ಬಾಗಲಕೋಟೆ: ಎರಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಹೈಕಮಾಂಡ್ ಗಮನಕ್ಕೆ ತರುವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಬಾದಾಮಿಯಲ್ಲಿ ಶುಕ್ರವಾರ ಬಾದಾಮಿ ಸೇರಿದಂತೆ 18 ಗ್ರಾಮಗಳ ಶಾಶ್ವತ ಕುಡಿಯುವ ನೀರಿನ ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು.
ಹೈಕಮಾಂಡ್ ಬಾದಾಮಿಯಲ್ಲಿ ನಿಲ್ಲಿ ಎಂದರೆ ನಿಲ್ತೇನೆ. ಇಲ್ಲ ಅಂದರೆ ಇಲ್ಲ ಎಂದು ಹೇಳಿದಾಗ ಅಭಿಮಾನಿಗಳು ವರುಣಾ ಹಾಗೂ ಬಾದಾಮಿ ಎರಡೂ ಕಡೆ ನಿಲ್ಲಬೇಕು ಎಂದು ಆಗ್ರಹಿಸಿದರು. ಆಗ ಇದನ್ನು ಹೈಕಮಾಂಡ್ ಗಮನಕ್ಕೆ ತರುವೆ ಎಂದು ತಿಳಿಸಿದರು.
ಚಾಲುಕ್ಯರ ನಾಡಿನಿಂದಲೇ ಮುಖ್ಯಮಂತ್ರಿ ಆಗಬೇಕು ಎಂಬ ಆಗ್ರಹಕ್ಕೆ ನಾನು ಮುಖ್ಯಮಂತ್ರಿ ಆಗಬೇಕಾದರೆ ಕಾಂಗ್ರೆಸ್ ಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ನಾನು ನಿಲ್ಲಲಿ, ಬಿಡಲಿ. ನಾನು ನಿಮ್ಮವನೇ. ನೀವು ನಮ್ಮವರು ಎಂದು ಭಾವುಕರಾದರು
ಚಾಮುಂಡೇಶ್ವರಿಯಲ್ಲಿ ಐದು ಬಾರಿ ಗೆದ್ದು ಅಭಿವೃದ್ಧಿ ಮಾಡಿದ್ದರೂ ಕೈಬಿಟ್ಟರು. ನೀವು ಕೈಹಿಡಿದಿರಿ. ರಾಜಕೀಯವಾಗಿ ಶಕ್ತಿ ತುಂಬಿದಿರಿ. ಬಾದಾಮಿ ಕ್ಷೇತ್ರದ ಜನರಿಗೆ ಕೋಟಿ, ಕೋಟಿ ನಮನಗಳು. ಜೀವನದಲ್ಲಿ ನಿಮ್ಮನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಎಷ್ಟೇ ಕೆಲಸ ಮಾಡಿದರೂ ನಿಮ್ಮ ಋಣ ತೀರುವುದಿಲ್ಲ. ಬಾದಾಮಿ ಜನರು ನನ್ನ ಮನದಲ್ಲಿರುತ್ತಾರೆ ಎಂದರು.
ಭಾಷಣ ಮಾಡುವಾಗ ಬಾದಾಮಿಯಿಂದಲೇ ನಿಲ್ಲಬೇಕು ಎಂ ಬ ಕೂಗು ಜೋರಾಯಿತು, ಕೆಲ ಮುಖಂಡರು ವೇದಿಕೆಯೇರಿ ಅಲ್ಲಿಯೇ ಕುಳಿತು ಆಗ್ರಹಿಸಿದರು. ನೀವು ಸುಮ್ಮನಿರದಿದ್ದರೆ ಭಾಷಣ ನಿಲ್ಲಿಸಬೇಕಾಗುತ್ತದೆ ಎಂದು ಗದರಿದರು.
ಕೊನೆಯಲ್ಲಿ ಅಭಿಮಾನಿಯೊಬ್ಬರು ಕೈಗೆ ಗಾಯ ಮಾಡಿಕೊಳ್ಳಲು ಮುಂದಾದಾಗ ಪೋಲಿಸರು ತಡೆದರು.
ಗುಳೇದಗುಡ್ಡ ಪುರಸಭೆ ಸದಸ್ಯೆ ವಂದನಾ ಗೊಪಾಲ ಭಟ್ಟಡ, ರಕ್ತದಲ್ಲಿ ನೀವು ಬಾದಾಮಿಯಿಂದ ಸ್ಪರ್ಧಿಸಬೇಕು. ಇಲ್ಲದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವೆ. ಅದಕ್ಕೆ ನೀವು ಹಾಗೂ ಹೊಳೆಬಸು ಶೆಟ್ಟರ್ ಜವಾಬ್ದಾರರು ಎಂದು ಬರೆದಿದ್ದಾರೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.