ಬೀಳಗಿ: ರಾಜ್ಯದಲ್ಲಿ ಸಮಗ್ರ ವಿಶ್ವ ವಿದ್ಯಾಲಯಗಳನ್ನು ರಾಜ್ಯದಾದ್ಯಂತ ಸ್ಥಾಪಿಸುವಂತೆ ಸರ್ಕಾರಕ್ಕೆ ಮತ್ತು ಸಚಿವರಿಗೆ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಶುಕ್ರವಾರ ಮನವಿ ಸಲ್ಲಿಸಿದರು.

ಉತ್ತರ ಕರ್ನಾಟದ ರೈತ ಸಂಘಟನೆಗಳ ಹಾಗೂ ಜನಪ್ರತಿನಿಧಿಗಳ ಹೋರಾಟದ ಪರಿಣಾಮ ರಾಜ್ಯದಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಹಾಗೂ ಅರಣ್ಯ ಕಾಲೇಜುಗಳ ಮರು ಸಂಘಟನೆಯಾಗಬೇಕಿದೆ. ಕಳೆದ 16ನೇ ವಿಧಾನಸಭಾ ಅಧಿವೇಶನ ಮತ್ತು 155ನೇ ವಿಧಾನ ಪರಿಷತ್ತಿನ ಅಧಿವೇಶನದ ವಿಧೇಯಕ ಸಂಖ್ಯೆ 19ರಲ್ಲಿ ರಾಜ್ಯದಲ್ಲಿ ಕೃಷಿ, ಪಶುಸಂಗೋಪನೆ, ತೋಟಗಾರಿಕೆ, ಅರಣ್ಯ ಕಾಲೇಜುಗಳು ಮರುಸ್ಥಾಪನೆಗೆ ಅನುಮೋದಿಸಲಾಗಿತ್ತು.

ಆದರೆ ಇಲ್ಲಿಯವರಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮುಖ್ಯಮಂತ್ರಿ ಮತ್ತು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಿಗೆ, ಹಾಗೂ ಕೃಷಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕಳೆದ ಅಧಿವೇಶನದಲ್ಲಿ ಅನುಮೋದನೆಗೊಂಡ ಕರ್ನಾಟಕ ರಾಜ್ಯದ ಸಮಗ್ರ ವಿಶ್ವ ವಿದ್ಯಾಲಯಗಳು ಶೀಘ್ರ ಆರಂಭಗೊಳ್ಳಲಿ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.