ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೇರದಾಳ | ಕಾಂಗ್ರೆಸ್ ಬಣ್ಣ ಬಯಲು: ಸಿದ್ದು ಸವದಿ

Published : 25 ಏಪ್ರಿಲ್ 2023, 15:57 IST
Last Updated : 25 ಏಪ್ರಿಲ್ 2023, 15:57 IST
ಫಾಲೋ ಮಾಡಿ
Comments

ತೇರದಾಳ: ‘ನ್ಯಾಯಬದ್ಧವಾಗಿ ಕೆಲವು ಸಮುದಾಯಗಳಿಗೆ ಸಿಗಬೇಕಿದ್ದ ಮೀಸಲಾತಿಯನ್ನು ನೀಡದೇ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರನ್ನು ಮತಬ್ಯಾಂಕ್‌ಗಳಾಗಿ ಮಾಡಿಕೊಂಡ ಕಾಂಗ್ರೆಸ್ ಬಣ್ಣ ಇದೀಗ ಬಯಲಾಗಿದೆ. ಬಿಜೆಪಿ ಗೆಲ್ಲಿಸಲು ಜನತೆಯೇ ಮುಂದೆ ಬಂದಿದ್ದಾರೆ. ಹೀಗಾಗಿ ಮತ್ತೊಮ್ಮೆ ಕ್ಷೇತ್ರದಲ್ಲಿ ಹಾಗೂ ರಾಜ್ಯದಲ್ಲಿ ಜನತೆ ಬಿಜೆಪಿಗೆ ಆಶೀರ್ವದಿಸಲಿದೆ’ ಎಂದು ತೇರದಾಳ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಹೇಳಿದರು.

ಸಮೀಪದ ಸಸಾಲಟ್ಟಿಯಲ್ಲಿ ಮನೆಮನೆಗೆ ತೆರಳಿ ಪ್ರಚಾರ ನಡೆಸಿದ ಬಳಿಕ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

‘ನಮ್ಮ ಅಭಿವೃದ್ಧಿ ಕೆಲಸಗಳೇ ನಮ್ಮ ಶ್ರೀರಕ್ಷೆ. ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಮತ್ತೊಮ್ಮೆ ಸೇವೆ ಮಾಡಲು ಆಶೀರ್ವದಿಸಿ’ ಎಂದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಪರಶುರಾಮ ಬಸವಗೋಳ ಮಾತನಾಡಿ, ‘ಗರೀಬಿ ಹಟಾವೋ ಘೋಷಿಸಿದ ಕಾಂಗ್ರೆಸ್ ಅದನ್ನು ಜಾರಿಗೆ ತರುವಲ್ಲಿ ಎಡವಿತು. ಮೀಸಲಾತಿ ವಿಷಯದಲ್ಲಿ ಮೋಸ ಮಾಡಿ ದಲಿತರಿಗೆ ಅನ್ಯಾಯ ಮಾಡಿತು. ಬಿಜೆಪಿ ಸರ್ಕಾರ ನನೆಗುದಿಗೆ ಬಿದ್ದಿದ್ದ ಮೀಸಲಾತಿಯನ್ನು ಹೆಚ್ಚಿಸಿ ದಮನಿತ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಿತು’ ಎಂದರು.

ಯುವ ಮುಖಂಡ ಪ್ರಕಾಶ ಮಾನಶೆಟ್ಟಿ ಪಕ್ಷ ಸಂಘಟನೆಗೆ ಕಾರ್ಯಕರ್ತರು ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ದಲಿತ, ಹಿಂದುಳಿದ ಸಮುದಾಯಗಳ ಹಲವು ಕಾರ್ಯಕರ್ತರು ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರ್ಪಡೆಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT