ಬುಧವಾರ, ಸೆಪ್ಟೆಂಬರ್ 22, 2021
23 °C
ಎರಡನೇ ಬಾರಿಗೆ ಯಶಸ್ಸು; ಐಪಿಎಸ್ ಹುದ್ದೆಯ ಆಕಾಂಕ್ಷೆ

ಅಭಿಲಾಷ ಬಡ್ಡೂರಗೆ 591ನೇ ರ‍್ಯಾಂಕ್

ವಿಶ್ವಜ ಕಾಡದೇವರ Updated:

ಅಕ್ಷರ ಗಾತ್ರ : | |

Prajavani

ರಬಕವಿ ಬನಹಟ್ಟಿ: ನಗರದ ನಿವಾಸಿ ಅಭಿಲಾಷ ಬಡ್ಡೂರ ಮಂಗಳವಾರ ಫಲಿತಾಂಶ ಪ್ರಕಟವಾದ ಯುಪಿಎಸ್‍ಸಿ ಪರೀಕ್ಷೆಯಲ್ಲಿ ದೇಶಕ್ಕೆ 591 ನೇ ಸ್ಥಾನ ಪಡೆದಿದ್ದಾರೆ.

ರೇಷ್ಮೆ ಇಲಾಖೆ ನಿವೃತ್ತ ನೌಕರ ಶಶಿಕಾಂತ ಬಡ್ಡೂರ ಹಾಗೂ ಸುಲೋಚನಾ ದಂಪತಿ ಪುತ್ರ ಅಭಿಲಾಷ ರಾಯಬಾಗದ ಮಹಾವೀರ ಇಂಗ್ಲಿಷ್‍ ಮಾಧ್ಯಮ ಶಾಲೆಯಲ್ಲಿ ಹೈಸ್ಕೂಲ್‍ ಶಿಕ್ಷಣ ಮುಗಿಸಿದ್ದಾರೆ. ಧಾರವಾಡದ ಜೆಎಸ್‍ಎಸ್‍ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದು, ಬೆಂಗಳೂರಿನ ಡಾ.ಅಂಬೇಡ್ಕರ್‍ ಎಂಜಿನಿಯರಿಂಗ್ ಕಾಲೇಜಿನಿಂದ ಮೆಕ್ಯಾನಿಕ್‍ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಅಲ್ಲಿಯೂ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು. ನಂತರ ಟಿಸಿಎಸ್‍ ಸಂಸ್ಥೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು.

ಎರಡನೇ ಬಾರಿಗೆ ಯಶಸ್ಸು: 2016 ರಿಂದಲೇ ಯುಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸಿದ್ದರು. ಮೊದಲ ಯತ್ನದಲ್ಲಿ ಅವರು ವಿಫಲಗೊಂಡಿದ್ದರು. 2017ರಲ್ಲಿ ಎರಡನೇ ಬಾರಿಗೆ ಪರೀಕ್ಷೆ ಬರೆದರು. ಆಗ ಸಾಮಾನ್ಯ ವಿಭಾಗದಲ್ಲಿ ದೇಶಕ್ಕೆ 531 ನೇ ಸ್ಥಾನ ಪಡೆದು ಭಾರತೀಯ ಅಂಚೆ ಸೇವೆಗೆ ಆಯ್ಕೆಯಾಗಿದ್ದರು. ಸದ್ಯ ಬೆಂಗಳೂರಿನಲ್ಲಿ ಪೋಸ್ಟಲ್‍ ಮತ್ತು ಟೆಲಿಕಮ್ಯುನಿಕೇಶನ್‍ ವಿಭಾಗದಲ್ಲಿ ವ್ಯವಸ್ಥಾಪಕರಾಗಿ ತರಬೇತಿ ಪಡೆಯುತ್ತಿದ್ದಾರೆ.

ಮೊದಲಿನಿಂದಲೂ ಐಎಎಸ್‍ ಅಧಿಕಾರಿಯಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಬೇಕು ಎಂಬ ಆಶಯ ಹೊಂದಿದ್ದ ಕಾರಣ ಫಲಿತಾಂಶ ಇನ್ನಷ್ಟು ಸುಧಾರಿಸಿಕೊಳ್ಳಲು ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಲೇ 2019ರಲ್ಲಿ ಮತ್ತೆ ಯುಪಿಎಸ್‍ಸಿ ಪರೀಕ್ಷೆ ಬರೆದರು. ಈ ಬಾರಿ ಅವರು ಓಬಿಸಿ ವಿಭಾಗದಲ್ಲಿ ರಾಷ್ಟ್ರಕ್ಕೆ 591 ಸ್ಥಾನ ಪಡೆದಿದ್ದಾರೆ.

ಈ ಬಗ್ಗೆ ’ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ಈಗ ಓಬಿಸಿ ವಿಭಾಗದಲ್ಲಿ 591 ಸ್ಥಾನ ಲಭಿಸಿದೆ. ಐಪಿಎಸ್‍ ಇಲ್ಲವೆ ಐಆರ್‍ಎಸ್ ಹುದ್ದೆ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು