ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಲೋಕ ಅದಾಲತ್‌ನಲ್ಲಿ ವಿಚ್ಚೇದನ ಹಿಂಪಡೆದು ಒಂದಾದ 9 ಜೋಡಿಗಳು

Published 13 ಡಿಸೆಂಬರ್ 2023, 15:24 IST
Last Updated 13 ಡಿಸೆಂಬರ್ 2023, 15:24 IST
ಅಕ್ಷರ ಗಾತ್ರ

ಬಾಗಲಕೋಟೆ: ವಿವಾಹ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ ಒಂಬತ್ತು ದಂಪತಿ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಒಂದಾಗಿ ಜೀವನ ನಡೆಸುವ ನಿರ್ಧಾರ ತೆಗೆದುಕೊಂಡರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಿಜಯ ನೇರಳೆ ಅವರ ನೇತೃತ್ವದಲ್ಲಿ ಇತ್ತೀಚೆಗೆ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜರುಗಿದ ರಾಷ್ಟ್ರೀಯ ಲೋಕ ಅದಾಲತ್‍ನ ಕುಟುಂಬ ನ್ಯಾಯಾಲಯಗಳಲ್ಲಿ ವಿಚ್ಛೇದನ ಕೋರಿ 9 ಜೋಡಿಗಳು ಅರ್ಜಿ ಸಲ್ಲಿಸಿದ್ದರು. ಸಂಧಾನ ನಡೆಸಿದಾಗ ತಮ್ಮ ತಪ್ಪನ್ನು ಅರಿತು ಒಟ್ಟಿಗೆ ಬಾಳುವ ಸಂಕಲ್ಪ ಮಾಡಿದರು.

ಬಾಗಲಕೋಟೆ, ಜಮಖಂಡಿ ನ್ಯಾಯಾಲಯದಲ್ಲಿ ಒಂದು, ಬಾದಾಮಿ ನ್ಯಾಯಾಲಯದಲ್ಲಿ ಮೂರು, ಮುಧೋಳ ಹಾಗೂ ಬನಹಟ್ಟಿ ನ್ಯಾಯಾಲಯದಲ್ಲಿ ಎರಡು ಜೋಡಿಗಳು ವಿಚ್ಚೇದನ ಹಿಂಪಡೆದು ಒಂದಾಗಿದ್ದಾರೆ.

ಲೋಕ ಅದಾಲತ್‍ನಲ್ಲಿ ಬಾಕಿ ಇರುವ 8,033 ಮತ್ತು ವಾಜ್ಯ ಪೂರ್ವ 11,534 ಪ್ರಕರಣಗಳು ಸೇರಿ 19,567 ಪ್ರಕರಣಗಳನ್ನು ವಿಚಾರಣೆಗಾಗಿ ತೆಗೆದುಕೊಳ್ಳಲಾಗಿತ್ತು. ಈ ಪೈಕಿ 15,962 ಪ್ರಕರಣಗಳನ್ನು ಇತ್ಯರ್ಥ ಪಡಿಸಿ, ₹23.49 ಕೋಟಿ ರಾಜೀ ಮಾಡಿಸಲಾಯಿತು.

ಬಾಗಲಕೋಟೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಬಾಕಿ ಇದ್ದ 2,646 ಪೈಕಿ 1,999 ಪ್ರಕರಣಗಳು ಇತ್ಯರ್ಥವಾದರೆ, ಬೀಳಗಿಯಲ್ಲಿ 414 ಪ್ರಕರಣಗಳ ಪೈಕಿ 289, ಮುಧೋಳದಲ್ಲಿ 810 ಪ್ರಕರಣಗಳ ಪೈಕಿ 695, ಬನಹಟ್ಟಿಯಲ್ಲಿ 828 ಪ್ರಕರಣಗಳ ಪೈಕಿ 686, ಹುನಗುಂದದಲ್ಲಿ 551ರ ಪೈಕಿ 372, ಇಳಕಲ್‌ನಲ್ಲಿ 398 ಪೈಕಿ 342, ಜಮಖಂಡಿಯಲ್ಲಿ 1,707 ಪ್ರಕರಣಗಳ ಪೈಕಿ 1,356 ಹಾಗೂ ಬಾದಾಮಿ ನ್ಯಾಯಾಲಯದಲ್ಲಿ 679 ಪ್ರಕರಣಗಳ ಪೈಕಿ 483 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಯಿತು.

ವಾಜ್ಯ ಪೂರ್ವ ಪ್ರಕರಣಗಳಲ್ಲಿ ನೀರಿನ ಬಿಲ್ ಮತ್ತು ಇತರೆ ಬಿಲ್ ಪಾವತಿಗೆ ಸಂಬಂಧಿಸಿದಂತೆ 1,679 ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ 1,312 ಪ್ರಕರಣಗಳನ್ನು ಇತ್ಯರ್ಥಪಡಿಸಿದಾಗ ಸಂಬಂಧಿಸಿದವರು ₹5.92 ಲಕ್ಷ ಬಿಲ್ ಅನ್ನು ಪಾವತಿಸಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ 5,382 ಪೈಕಿ ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಸಾರ್ವಜನಿಕರು ₹25.27 ಲಕ್ಷ ದಂಡ, ಗ್ರಾಹಕರ ವ್ಯಾಜ್ಯಗಳಿಗೆ ಸಂಬಂಧಿಸಿದ 38 ಪ್ರಕರಣಗಳಲ್ಲಿ 24 ಇತ್ಯರ್ಥಗೊಂಡಿದ್ದು, ₹28.58 ಲಕ್ಷ ದಂಡ ಪಾವತಿ ಮಾಡಿದ್ದಾರೆ.

ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿ.ಎ.ಮೂಲಿಮನಿ, ಕುಟುಂಬ ನ್ಯಾಯಾಲಯ ಪ್ರಧಾನ ನ್ಯಾಯಾಧೀಶ ಕೃಷ್ಣಮೂರ್ತಿ ಪಡಸಲಗಿ, ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಪಲ್ಲವಿ ಆರ್, ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಹೇಮಾ ಪಸ್ತಾಪೂರ, ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮಹೇಶ ಪಾಟೀಲ, ಪ್ರಧಾನ ಸಿವಿಲ್ ನ್ಯಾಯಾಧೀಶ ಮುರುಗೇಂದ್ರ ತುಬಾಕೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದ್ಯಾವಪ್ಪ ಎಸ್.ಬಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT