ಬೀಳಗಿ: ‘ವೃದ್ಧರಾಗಿಯೂ ಕೃಷಿಯಲ್ಲಿ ತೊಡಗಿಕೊಂಡು ಜೀವನ ಸಾಗಿಸುತ್ತಿರುವ ಕೂಲಿ ಕಾರ್ಮಿಕರನ್ನು ಸತತ ಮೂರು ವರ್ಷಗಳಿಂದ ನಮ್ಮ ಸಂಘದಿಂದ ಗೌರವಿಸುತ್ತಿರುವುದು ಸಂತೋಷವನ್ನುಂಟು ಮಾಡಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಎಂ.ಬಿ.ಕಂಬಿ ಹೇಳಿದರು.

ತಾಲ್ಲೂಕಿನ ಅನಗವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಗುರುವಾರ ನಡೆದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದರು.

ಸಹಕಾರಿ ಸಂಘದ ಸದಸ್ಯರ ಮಕ್ಕಳು, ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ಸಂಘದ ಉತ್ತಮ ಸಾಲಗಾರರು ಹಾಗೂ ಠೇವಣಿದಾರರನ್ನು ಗೌರವಿಸಲಾಯಿತು.

ಸಂಘದ ಮುಖ್ಯ ಕಾರ್ಯನಿರ್ವಾಹಕ ಎಂ.ಎಸ್.ಮಠಪತಿ ವರದಿ ಮಂಡಿಸಿ, ‘ಸಂಘವು ₹6.27 ಕೋಟಿ ಸಾಲ ವಿತರಿಸಿದೆ. ₹ 1.7 ಕೋಟಿ ಷೇರು ಬಂಡವಾಳ ಹೊಂದಿದ್ದು , ಈ ಬಾರಿ ₹24 ಲಕ್ಷ ಲಾಭ ಹೊಂದಿದೆ’ ಎಂದು ತಿಳಿಸಿದರು.

ಉಪಾಧ್ಯಕ್ಷ ಎಸ್. ಜಿ. ಅಕ್ಕಿ ಮರಡಿ, ನಿರ್ದೇಶಕ ಆರ್.ಎಚ್.ಮೇಟಿ, ರಸೂಲಸಾಬ ಮುಜಾವರ, ಚಿನ್ನಪ್ಪ ಹಂಚಿನಾಳ, ಮಲ್ಲಿಕಾರ್ಜುನ ಅಂಗಡಿ, ನಿಂಗಪ್ಪ ಮಾಗಿ, ಬಸವರಾಜ ಛಬ್ಬಿ, ಶಿವಪ್ಪ ಮಾದರ, ಸಾವಿತ್ರಿ ಸಂಕಿನಮಠ, ಸುಲೋಚನಾ ಗಿರಿಯನ್ನವರ, ಡಿಸಿಸಿ ಬ್ಯಾಂಕಿನ ಅನಗವಾಡಿ ಶಾಖೆಯ ಸುಪ್ರವೈಸರ್ ವೈ. ಎಂ. ಮೇಟಿ, ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.