ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾದಾಮಿ | ದಸರಾ ವಿಶೇಷ ಪೂಜಾ ಕಾರ್ಯಕ್ರಮಗಳು

Published : 1 ಅಕ್ಟೋಬರ್ 2024, 14:21 IST
Last Updated : 1 ಅಕ್ಟೋಬರ್ 2024, 14:21 IST
ಫಾಲೋ ಮಾಡಿ
Comments

ಬಾದಾಮಿ: ದಸರಾ ಹಬ್ಬದ ಪ್ರಯುಕ್ತ ಪಟ್ಟಣದ ಪ್ರಾಚೀನ ಐತಿಹಾಸಿಕ ವೆಂಕಟೇಶ್ವರ ದೇವಾಲಯದಲ್ಲಿ ಅ. 3ರಿಂದ ಅ. 12ರ ವರೆಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಭಾಗವತ, ಕಾರ್ಯದರ್ಶಿ ಎಸ್.ಜಿ. ಕುಲಕರ್ಣಿ ತಿಳಿಸಿದ್ದಾರೆ.

ಅ. 3 ರಂದು ಬೆಳಿಗ್ಗೆ 11 ಗಂಟೆಗೆ ಗರುಡ ಪಟಾರೋಹಣದೊಂದಿಗೆ ಘಟಸ್ಥಾಪನೆ ನಡೆಯಲಿದೆ. ನಿತ್ಯ ಹೋಮ-ಹವನ ಮತ್ತು ವೆಂಕಟೇಶ ಪುರಾಣ ಹಾಗೂ ರಾತ್ರಿ 7 ಕ್ಕೆ ಪಲ್ಲಕ್ಕಿಸೇವೆ ಮತ್ತು ವಾಹನೋತ್ಸವ ಹಮ್ಮಿಕೊಳ್ಳಲಾಗಿದೆ.

ಅ. 7 ರಂದು ಗರುಡ ಪಂಚಮಿ, ಅ. 10 ರಂದು ತ್ರಿ ರಾತ್ರೋತ್ಸವ/ಸರಸ್ವತಿ ಪೂಜಾ, ಅ. 11 ರಂದು ವಿಕರಾರೋತ್ಸವ ದುರ್ಗಷ್ಟಮಿ, ಆಯುಧ ಪೂಜೆ, ಅ. 12 ರಂದು ವೆಂಕಟೇಶ ಪುರಾಣ ಮಂಗಲ, ಬೆಳಿಗ್ಗೆ 9 ಕ್ಕೆ ರಥಾಂಗ ಹೋಮ, ಮಧ್ಯಾಹ್ನ 12 ಕ್ಕೆ ರಥೋತ್ಸವ ಮತ್ತು ಸಂಜೆ 6.30 ಕ್ಕೆ ದತ್ತಾತ್ರೇಯ ದೇವಸ್ಥಾನದಲ್ಲಿ ಶಮೀಪೂಜೆ ಬನ್ನಿಮುಡಿಯುವ ಕಾರ್ಯಕ್ರಮ ನಡೆಯಲಿದೆ. ಭಕ್ತರು ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಲು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT