ಬಾಗಲಕೋಟೆ: ಕೇಂದ್ರದ ಉಪ ಕೃಷಿ ಮಾರುಕಟ್ಟೆ ಸಲಹೆಗಾರ ಬಿ.ಕೆ.ಪ್ರುಷ್ಟಿ ನೇತೃತ್ವದ ಕೇಂದ್ರ ತಂಡ ವಿವಿಧ ಈರುಳ್ಳಿ ಹೊಲಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ಮಾಡಿತು.

ನಂತರ ಬಾಗಲಕೋಟೆ ಕೃಷಿ ಮಾರುಕಟ್ಟೆ ಪ್ರಾಂಗಣಕ್ಕೆ ಭೇಟಿ ನೀಡಿ ಈರುಳ್ಳಿ ಮಾರಾಟದ ಹರಾಜು ಪ್ರಕ್ರಿಯೆ ವೀಕ್ಷಣೆ ಮಾಡಿದರು. ಜಿಲ್ಲಾಧಿಕಾರಿ ಅವರಿಂದ ಹಾನಿಗೊಳಗಾದ ಈರುಳ್ಳಿ ಬೆಳೆಯ ಮಾಹಿತಿ ಪಡೆದುಕೊಂಡು ಹಾನಿ ಕುರಿತು ಪ್ರಸ್ತಾವ ಸಲ್ಲಿಸುವುದಾಗಿ ತಿಳಿಸಿದರು.

ರೈತರು ಬೆಳೆದ ಈರುಳ್ಳಿ ಬೆಳೆ ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ರೈತರಿಗೆ ಸೂಕ್ತ ಪರಿಹಾರ ದೊರೆಯುಂತೆ ಮಾಡಬೇಕು ಎಂದು ಸಂಸದ ಪಿ.ಸಿ.ಗದ್ದಿಗೌಡರ ಮತ್ತು ಜಿಲ್ಲಾಧಿಕಾರಿ ಸಂಗಪ್ಪ ಮನವಿ ಮಾಡಿಕೊಂಡರು. ಕೇಂದ್ರ ತಂಡದಲ್ಲಿ ಡಿಪಿಪಿಕ್ಯೂ ಉಪನಿರ್ದೇಶಕ ವಿ.ಡಿ.ನಿಗಮ್, ಗ್ರಾಹಕರ ವ್ಯವಹಾರಗಳ ಇಲಾಖೆಯ ಬೆಲೆ ಮೇಲ್ವಿಚಾರಣಾ ವಿಭಾಗದ ಉಪ ನಿರ್ದೇಶಕ ರಾಜೀವ್ ಕುಮಾರ, ಡಿ.ಎ ಮತ್ತು ಎಫ್.ಡಬ್ಲು ಉಪ ಕಾರ್ಯದರ್ಶಿ ಮನೋಜ್ ಕೆ, ಎನ್.ಎಚ್.ಆರ್.ಡಿಎಫ್ನ ಕೇಂದ್ರದ ಮುಖ್ಯಸ್ಥ ತಿಲಕ ಜೆ.ಸಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.