ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: 79 ಮಂದಿ ಗುಣಮುಖ

ಚಪ್ಪಾಳಿ ತಟ್ಟಿ ಎಲ್ಲರನ್ನೂ ಬೀಳ್ಕೊಟ್ಟ ಎಸ್ಪಿ, ಜಿಲ್ಲಾ ಸರ್ಜನ್
Last Updated 20 ಜುಲೈ 2020, 16:38 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾದ 79 ಮಂದಿಯನ್ನು ಜಿಲ್ಲಾ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಬಾಗಲಕೋಟೆಯಲ್ಲಿ ಕೋವಿಡ್‌ ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇಲ್ಲಿಯವರೆಗೆ 689 ಕೋವಿಡ್ ಪಾಸಿಟಿವ್ ಪ್ರಕರಣಗಳ ಪೈಕಿ 343 ಮಂದಿ ಗುಣಮುಖರಾಗಿರುತ್ತಾರೆ. 30 ಜನ ಮೃತಪಟ್ಟಿದ್ದಾರೆ.

ಬಾಗಲಕೋಟೆಯ 15, ತಾಲ್ಲೂಕಿನ ಚಿಕ್ಕಮ್ಯಾಗೇರಿಯ ಮೂವರು, ಮುಚಖಂಡಿ ಎಲ್.ಟಿ, ತುಳಸಿಗೇರಿಯ ತಲಾ ಒಬ್ಬರು, ಇಳಕಲ್‌ನ 9, ಕಲಾದಗಿಯ 28,ಬೀಳಗಿಯ ಒಬ್ಬರು, ಗಲಗಲಿಯ ಇಬ್ಬರು, ಮುಧೋಳದ ಮೂವರು, ತಾಲ್ಲೂಕಿನ ಬುದ್ನಿ ಕೆ.ಡಿ, ಮಳಲಿಯ ತಲಾ ಒಬ್ಬರು, ಜಮಖಂಡಿಯ ಇಬ್ಬರು ಗುಣಮುಖರಾಗಿದ್ದಾರೆ.

ಗುಳೇದಗುಡ್ಡದ ಒಬ್ಬರು, ಸಮೀಪದ ಕೋಟೆಕಲ್‌ನ ಒಬ್ಬರು, ಬಾದಾಮಿಯ ಪಟ್ಟಣದ ಇಬ್ಬರು, ತಾಲ್ಲೂಕಿನ ಆಡಗಲ್ಲಿನ ಹಾಗೂ ಮನ್ನಿಕೇರಿಯ ತಲಾ ಒಬ್ಬರು, ಹುನಗುಂದ ತಾಲ್ಲೂಕಿನ ಸುಳೇಬಾವಿಯ ಇಬ್ಬರು, ಬನಹಟ್ಟಿಯ ಒಬ್ಬರು, ಬಸವನ ಬಾಗೇವಾಡಿಯ 29 ವರ್ಷದ ಯುವಕ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಶಿರೂರಿನ ಪಿ-39784, ಹುನಗುಂದ ತಾಲ್ಲೂಕಿನ ಬಲಕುಂದಿ ಎಲ್‌ಟಿಯ 47 ವರ್ಷದ ಪುರುಷ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

ಗುಣಮುಖರಾದವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಔಷಧ ಮತ್ತು ಪ್ರಮಾಣ ಪತ್ರ ವಿತರಿಸಿದರು. ಆಸ್ಪತ್ರೆಯ ಸಿಬ್ಬಂದಿ ಗುಣಮುಖರಾದವರ ಕೈಗಳಿಗೆ ಸೀಲ್ ಹಾಕಿ 14 ದಿನಗಳ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ತಿಳಿಸಿದರು. ನಂತರ ಚಪ್ಪಾಳೆ ತಟ್ಟಿ ಎಲ್ಲರನ್ನೂ ಬೀಳ್ಕೊಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT