಾಗುವಂತಹ ಲಕ್ಷಣಗಳು ಕಾಣಿಸಿಕೊಂಡರೆ ಅಂತಹ ರೋಗಿಗಳು ಆಸ್ಪತ್ರೆಗೆ ದಾಖಲಾಗಿ, ಅಗತ್ಯ ಚಿಕಿತ್ಸೆ ಪಡೆಯಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ತನ್ನ ಪ್ರಕಟಣೆಯಲ್ಲಿ ಹೇಳಿದೆ. ದೇಶದ ವಿವಿಧ ಉನ್ನತ ಆಸ್ಪತ್ರೆಗಳ ವೈದ್ಯರೂ ಇದೇ ಸಲಹೆಯನ್ನು ನೀಡಿದ್ದಾರೆ. ಕೋವಿಡ್ನ ಮೊದಲ ಮತ್ತು ಎರಡನೇ ಅಲೆಯ ವೇಳೆ ಹಲವರಿಗೆ ಕೋವಿಡ್ ತಗುಲಿತ್ತು. ಇದರಿಂದ ಜನರಲ್ಲಿ ಕೋವಿಡ್ ನಿರೋಧಕ ಶಕ್ತಿ ಸೃಷ್ಟಿಯಾಗಿದೆ. ಹಾಗಾಗಿ ಈಗ ಕೋವಿಡ್ ಬಂದರೂ ರೋಗದ ತೀವ್ರತೆ ಕಡಿಮೆ ಇದೆ.

ಈಗ ಕೋವಿಡ್ನಿಂದ ಮೃತಪಡುವವರ ಸಂಖ್ಯೆ ಏರಿಕೆಯಾಗಿದ್ದರೂ ಒಟ್ಟು ಪ್ರಕರಣಗಳಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ಆದ್ದರಿಂದ ಕೋವಿಡ್ಗೆ ಹೆದರುವ ಅಗತ್ಯವಿಲ್ಲ. ಆದರೆ, ಅದು ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ತಜ್ಞರು ಹೇಳಿದ್ದಾರೆ. ಹೀಗಿದ್ದೂ ದೇಶದ ಹಲವು ರಾಜ್ಯಗಳಲ್ಲಿ ಕೋವಿಡ್ ತಪಾಸಣೆ ಮತ್ತು ತಡೆ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಹಲವು ರಾಜ್ಯಗಳು ಕೋವಿಡ್ ನಿರ್ವಹಣಾ ಅಣಕು ಕಾರ್ಯಾಚರಣೆ ನಡೆಸಿವೆ. ಕೋವಿಡ್ ಘಟಕಗಳು, ಆಮ್ಲಜನಕ ಉತ್ಪಾದಕಾ ಘಟಕಗಳನ್ನು ಸಜ್ಜುಗೊಳಿಸಿವೆ. ಕೆಲವು ರಾಜ್ಯಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ತಜ್ಞರು ಸಹ, ಮಾಸ್ಕ್ ಧರಿಸುವುದು, ಕೈಗಳನ್ನು ಪದೇ–ಪದೇ ಸ್ವಚ್ಛಗೊಳಿಸುವುದರ ಮೂಲಕ ಕೋವಿಡ್ ಹರಡುವುದನ್ನು ತಡೆಯಬಹುದು ಎಂದು ಸಲಹೆ ನೀಡಿದ್ದಾರೆ.

ಪ್ರತಿದಿನ ಹೊಸ ಪ್ರಕರಣ: 10 ಸಾವಿರದ ಗಡಿ ದಾಟಿದ ಕೋವಿಡ್

* ಕೋವಿಡ್ ಪ್ರಕರಣಗಳ ತೀವ್ರ ಏರಿಕೆಯ ಹಿಂದೆ ಓಮೈಕ್ರಾನ್ನ ಉಪತಳಿ ಎಕ್ಸ್ಬಿಬಿ.1.16 ಕಾರಣ ಎನ್ನಲಾಗಿದೆ

* ತಿಂಗಳ ಆರಂಭದಲ್ಲಿ, ಏಪ್ರಿಲ್ 1ರಂದು 3,824 ಪ್ರಕರಣಗಳು ವರದಿಯಾಗಿದ್ದವು. ಏ.12ರ ಹೊತ್ತಿಗೆ ನಿತ್ಯ ವರದಿಯಾಗುವ ಪ್ರಕರಣಗಳ ಸಂಖ್ಯೆ 10 ಸಾವಿರದ ಗಡಿಯನ್ನು ದಾಟಿದೆ

* 12 ದಿನಗಳ ಅವಧಿಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಶೇ 165ರಷ್ಟು ಏರಿಕೆಯಾಗಿದೆ

* ಕಳೆದ ವರ್ಷದ ಇದೇ ಅವಧಿಯಲ್ಲಿ ಅಂದರೆ, 2022ರ ಏಪ್ರಿಲ್ ತಿಂಗಳ ಆರಂಭದ ಅವಧಿಯಲ್ಲಿ ನಿತ್ಯ ವರದಿಯಾಗುತ್ತಿದ್ದ ಕೋವಿಡ್ ಪ್ರಕರಣಗಳ ಸಂಖ್ಯೆ ಸರಿಸುಮಾರು ಸಾವಿರದ ಆಸುಪಾಸಿನಲ್ಲಿತ್ತು. ಈ ವರ್ಷ ಮೂರು ಸಾವಿರದಿಂದ ಆರಂಭವಾಗಿ, 10 ಸಾವಿರಕ್ಕೆ ಏರಿಕೆಯಾಗಿದೆ

ದಿನ;2023ರ ಪ್ರಕರಣ;2022ರ ಪ್ರಕರಣ

ಏ.1;3,824;1,096

ಏ.2;3,641;913

ಏ.3;3,038;795

ಏ.4;4,435;1,086

ಏ.5;5,335;1,033

ಏ.6;6,050;1,109

ಏ.7;6,155;1,150

ಏ.8;5,357;1,054

ಏ.9;5,880;861

ಏ.10;5,676;796

ಏ.11;7,830;1,088

ಏ.12;10,158;1,007

ಸಾವಿನ ಸಂಖ್ಯೆ ಕಡಿಮೆ

ಏಪ್ರಿಲ್ ತಿಂಗಳ ಮೊದಲ 12 ದಿನಗಳಲ್ಲಿ ದೇಶದಲ್ಲಿ ಒಟ್ಟು 158 ಜನರು ಕೋವಿಡ್ನಿಂದ ಮೃತಪಟ್ಟಿದ್ದಾರೆ. ಪ್ರತೀ ದಿನ ಬೆರಳೆಣಿಕೆಯ ಜನರಷ್ಟೇ ಕೋವಿಡ್ಗೆ ಬಲಿಯಾಗಿದ್ದಾರೆ. ಕೋವಿಡ್ ತೀವ್ರವಾಗಿದ್ದ ಅವಧಿಯಲ್ಲಿ ಸಾವಿನ ಸಂಖ್ಯೆ ಸಾವಿರದ ಲೆಕ್ಕದಲ್ಲಿತ್ತು. ಆದರೆ, ಈಗಿನ ಸಾವಿನ ಸಂಖ್ಯೆಯು ತೀರಾ ಕಡಿಮೆಯಿದೆ. ಕೋವಿಡ್ ಲಸಿಕೆಯ ಪರಿಣಾಮವಾಗಿ ಸಾವಿನ ಪ್ರಕರಣಗಳು ಅಷ್ಟಾಗಿ ವರದಿಯಾಗುತ್ತಿಲ್ಲ ಎಂದು ತಜ್ಞರು ಅಂದಾಜಿಸಿದ್ದಾರೆ.

ಈಗ ಮೃತಪಡುತ್ತಿರುವ ಕೋವಿಡ್ ರೋಗಿಗಳ ಸಾವಿಗೆ ಕೋವಿಡ್ ಒಂದೇ ಕಾರಣ ಅಲ್ಲ ಎಂದು ತಜ್ಞ ವೈದ್ಯರು ಹೇಳಿದ್ದಾರೆ. ಕ್ಯಾನ್ಸರ್, ಶ್ವಾಸಕೋಶ ಸೋಂಕು, ಕ್ಷಯ ಸೇರಿದಂತೆ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಈಗಾಗಲೇ ಎದುರಿಸುತ್ತಿರುವ ರೋಗಿಗಳು ಕೋವಿಡ್ನಿಂದ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಕೋವಿಡ್ ತಗುಲಿದ್ದರೂ ಸಹ, ಗಂಭೀರ ಆರೋಗ್ಯ ಸಮಸ್ಯೆಗಳೇ ಸಾವಿನ ಹಿಂದಿರುವ ಕಾರಣಗಳು ಎಂದು ವಿಶ್ಲೇಷಿಸಿದ್ದಾರೆ.

ಸಾವಿನ ಸಂಖ್ಯೆ ಕಡಿಮೆಯಿದೆ ಎಂದ ಮಾತ್ರಕ್ಕೆ ಕೋವಿಡ್ ಅನ್ನು ಕಡೆಗಣಿಸುವುದು ಸರಿಯಲ್ಲ ಎಂದು ವೈದ್ಯರು ಹೇಳಿದ್ದಾರೆ. ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವುದರಿಂದ ಸೋಂಕು ತಗುಲದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಅದರಲ್ಲೂ, ತೀವ್ರ ಸ್ವರೂಪದ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಜನರು ಸೋಂಕಿಗೆ ಒಳಗಾಗದಂತೆ ಸಾಕಷ್ಟು ಎಚ್ಚರಿಕೆ ವಹಿಸುವುದು ಸದ್ಯದ ಅಗತ್ಯ ಎಂದು ವೈದ್ಯರು ಹೇಳಿದ್ದಾರೆ.

12 ದಿನದಲ್ಲಿ 158 ಸಾವು

ದಿನ;ಸಾವು

ಏ.1;9

ಏ.2;5

ಏ.3;11

ಏ.4;9

ಏ.5;5

ಏ.6;13

ಏ.7;14

ಏ.8;11

ಏ.9;11

ಏ.10;14

ಏ.11;21

ಏ.12;16

ಏ.13;19

ಕೋವಿಡ್ ಅಲೆ ಈಗ ಕಾಣಿಸಿಕೊಂಡಿಲ್ಲ. ಈ ಅವಧಿಯಲ್ಲಿ ಸಹಜವಾಗಿ ಉಸಿರಾಟಕ್ಕೆ ಸಂಬಂಧಿಸಿದ ವಿವಿಧ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೋವಿಡ್ಗಿಂತ ಎಚ್1ಎನ್1, ಎಚ್3ಎನ್2ನಂತಹ ಸೋಂಕು ಹೆಚ್ಚಾಗಿ ಪತ್ತೆಯಾಗುತ್ತಿದೆ. ಆದ್ದರಿಂದ ಕೆಮ್ಮು, ಜ್ವರ ಇರುವವರು ಮುಖಗವಸು ಹಾಕಿಕೊಳ್ಳಬೇಕು. ಶ್ವಾಸಕೋಶ, ಹೃದಯ ಸೇರಿ ವಿವಿಧ ಅಂಗಾಂಗಗಳ ಅಸ್ವಸ್ಥತೆ ಸಮಸ್ಯೆ ಇರುವವರು ಸೋಂಕಿನಿಂದ ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಬೇಕು. ಕೋವಿಡ್ ಪ್ರಕರಣಗಳ ಹೆಚ್ಚಳದ ಬಗ್ಗೆ ನಿಗಾ ಇಡಬೇಕು.

- ಡಾ.ಸಿ.ಎನ್. ಮಂಜುನಾಥ್, ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ

ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಚುನಾವಣಾ ಆಯೋಗವೇ ಕೋವಿಡ್ಗೆ ಸಂಬಂಧಿಸಿದ ಮಾರ್ಗಸೂಚಿ ಹೊರಡಿಸಿದೆ. ಕೋವಿಡ್ ನಿಯಮಗಳ ಪಾಲನೆ ಬಗ್ಗೆ ಆಯೋಗವೇ ಬಿಬಿಎಂಪಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡುತ್ತದೆ. ಈಗ ಎಕ್ಸ್ಬಿಬಿ ತಳಿ ಕಾಣಿಸಿಕೊಂಡಿದ್ದು, ಸೋಂಕು ಎಲ್ಲೆಡೆ ವ್ಯಾಪಿಸಿಕೊಳ್ಳುವ ಸಾಧ್ಯತೆಯಿದೆ. ಚುನಾವಣೆ, ಐಪಿಎಲ್ ಪಂದ್ಯಾವಳಿ, ಬೇಸಿಗೆ ರಜೆ ಸೇರಿ ವಿವಿಧ ಕಾರಣಗಳಿಂದ ಕೋವಿಡ್ ಪ್ರಕರಣ ಮೇ ಅಂತ್ಯದವರೆಗೂ ಏರುಗತಿಯಲ್ಲಿಯೇ ಇರುವ ಸಾಧ್ಯತೆಯಿದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು.

- ಡಿ. ರಂದೀಪ್, ಆರೋಗ್ಯ ಇಲಾಖೆ ಆಯುಕ್ತ

ಆಧಾರ: ಆರೋಗ್ಯ ಸಚಿವಾಲಯದ ಪ್ರಕಟಣೆಗಳು, ಪಿಟಿಐ, ಕೋವಿನ್ ಪೋರ್ಟಲ್, ಕೋವಿಡ್–19 ಪೋರ್ಟಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.