ಬಾಗಲಕೋಟೆ: ನಗರದಲ್ಲಿ ಈದ್ ಮಿಲಾದ್ ಅಂಗವಾಗಿ ಮಂಗಳವಾರ ಭವ್ಯ ಮೆರವಣಿಗೆ ನಡೆಯಿತು.

ಬಾಗಲಕೋಟೆಯ ಪಂಕಾ ಮಸೀದಿ, ಅಡತ್ ಬಜಾರ್, ಬಸವೇಶ್ವರ ವೃತ್ತ ಸೇರಿದಂತೆ ವಿವಿಧೆಡೆ ಮೆರವಣಿಗೆ ಸಂಚರಿಸಿತು. ಯುವಕರು, ಹಿರಿಯರು ಹೆಜ್ಜೆ ಹಾಕಿದರು. ಜೀಪ್, ಕಾರು, ಟಂ ಟಂ ಸೇರಿದಂತೆ ವಿವಿಧ ವಾಹನಗಳ ಮೇಲೆ ಧ್ವಜಗಳನ್ನು ಅಳವಡಿಸಲಾಗಿತ್ತು.

ಮುಸ್ಲಿಂ ಸಮುದಾಯದ ಸಾಂಪ್ರದಾಯಿಕ ಶೈಲಿಯ ವೇಷಭೂಷಣ ತೊಟ್ಟು ಚಿಕ್ಕಮಕ್ಕಳು ಮಿಂಚಿದರು. ಹಸಿರು ಧ್ವಜಗಳು ಎಲ್ಲೆಡೆ ಕಂಡು ಬಂದವು. ಅಂಜುಮನ್ ಶಿಕ್ಷಣ ಸಂಸ್ಥೆ, ಸೀರತ್ ಸಮಿತಿ ವತಿಯಿಂದ ಮೆರವಣಿಗೆ ಆಯೋಜಿಸಲಾಗಿತ್ತು.

ಶಾಸಕ ಎಚ್.ವೈ. ಮೇಟಿ, ಅಂಜುಮನ್ ಸಂಸ್ಥೆ ಅಧ್ಯಕ್ಷ ಅಯ್ಯುಬ್ ಪುಣೇಕರ, ಕಾರ್ಯದರ್ಶಿ ಸಿಕಂದರ್ ಅಥಣಿ, ಅಕ್ಬರ್ಸಾಬ್ ಮುಲ್ಲಾ, ಅಮೀನಸಾಬ್ ರಕ್ಕಸಗಿ, ಮಹೆಬೂಬ್ಸಾಬ್ ಮುದ್ದೇಬಿಹಾಳ, ಬಾಗಲಕೋಟೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಬ್ದುಲ್ ರಜಾಕ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.