ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳು, ಗರ್ಭಿಣಿ, ಬಾಣಂತಿಯರು ಉಪವಾಸ!

ಜಮಖಂಡಿ: ಅಂಗನವಾಡಿಗಳಿಗೆ 20 ದಿನ ಕಳೆದರೂ ಪೂರೈಕೆಯಾಗದ ಆಹಾರ ಸಾಮಗ್ರಿ
Last Updated 20 ಡಿಸೆಂಬರ್ 2019, 13:03 IST
ಅಕ್ಷರ ಗಾತ್ರ

ಜಮಖಂಡಿ: ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಅಡುಗೆ ಮಾಡಲು ಆಹಾರ ಪದಾರ್ಥ ಪೂರೈಕೆ ಕಳೆದ 20 ದಿನಗಳಿಂದ ಸ್ಥಗಿತಗೊಂಡಿದೆ. ಇದರಿಂದ ಬಾಲವಾಡಿಗೆ ಹೋದ ಮಕ್ಕಳು ಮನೆಗೆ ಉಪವಾಸ ಮರಳುತ್ತಿದ್ದಾರೆ.

ನಿಯಮಾವಳಿಯಂತೆ ಪ್ರತಿ ತಿಂಗಳು ಐದನೇ ತಾರೀಕಿನೊಳಗೆ ಆಹಾರ ಪದಾರ್ಥ ಪೂರೈಸಬೇಕಿದೆ. ಆದರೆ ಡಿಸೆಂಬರ್ ತಿಂಗಳು 20 ದಿನ ಕಳೆದರೂ ಇನ್ನೂ ಪೂರೈಕೆ ಆಗಿಲ್ಲ. ಅಂಗನವಾಡಿಯಲ್ಲಿ ಊಟ ಕೊಡದ ಕಾರಣ ಮಕ್ಕಳು ಹಾಜರಾತಿ ಸಂಖ್ಯೆಯೂ ಕಡಿಮೆಯಾಗಿದೆ.ಅಡುಗೆ ಮಾಡಲು ಆಹಾರ ಧಾನ್ಯ ಇರದ ಕಾರಣ ಅಂಗನವಾಡಿ ಸಹಾಯಕಿಯರು ಕೆಲಸವಿಲ್ಲದೇ ಕುಳಿತುಕೊಳ್ಳುವಂತಾಗಿದೆ.

ತಾಲ್ಲೂಕಿನಲ್ಲಿ 527 ಅಂಗನವಾಡಿ ಕೇಂದ್ರಗಳಿದ್ದು 40,619 ಮಕ್ಕಳು, 5321 ಬಾಣಂತಿಯರು, 4990 ಗರ್ಭಿಣಿಯರು ಸೇರಿದಂತೆ ಒಟ್ಟು 67,142 ಫಲಾನುಭವಿಗಳು ನಿತ್ಯ ಊಟ ಮಾಡುತ್ತಾರೆ. ಇದಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರತಿ ತಿಂಗಳು ₹1 ಕೋಟಿಗೂ ಅಧಿಕ ಮೊತ್ತ ಖರ್ಚು ಮಾಡುತ್ತಿದೆ.

ಬೆದರಿಕೆ ಹಾಕುತ್ತಾರೆ:

‘ಇದು ಪ್ರತಿ ತಿಂಗಳ ಸಮಸ್ಯೆ. ಪೂರೈಕೆದಾರರು ನಿಯಮಾವಳಿಯಂತೆ ಸರಿಯಾದ ಸಮಯಕ್ಕೆ ಕಳಿಸುವುದಿಲ್ಲ. ತೂಕದಲ್ಲಿಯೂ ವ್ಯತ್ಯಾಸ ಇರುತ್ತದೆ, ಅರ್ಧಕ್ಕೂ ಹೆಚ್ಚು ರವೆ ಉಪಯೋಗಕ್ಕೆ ಬಾರದ್ದು ಇರುತ್ತದೆ. ಶೇಂಗಾ, ಬೇಳೆಯಲ್ಲಿ ಹುಳು ಇರುತ್ತವೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನ ಸೆಳೆದರೆ, ನೌಕರಿ ಇದೆ ಸುಮ್ಮನೆ ಮಾಡು ಎಂದು ಬೆದರಿಕೆ ಹಾಕುತ್ತಾರೆ’ ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ಅಳಲು ತೋಡಿಕೊಳ್ಳುತ್ತಾರೆ.

ಅಂಗನವಾಡಿಗಳಿಗೆ ಆಹಾರ ಪೂರೈಕೆ ವಿಚಾರನನ್ನ ಗಮನಕ್ಕೆ ಬಂದಿರಲಿಲ್ಲ. ಕೂಡಲೇ ಎಲ್ಲ ಅಂಗನವಾಡಿಗಳಿಗೂ ಆಹಾರ ಸಾಮಗ್ರಿ ಪೂರೈಸುವಂತೆ ಸಂಬಂಧಿಸಿದವರಿಗೆ ಸೂಚಿಸಲಿದ್ದೇನೆ. ಈ ತಿಂಗಳು ವಿಳಂಬ ಆಗಿರುವುರದಕ್ಕೆ ಸಿಡಿಪಿಒ ಅವರಿಂದ ವಿವರಣೆ ಪಡೆಯುವುದಾಗಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಸಂಜಯ್ ಹಿಪ್ಪರಗಿ ’ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT