ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುನಗುಂದ | ‘ಸಕಾಲಕ್ಕೆ ಸಾಲ ಪಾವತಿಸಿ ಬ್ಯಾಂಕ್ ಪ್ರಗತಿಗೆ ಕೈ ಜೋಡಿಸಿ’

Published : 15 ಸೆಪ್ಟೆಂಬರ್ 2024, 13:18 IST
Last Updated : 15 ಸೆಪ್ಟೆಂಬರ್ 2024, 13:18 IST
ಫಾಲೋ ಮಾಡಿ
Comments

ಹುನಗುಂದ: ಬ್ಯಾಂಕ್ ನಿಂದ ಸಾಲ ಪಡೆದವರು ಸಕಾಲಕ್ಕೆ ಸಾಲ ಮರು ಪಾವತಿಸಿ ಬ್ಯಾಂಕ್ ಪ್ರಗತಿಗೆ ಕೈ ಜೋಡಿಸಿ ಎಂದು ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಶಿವಾನಂದ ಕಂಠಿ ಹೇಳಿದರು.

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಸಭಾಭವನದಲ್ಲಿ ಭಾನುವಾರ ನಡೆದ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್ ನ 63ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಹಕರ ಜೊತೆಗೆ ಆಡಳಿತ ಮಂಡಳಿಯ ಸಲಹೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಬ್ಯಾಂಕಿನ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಸದಸ್ಯರೊಬ್ಬರೂ ಸಾಲ ವಸೂಲಿ ಮತ್ತು ವಿತರಣೆಯಲ್ಲಿ ಬಡವ -ಶ್ರೀಮಂತ ಎಂಬ ಭೇದ ಭಾವ ಮಾಡಬೇಡಿ ಎಂದಾಗ ಬ್ಯಾಂಕಿನ ನಿರ್ದೇಶಕರಾದ ಮಹಾಂತೇಶ ಅವಾರಿ ಹಾಗೂ ದೇವು ಡಂಬಳ ಮಾತನಾಡಿ, ಈ ಮೊದಲು ಗ್ರಾಹಕರಿಗೆ ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲಾಗುತ್ತಿತ್ತು. ಆದರೆ ರಿಜರ್ವ ಬ್ಯಾಂಕಿನ ಕಟ್ಟುನಿಟ್ಟಿನ ನಿಯಮಗಳಿಂದಾಗಿ ಕಡಿಮೆ ಪ್ರಮಾಣದಲ್ಲಿ ಸಾಲ ವಿತರಿಸಲಾಗುತ್ತಿದೆ. ಸಾಲ ವಸೂಲಿಯಲ್ಲೂ ಬಡವ ಮತ್ತು ಶ್ರೀಮಂತ ಎಂದು ಭೇದ ಭಾವ ಮಾಡದೆ ಸಿಬ್ಬಂದಿ ನಿಯಮಗಳಿಗೆ ಅನುಸಾರವಾಗಿ ಕಠಿಣ ಕ್ರಮ ಕೈಗೊಂಡು ತಮ್ಮ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಪ್ರಧಾನ ವ್ಯವಸ್ಥಾಪಕ ಕೆ.ಎಸ್. ಆಲದಿ ವರದಿ ವಾಚಿಸಿದರು. ಬ್ಯಾಂಕಿನ ಉಪಾಧ್ಯಕ್ಷ ಅನ್ನಪೂರ್ಣ ಹೊಸೂರ, ನಿರ್ದೇಶಕ ರವಿ ಹುಚನೂರ, ಬಸವರಾಜ ನಾಡಗೌಡರ, ನೀಲಪ್ಪ ತಪೇಲಿ, ಮಲ್ಲಪ್ಪ ವೀರಾಪುರ, ಶಶಿಕಾಂತ ಪಾಟೀಲ, ರಾಜಕುಮಾರ ಬಾದವಾಡಗಿ, ಸಂಗಣ್ಣ ಕಡಪಟ್ಟಿ, ಬಸವರಾಜ ಗದ್ದಿ, ತಿರುಪತಿ ಕುಷ್ಟಗಿ, ಎಸ್.ಎಸ್. ಬಲಕುಂದಿ, ಲಕ್ಷ್ಮೀಬಾಯಿ ಮುಕ್ಕಣ್ಣವರ, ಎಸ್.ಎಸ್. ಗಂಜಿಹಾಳ, ಸುಜಾತ ನಾಗರಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT