ಬಾದಾಮಿ: ಮಳೆಗಾಲದಲ್ಲಿ ಮಲೆನಾಡಿನ ಬೆಟ್ಟಗಳಲ್ಲಿ ಸಾಲು ಸಾಲಾಗಿ ಜಲಪಾತಗಳನ್ನು ವೀಕ್ಷಿದಂತೆ ಉತ್ತರ ಕರ್ನಾಟಕದ ಬಯಲು ನಾಡಿನ ಬಾದಾಮಿ ಭಾಗದಲ್ಲಿ ಬೃಹತ್ ಕಲ್ಲುಬಂಡೆಗಳ ಮಧ್ಯದಲ್ಲಿ ವೈಯ್ಯಾರದಿಂದ ಧುಮ್ಮಿಕ್ಕುವ ಜಲಪಾತಗಳನ್ನು ವೀಕ್ಷಿಸಬಹುದಾಗಿದೆ.

ವೈರಿಗಳಿಂದ ಸುರಕ್ಷಿತ ಬೃಹತ್ ಬಂಡೆಗಳ ಸಾಲಿನಲ್ಲಿ ಚಾಲುಕ್ಯರು ಬಾದಾಮಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಶಿಲ್ಪಿಗಳ ಮೂಲಕ ಐಹೊಳೆ, ಬಾದಾಮಿ, ಪಟ್ಟದಕಲ್ಲು, ಹಳೇ ಮಹಾಕೂಟ, ಹೊಸ ಮಹಾಕೂಟ, ನಾಗನಾಥಕೊಳ್ಳ, ಹುಲೆಗೆಮ್ಮನಕೊಳ್ಳದಲ್ಲಿ ನೂರಾರು ಸ್ಮಾರಕಗಳನ್ನು ನಿರ್ಮಿಸಿದ್ದಾರೆ.

ಚಾಲುಕ್ಯರ ಸ್ಮಾರಕಗಳು ಆಕರ್ಷಿಸುವಂತೆ ಇಲ್ಲಿನ ಬೃಹತ್ ಬಂಡೆಗಳ ಸಾಲಿನಲ್ಲಿ ಬೆಟ್ಟದ ಮೇಲಿಂದ ಧುಮ್ಮಿಕ್ಕುವ ಜಲಧಾರೆಗಳು ಆಕರ್ಷಿಸಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಸ್ಮಾರಕಗಳನ್ನು ವೀಕ್ಷಿಸುವುದರ ಜೊತೆಗೆ ಮಳೆಗಾಲದಲ್ಲಿ ಜಲಧಾರೆಗಳನ್ನು ವೀಕ್ಷಿಸಿ ಪ್ರವಾಸಿಗರು ಖುಷಿಯಾಗುವರು.

ಬೆಟ್ಟದ ಮೇಲಿಂದ ಕೆಲವು ಜಲಧಾರೆಗಳು ಕಣ್ಣಗೆ ಕಾಣಿಸುತ್ತಿದ್ದರೆ ಕೆಲವು ಜಲಧಾರೆಗಳು ಬೆಟ್ಟದ ಗರ್ಭದಿಂದ ಹಾಲ್ನೊರೆಯಂತೆ ರಭಸದಿಂದ ಧುಮ್ಮಿಕ್ಕುತ್ತವೆ.

ಮಳೆಗಾಲದಲ್ಲಿ ಬಾದಾಮಿಯ ಉತ್ತರದ ಬಾವನ್ ಬಂಡೆ ಕೋಟೆ ಮತ್ತು ದಕ್ಷಿಣದ ರಣಮಂಡಲಕೋಟೆ ಮಧ್ಯದ ಪೂರ್ವ ದಿಕ್ಕಿನ ಎತ್ತರದ ಬೆಟ್ಟದಿಂದ ಜೋಡಿ ಅಕ್ಕ-ತಂಗಿಯರ ದಿಡುಗು ವೈಯ್ಯಾರದಿಂದ ಹಾಲಿನ ನೊರೆಯಂತೆ ಧುಮ್ಮಿಕ್ಕುವ ಜೋಡಿ ಜಲಧಾರೆಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.

ಜೋಡಿ ಜಲಧಾರೆ ಪಕ್ಕದಲ್ಲಿ ಮಹಾಕೂಟೇಶ್ವರ ರಸ್ತೆಯ ಬೆಟ್ಟದ ಗರ್ಭದಿಂದ ಹಾಲ್ನೊರೆಯ ಕಾರಂಜಿಯಂತೆ ಚಿಮ್ಮವ ನೀರು ಜೋಡಿ ಜಲಧಾರೆಗಳಿಗಿಂತ ಎರಡು ಪಟ್ಟು ಅಧಿಕ ನೀರು ಹರಿದು ಬರುತ್ತದೆ. ಅಕ್ಕತಂಗಿಯರ ದಿಡುಗು ಮತ್ತು ಬೆಟ್ಟದ ಕಾರಂಜಿಯ ನೀರು ಅಗಸ್ತ್ಯತೀರ್ಥ ಹೊಂಡಕ್ಕೆ ಸೇರಿ ಸುಂದರವಾಗಿ ಕಂಗೊಳಿಸುವುದು. ಹೊಂಡದ ದಂಡೆಯಲ್ಲಿದ್ದ ಭೂತನಾಥ ದೇವಾಲಯಗಳು ಅಗಸ್ತ್ಯತೀರ್ಥ ಹೊಂಡದಲ್ಲಿ ತೇಲುವಂತೆ ಭಾಸವಾಗುತ್ತದೆ. ಸೂರ್ಯಾಸ್ತದ ಸಮಯದಲ್ಲಿನ ಹೊಂಗಿರಣ ವರ್ಣಕ್ಕೆ ತಿರುಗುವ ಸ್ಮಾರಕಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಸುಂದರ ಮನಮೋಹಕ ದೃಶ್ಯವನ್ನು ಸೆರೆಹಿಡಿಯಲು ಪ್ರವಾಸಿಗರು ತಮ್ಮ ಕ್ಯಾಮೆರಾಗಳಲ್ಲಿ, ಮೊಬೈಲಿನಲ್ಲಿ ಕ್ಲಿಕ್ ಮಾಡಿದ್ದೆ ಮಾಡಿದ್ದು.

ಬಾದಾಮಿಯಿಂದ ಪಟ್ಟದಕಲ್ಲಿಗೆ ಹೋಗುವಾಗ ಮಾರ್ಗಮಧ್ಯದಲ್ಲಿ ಬಿ.ಎನ್. ಜಾಲಿಹಾಳ ಗ್ರಾಮದಿಂದ ಎರಡು ಕಿ.ಮೀ. ಅಂತರದಲ್ಲಿ ಹುಲಿಗೆಮ್ಮನಕೊಳ್ಳದ ಬೆಟ್ಟದ ಮೇಲಿಂದ ಮಳೆಯಲ್ಲಿ ಎರಡು ಮೂರು ಕಡೆ ಜಲಧಾರೆಗಳು ಧುಮ್ಮಿಕ್ಕುತ್ತವೆ. ಒಂದು ಜಲಪಾತ 250 ಅಡಿ ಮೇಲಿಂದ ನೀರು ಧುಮ್ಮಿಕ್ಕುತ್ತದೆ. ಪ್ರವಾಸಿಗರು ಇಲ್ಲಿ ಸ್ನಾನ ಮಾಡಿ ಸಂಭ್ರಮಿಸುವರು.

ಮಹಾಕೂಟೇಶ್ವರ ದೇವಾಲಯದ ಹಿಂದಿನ ಬೆಟ್ಟದಲ್ಲಿ ಧುಮ್ಮಿಕ್ಕುವ ನೀರು ಹರಿದು ಮಹಾಕೂಟೇಶ್ವರ ಪುಷ್ಕರಣಿಗೆ ಬುಗ್ಗೆಗಳಾಗಿ ಸೇರುವವು. ಪುಷ್ಕರಣಿಯಲ್ಲಿ ವರ್ಷದುದ್ದಕ್ಕೂ ನೀರಿನಿಂದ ಕಂಗೊಳಿಸುವುದು.

ಕಬ್ಬಲಗೇರಿ ಗ್ರಾಮದ ಬೆಟ್ಟದ ಮೇಲಿಂದ ಹರಿಯುವ ನೀರು ಸಿದ್ದನಗವಿ ಹಳ್ಳವಾಗಿ ಬಾದಾಮಿ ಒಂದು ಕಿ.ಮೀ. ಸಮೀಪದ ರೈಲ್ವೆ ಸ್ಟೇಷನ್ ರಸ್ತೆಯ ಕೋಣಮ್ಮ ದೇವಾಲಯದ ಎದುರಿನ ಬೆಟ್ಟದ ಗರ್ಭದಿಂದ ಮತ್ತು ಅಯ್ಯಪ್ಪಸ್ಮಾಮಿ ದೇವಾಲಯ ಸಮೀಪದ ಬೆಟ್ಟದ ಗರ್ಭದಿಂದ ಬರುವ ನೀರು ಪಾರದಬಾಯಿ ಹಳ್ಳವಾಗಿ, ಬನಶಂಕರಿ ರಸ್ತೆಯ ಬೆಟ್ಟದ ಕನ್ನರಗವಿ ಜಲಧಾರೆ ಹಳ್ಳವಾಗಿ ಹರಿಯುವ ಜಲಧಾರೆಗಳು ಪ್ರವಾಸಿಗರಿಂದ ದೂರವಾಗಿವೆ.

‘ ಪ್ರತಿಷರ್ಷ ನಾವು ಮಳೆಗಾಲದಲ್ಲಿ ಪ್ರವಾಸಕ್ಕೆ ಬರುತ್ತೇವೆ. ಹುಲಿಗೆಮ್ಮನಕೊಳ್ಳ ಆಕರ್ಷಕ ಪ್ರವಾಸಿ ತಾಣವಾಗಿದೆ. ಇಲ್ಲಿ ರಸ್ತೆ ಸುಧಾರಣೆಯಾಗಬೇಕು ಮತ್ತು ಪ್ರವಾಸಿಗರಿಗೆ ಸೌಕರ್ಯ ದೊರೆಯಬೇಕಿದೆ ’ ಎಂದು ಹಾವೇರಿಯ ರಮೇಶಕುಮಾರ ಪ್ರತಿಕ್ರಿಯಿಸಿದರು.

ನಿರಂತರ ಮಳೆಯಿಂದ ಜಲಪಾತಗಳ ಸೌಂದರ್ಯ ಹುಲಿಗೆಮ್ಮನಕೊಳ್ಳ ರಸ್ತೆ ದುರಸ್ತಿಗೆ ಒತ್ತಾಯ ಸ್ಮಾರಕಗಳ ಜೊತೆಗೆ ಜಲಧಾರೆಗಳ ಆಕರ್ಷಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.