ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಳಿ ಹಬ್ಬಕ್ಕೆ ಬನಹಟ್ಟಿ ಸಜ್ಜು

Published 23 ಮಾರ್ಚ್ 2024, 4:56 IST
Last Updated 23 ಮಾರ್ಚ್ 2024, 4:56 IST
ಅಕ್ಷರ ಗಾತ್ರ

ರಬಕವಿ ಬನಹಟ್ಟಿ: ಈ ಬಾರಿಯ ಸಂಭ್ರಮದ ಹೋಳಿ ಹಬ್ಬಕ್ಕೆ ರಬಕವಿ ಬನಹಟ್ಟಿ ನಗರಗಳು ಸಜ್ಜಾಗಿದ್ದು, ಮಾರ್ಚ್‌ 24 ರಂದು ಕಾಮ ದೇವತೆಯ ಪ್ರತಿಷ್ಠಾಪನೆ ಮತ್ತು25 ರಂದು ರಂಗೋತ್ಸವ ಕಾರ್ಯಕ್ರಮ ನಡೆಯಲಿದೆ.

ಇಲ್ಲಿನ ಜಮಖಂಡಿ ಕುಡಚಿ ರಾಜ್ಯ ಹೆದ್ಧಾರಿಯ ಮೇಲಿನ ಬಕರೆ ಕುಟುಂಬದವರು ವೈವಿಧ್ಯಮಯವಾದ ಕಾಮಣ್ಣನ ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.

ಕಳೆದ ಐವತ್ತು ವರ್ಷಗಳಿಗಿಂತ ಹೆಚ್ಚು ಕಾಲ ಬಕರೆ ಮನೆತನದ ನಾರಾಯಣ ಬಕರೆ ಮತ್ತು ಅವರ ಮಕ್ಕಳಾದ ಸಂಜಯ ಮತ್ತು ನಿತ್ಯಾನಂದ ಕಾಮಣ್ಣನ ಮೂರ್ತಿಗಳನ್ನು ಮಾಡುತ್ತಿದ್ದಾರೆ. ಈ ಬಾರಿ ಕಾಮ ದೇವತೆಯ ಮೂರ್ತಿಯ ಜೊತೆಗೆ ಪುನೀತ್‌ ರಾಜ್‌ಕುಮಾರ್‌, ರತಿ ದೇವಿಯನ್ನು ಹಿಂದೆ ಕೂಡ್ರಿಸಿಕೊಂಡು ದ್ವಿಚಕ್ರ ವಾಹನ ಚಲಾಯಿಸುತ್ತಿರುವ ಕಾಮಣ್ಣ, ರತಿ ದೇವಿಯೊಂದಿಗೆ ಜೋಕಾಲಿ ತೂಗಿಕೊಳ‍್ಳುತ್ತಿರುವ ಕಾಮಣ್ಣ ಸೇರಿದಂತೆ ವಿಭಿನ್ನವಾದ ಕಾಮಣ್ಣನ ವಿಗ್ರಹಗಳನ್ನು ಮಾಡಿದ್ದಾರೆ.

200ಕ್ಕಿಂತ ಹೆಚ್ಚಿನ ವಿಗ್ರಹಗಳನ್ನು ಮಾಡಿದ್ದು, ₹125 ರಿಂದ ₹600 ವರೆಗೆ ಬೆಲೆ ನಿಗದಿಪಡಿಸಲಾಗಿದೆ.

ಬನಹಟ್ಟಿಯ ಮಂಗಳವಾರ ಪೇಟೆಯಲ್ಲಿ ಈಗಾಗಲೇ ಬಣ್ಣಗಳ ವ್ಯಾಪಾರ ಕೂಡಾ ಜೋರಾಗಿದೆ. ಹೋಳಿ ಹಬ್ಬಕ್ಕಾಗಿ ಇಲ್ಲಿನ ಬಣ್ಣದ ವ್ಯಾಪಾರಸ್ಥರು ಮುಂಬೈ ಮತ್ತು ಹುಬ್ಬಳ್ಳಿಯಿಂದ ಬಣ್ಣವನ್ನು ತರಿಸಿದ್ದಾರೆ. ಈ ಬಾರಿ ಬಣ್ಣಗಳಿಗೆ ಭಾರಿ ಬೇಡಿಕೆ ಇದ್ದು, ಬಣ್ಣದ ಬೆಲೆಯೂ ಕಡಿಮೆಯಾಗಿದೆ ಎಂದು ವ್ಯಾಪಾರಸ್ಥ ಭೀಮಶಿ ರಾವಳ ತಿಳಿಸಿದರು.

ಮಾಯವಾದ ಚರ್ಮದ ಹಲಿಗೆ: ಮಾರುಕಟ್ಟೆಯಲ್ಲಿ ಚರ್ಮದ ಹಲಗೆಗಳು ಸಂಪೂರ್ಣವಾಗಿ ಮಾಯವಾಗಿದ್ದು, ಎಲ್ಲ ಕಡೆಗೂ ಫೈಬರ್ ಹಲಗೆಗಳು ಮಾರಾಟವಾಗುತ್ತಿವೆ.

ಬನಹಟ್ಟಿಯ ಮಂಗಳವಾರ ಪೇಟೆಯಲ್ಲಿ ಹೋಳಿ ಹುಣ್ಣಿಮೆ ಅಂಗವಾಗಿ ಬಣ್ಣಗಳನ್ನು ಮಾರಾಟಕ್ಕೀಡಲಾಗಿದೆ
ಬನಹಟ್ಟಿಯ ಮಂಗಳವಾರ ಪೇಟೆಯಲ್ಲಿ ಹೋಳಿ ಹುಣ್ಣಿಮೆ ಅಂಗವಾಗಿ ಬಣ್ಣಗಳನ್ನು ಮಾರಾಟಕ್ಕೀಡಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT