ಬುಧವಾರ, ಜನವರಿ 19, 2022
26 °C

ಬಾಗಲಕೋಟೆ: ಅಫೀಮು ಮಾರಾಟಕ್ಕೆ ಯತ್ನ, ಪಂಜಾಬ್‌ನ ಇಬ್ಬರು ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಪಂಜಾಬ್‌ನಿಂದ ಅಫೀಮು ತಂದು ಬೀಳಗಿ ಪಟ್ಟಣದಲ್ಲಿ ಮಾರಾಟಕ್ಕೆ ಪ್ರಯತ್ನಿಸಿದ ಇಬ್ಬರನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.

ಪಂಜಾಬ್ ನ ಪಟಿಯಾಲಾದ ಗುರುಭಕ್ಷ್ ಕಾಲೊನಿಯ ನಿವಾಸಿ ಲಾರಿ ಚಾಲಕ ಭಕ್ಷೀಸ್ ಸಿಂಗ್ (43) ಹಾಗೂ ಲಾರಿಯ ಮಾಲೀಕ ಪ್ರೀತ್ಪಾಲ್ ಸಿಂಗ್ (63) ಬಂಧಿತರು.

ಆರೋಪಿಗಳಿಂದ ₹5 ಲಕ್ಷ ಮೌಲ್ಯದ 10 ಕೆ.ಜಿ  ಅಫೀಮು ಪೌಡರ್ ವಶಪಡಿಸಿಕೊಳ್ಳಲಾಗಿದೆ.

 ಬೀಳಗಿಯ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218ಕ್ಕೆ ಹೊಂದಿಕೊಂಡಿರುವ ಕನಕದಾಸ ವೃತ್ತದಲ್ಲಿ ಗಸ್ತು ನಡೆಸುವಾಗ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು