ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ಆಸಂಗಿ ಪಿಕೆಪಿಎಸ್; ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆ

Published 9 ಜುಲೈ 2023, 14:41 IST
Last Updated 9 ಜುಲೈ 2023, 14:41 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ಸಮೀಪದ ಆಸಂಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 12 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.

12 ಅಭ್ಯರ್ಥಿಗಳ ಸ್ಥಾನಕ್ಕೆ ಜೂನ್‌ 25ರಂದು ಚುನಾವಣೆಯ ನಡೆದಿತ್ತು. ಮತ ಎಣಿಕೆ ಕಾರ್ಯಕ್ಕೆ ಹೈಕೋರ್ಟ್ ತಡೆ ನೀಡಿತ್ತು. ಶನಿವಾರ ಮತ ಎಣಿಕೆ ಕಾರ್ಯ ನಡೆಯಿತು. ಶಾಸಕ ಸಿದ್ದು ಸವದಿ ಮಾರ್ಗದರ್ಶನದಲ್ಲಿ ಬಾಬಾಗೌಡ ಪಾಟೀಲ ಮತ್ತು ವರ್ಧಮಾನ ಕೋರಿ ಬಣದ 12 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.

ಜಯಶಾಲಿಗಳಾದ ಅಭ್ಯರ್ಥಿಗಳು: ಬಾಬಾಗೌಡ ಪಾಟೀಲ, ಯಮನಪ್ಪ ಪದ್ದಿ, ರವಿ ಗಾಯಕವಾಡ, ರಾಮಪ್ಪ ತಮದಡ್ಡಿ, ವಿಜಯ ಕೊಕಟನೂರ, ಶ್ರೀಶೈಲ ತೇಲಿ, ಸಾತಪ್ಪ ಧೂಪದಾಳ, ಗೋದವ್ವ ಶಿಂದೆ, ನೀಲವ್ವ ಮಠದ, ಶ್ರೀಮಂತ ಹರಿಜನ, ಪಾಂಡು ಕೋಳಿ, ಭಾರತಿ ಸಣ್ಣಕ್ಕಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT