ಮುಂಬೈ: ಹಣಕಾಸಿನ ಸಮಸ್ಯೆ, ಮೂಲಸೌಕರ್ಯಗಳ ಕೊರತೆ, ಪ್ರತಿಭೆಗಳ ಅಲಭ್ಯತೆ... ಇವೇನೇ ಇರಲಿ, ವೆಸ್ಟ್ ಇಂಡೀಸ್ ಆಟಗಾರಿಗೆ ಕ್ರಿಕೆಟ್ ಬಗ್ಗೆ ಹೃದಯದಲ್ಲಿ ನಿಜವಾದ ಪ್ರೀತಿ ಉಳಿದಿದ್ದರೆ, ಆ ತಂಡವು ಈಗ ಎದುರಿಸುವ ಬಿಕ್ಕಟ್ಟಿನಿಂದ ಹೊರಬರುವ ಮಾರ್ಗ ಕಂಡುಕೊಳ್ಳಲಿದೆ ಎಂದು ದಿಗ್ಗಜ ಆಟಗಾರ ಬ್ರಯಾನ್ ಲಾರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಶ್ವದೆಲ್ಲೆಡೆ ಫ್ರಾಂಚೈಸಿ ಕ್ರಿಕೆಟ್ನಲ್ಲಿ ದ್ವೀಪ ರಾಷ್ಟ್ರದ ಕ್ರಿಕೆಟಿಗರು ಮಿಂಚುತ್ತಿದ್ದರೂ, ದೀರ್ಘ ಮಾದರಿಯ ಆಟಕ್ಕೆ ಬಂದಾಗ ಅಗತ್ಯವಿರುವ ಸಂಯಮ, ಸಹನೆ ಪ್ರದರ್ಶಿಸುತ್ತಿಲ್ಲ.

‘ನಾನು ರೋಸ್ಟನ್ ಚೇಸ್ ಮತ್ತು ಇತರ ಆಟಗಾರರನ್ನು ಕಳಕಳಿಯಿಂದ ಕೇಳುವೆ– ನಿಮ್ಮ ಹೃದಯದಲ್ಲಿ ಕ್ರಿಕೆಟ್ಗೆ ಸ್ಥಾನ ಇದೆಯೇ? ವೆಸ್ಟ್ ಇಂಡೀಸ್ಗೆ ಆಡಲು ನೀವು ಪ್ರಾಮಾಣಿಕವಾಗಿ ಬಯಸುತ್ತಿರುವಿರಾ? ಇದೇ ಪ್ರಮುಖ ವಿಷಯ. ನಿಮ್ಮಲ್ಲಿ ಆ ಪ್ರೀತಿ, ಕಾಳಜಿಯಿದ್ದರೆ ನೀವು ಖಂಡಿತಕ್ಕೂ ದುರವಸ್ಥೆಯಿಂದ ಹೊರಬರುವ ದಾರಿ ಕಂಡುಕೊಳ್ಳುವಿರಿ’ ಎಂದು ಲಾರಾ ಹೇಳಿದರು.

ಸಿಯೆಟ್ ಕ್ರಿಕೆಟ್ ರೇಟಿಂಗ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅವರು ಮಾಧ್ಯಮದವರ ಜೊತೆ ಮಾತನಾಡಿದರು. ‘ಈಗ ನಿಮ್ಮ ಮುಂದೆ ಒಳ್ಳೆಯ ಅವಕಾಶವಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಆಟಗಾರರನ್ನು ಒತ್ತಾಯಿಸುವೆ’ ಎಂದರು.

‘ನಾನು 17 ವರ್ಷಗಳ ಕಾಲ ವೃತ್ತಿಜೀವನದಲ್ಲಿ ಟೆಸ್ಟ್ ಕ್ರಿಕೆಟನ್ನು ಇಷ್ಟಪಟ್ಟು ಆಡಿದೆ. 40–45 ವರ್ಷಗಳ ಹಿಂದೆ ವಿವ್ ರಿಚರ್ಡ್ಸ್ ಮೊದಲಾದವರು ಆಡುವಾಗ ಈಗಿನಷ್ಟೂ ಸೌಲಭ್ಯಗಳಿರಲಿಲ್ಲ. ಪ್ರಾಕ್ಟೀಸ್ ಪಿಚ್ಗಳಿರಲಿಲ್ಲ. ಆದರೆ ಅವರ ಕ್ರಿಕೆಟ್ ಪ್ರೀತಿ ಅಸದಳವಾಗಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.