ಬಾಗಲಕೋಟೆ: ಜಿಲ್ಲೆಯಲ್ಲಿ ಭಾನುವಾರ ಮತ್ತೆ ನಾಲ್ವರಿಗೆಕೋವಿಡ್–19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 104ಕ್ಕೆ ಏರಿಕೆಯಾಗಿದೆ.

ಬಾದಾಮಿ ತಾಲ್ಲೂಕಿನ ಯಂಡಿಗೇರಿ ಗ್ರಾಮದ 26 ವರ್ಷದ ಯುವಕ (ಪಿ-6828), ಗುಳೇದಗುಡ್ಡದ 54 ವರ್ಷದ ಮಹಿಳೆ (ಪಿ-6829) ಹಾಗೂ 28 ವರ್ಷದ ಮಹಿಳೆ (ಪಿ-6830) ಮತ್ತು ರಬಕವಿಯ 25 ವರ್ಷದ ಪುರುಷ (ಪಿ-6831) ಹೊಸದಾಗಿ ಸೋಂಕು ದೃಢಪಟ್ಟವರು.

ಯಂಡಿಗೇರಿಯ ಯುವಕ ಆಂಧ್ರಪ್ರದೇಶದಿಂದ ಮರಳಿದ್ದಾರೆ. ಉಳಿದವರು ಮಹಾರಾಷ್ಟ್ರದಿಂದ ಬಂದವರಾಗಿದ್ದು, ಅಲ್ಲಿನ ನಂಟಿನಿಂದ ಸೋಂಕು ತಗಲಿರುವುದು ದೃಢಪಟ್ಟಿದೆ.

104 ಮಂದಿ ಸೋಂಕಿತರ ಪೈಕಿ 89 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಮರಳಿದ್ದಾರೆ. 75 ವರ್ಷದ ವೃದ್ಧರೊಬ್ಬರು ಸಾವಿಗೀಡಾಗಿದ್ದಾರೆ. 14 ಪ್ರಕರಣಗಳು ಮಾತ್ರ ಸಕ್ರಿಯವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.