ದುಬೈ: ಈಗಾಗಲೇ ಪರೀಕ್ಷೆಗೊಳಪಟ್ಟು ಯಶಸ್ವಿ ಎನಿಸಿರುವ ಆಲ್ರೌಂಡರ್ ಆಟಗಾರರನ್ನು ಆಯ್ಕೆ ಮಾಡಿ, ಸಮತೋಲನದ ತಂಡವನ್ನು ಕಣಕ್ಕಿಳಿಸುವ ಸವಾಲು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಮುಂದಿದೆ.

ಬೇರೆ ಬೇರೆ ಮಾದರಿಗಳಲ್ಲಿ ಬಹುಕೌಶಲಗಳ ಆಟಗಾರರಲ್ಲಿಯೇ ಬ್ಯಾಟಿಂಗ್ನಲ್ಲಿಯೂ ಪ್ರಾವಿಣ್ಯ ಇರುವವರ ಮೇಲೆ ಅವರ ಚಿತ್ತ ನೆಟ್ಟಿರುವುದಂತೂ ಖಚಿತ. ಏಕೆಂದರೆ, 8ನೇ ಕ್ರಮಾಂಕದವರೆಗೂ ಬ್ಯಾಟರ್ಗಳು ಇದ್ದರೆ ತಂಡಕ್ಕೆ ಹೆಚ್ಚಿನ ಬಲ.

ಆದ್ದರಿಂದ ಬುಧವಾರ ಇಲ್ಲಿ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ನಡೆಯಲಿರುವ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧದ ಪಂದ್ಯವನ್ನು ‘ಪೂರ್ವಾಭ್ಯಾಸ’ಕ್ಕಾಗಿ ಭಾರತ ತಂಡವು ಪರಿಗಣಿಸಲಿದೆ. ತನ್ನ ಎರಡನೇ ಪಂದ್ಯದಲ್ಲಿ ಕಟ್ಟಾ ಎದುರಾಳಿ ಪಾಕಿಸ್ತಾನ ತಂಡವನ್ನು (ಸೆ.14) ಎದುರಿಸುವ ಮುನ್ನ ಯುಎಇ ವಿರುದ್ಧದ ಪಂದ್ಯವನ್ನು ಪ್ರಯೋಗದ ವೇದಿಕೆಯನ್ನಾಗಿ ಬಳಸಿಕೊಳ್ಳುವತ್ತ ಗಮನ ಇರಿಸಿದೆ.

ಭಾರತ ಮತ್ತು ಪಾಕಿಸ್ತಾನ ಮೂಲದ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ಯುಎಇ ತಂಡಕ್ಕೆ ಇದು ದೊಡ್ಡ ಪಂದ್ಯ. ಏಕೇಂದರೆ ವೇಗಿ ಜಸ್ಪ್ರೀತ್ ಬೂಮ್ರಾ ಅವರ ಎಸೆತಗಳನ್ನು ಎದುರಿಸುವುದು ಮತ್ತು ಶುಭಮನ್ ಗಿಲ್ ಅವರಂತಹ ಉತ್ತಮ ಬ್ಯಾಟರ್ಗೆ ಬೌಲಿಂಗ್ ಮಾಡುವುದು ಯುಎಇಗೆ ಹೊಸ ವಿಷಯವೇ ಸರಿ. ಸದ್ಯ ಐಸಿಸಿಯ ಸಹ ಸದಸ್ಯತ್ವ ರಾಷ್ಟ್ರವಾಗಿರುವ ಯುಎಇ ತಂಡಕ್ಕೆ ಏಷ್ಯಾ ಕಪ್ ಅನುಭವವು ಮಹತ್ವದ್ದಾಗಲಿದೆ.

ಭಾರತ ತಂಡದಲ್ಲಿ ಸದ್ಯ ವಿಕೆಟ್ ಕೀಪರ್ ಸ್ಥಾನಕ್ಕೆ ಸಂಜು ಸ್ಯಾಮ್ಸನ್ ಅಥವಾ ಜಿತೇಶ್ ಶರ್ಮಾ ಅವರನ್ನು ಕಣಕ್ಕಿಳಿಸುವ ಕುರಿತ ಜಿಜ್ಞಾಸೆ ನಡೆಯುತ್ತಿದೆ. ವಿದರ್ಭದ ಶರ್ಮಾ ಅವರ ’ಫಿನಿಷಿಂಗ್’ ಕೌಶಲ ಮತ್ತು ಆರಂಭಿಕನಾಗಿ ಅಬ್ಬರಿಸುವ ಕೇರಳದ ಸಂಜು ಅವರಲ್ಲಿ ಒಬ್ಬರನ್ನು ಕಣಕ್ಕಿಳಿಸುವ ನಿರ್ಧಾರ ಕುತೂಹಲ ಕೆರಳಿಸಿರುವುದು ಸುಳ್ಳಲ್ಲ.

ಟಿ20 ತಂಡಕ್ಕೆ ಮರಳಿರುವ ಶುಭಮನ್ ಗಿಲ್ ಅವರನ್ನು ಆರಂಭಿಕ ಬ್ಯಾಟರ್ ಸ್ಥಾನದಲ್ಲಿ ಕಣಕ್ಕಿಳಿಸುವುದರಿಂದ ಸಂಜುಗೆ ಅವಕಾಶ ಸಿಗುವುದು ಖಚಿತವಿಲ್ಲ. ಅವರು ಬೆಂಚ್ ಕಾಯುವ ಸಾಧ್ಯತೆಯೇ ಹೆಚ್ಚಿದೆ. ಗಿಲ್ ಅವರೊಂದಿಗೆ ಅಭಿಷೇಕ್ ಶರ್ಮಾ ಅವರು ಇನಿಂಗ್ಸ್ ಆರಂಭಿಸಿದರೆ ಮೂರನೇ ಸ್ಥಾನದಲ್ಲಿ ತಿಲಕ್ ವರ್ಮಾ ಅವರ ದಾಖಲೆಗಳು ಅಮೋಘವಾಗಿವೆ. ಐಸಿಸಿ ಟಿ20 ಬ್ಯಾಟರ್ಗಳ ಯಾದಿಯಲ್ಲಿ ಎರಡನೇ ಸ್ಥಾನಕ್ಕೇರಿರುವ ತಿಲಕ್ ಅವರು ಮೂರನೇ ಕ್ರಮಾಂಕದಲ್ಲಿ ಆಡುವುದು ಬಹುತೇಕ ಖಚಿತ. ನಾಲ್ಕರಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಆಡುವರು.

ಇವರ ನಂತರ ‘ಬಹುಕೌಶಲ’ದ ಆಟಗಾರರಾದ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಅವರಿಬ್ಬರೂ ಮಧ್ಯಮವೇಗದ ಬೌಲಿಂಗ್ ಮತ್ತು ಕೊನೆಯ ಹಂತದ ಓವರ್ಗಳಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಬಲ್ಲರು. ಇದರಿಂದಾಗಿ 7ನೇ ಕ್ರಮಾಂಕದಲ್ಲಿ ಜಿತೇಶ್ ಸೂಕ್ತವಾಗುತ್ತಾರೆ ಎನ್ನುವ ಅಭಿಪ್ರಾಯ ತಂಡದ ಮ್ಯಾನೇಜ್ಮೆಂಟ್ಗೆ ಮೂಡಿದರೆ ಅಚ್ಚರಿಯೇನಿಲ್ಲ.

8ನೇ ಸ್ಥಾನದಲ್ಲಿ ಕೋಚ್ ಗಂಭೀರ್ ಅವರು ಬ್ಯಾಟಿಂಗ್ ಕೌಶಲ ಇರುವವರನ್ನೇ ಕಣಕ್ಕಿಳಿಸುವತ್ತ ಹೆಚ್ಚು ಗಮನ ನೀಡುವ ಸಾಧ್ಯತೆ ಇದೆ. ಅದಕ್ಕಾಗಿ ಎಡಗೈ ಸ್ಪಿನ್ ಆಲ್ರೌಂಡರ್ ಅಕ್ಷರ್ ಪಟೇಲ್ ಅವರು ಆಡುವುದು ಬಹುತೇಕ ಖಚಿತ.

ಅವರ ನಂತರ ಅಗ್ರಮಾನ್ಯ ವೇಗಿ ಬೂಮ್ರಾ ಮತ್ತು ಟಿ20 ಮಾದರಿಯಲ್ಲಿ ಯಶಸ್ವಿ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರಿರುತ್ತಾರೆ. ಇನ್ನೋರ್ವ ಸ್ಪಿನ್ನರ್ ಆಗಿ ವರುಣ್ ಚಕ್ರವರ್ತಿ ಅಥವಾ ಕುಲದೀಪ್ ಯಾದವ್ ಆಡುವ ಅವಕಾಶ ಇದೆ. ನಾಲ್ವರು ಸ್ಪಿನ್ನರ್ಗಳನ್ನು ಕಣಕ್ಕಿಳಿಸಬಹುದಾದ ಪರಿಸ್ಥಿತಿ ಎದುರಾರಾದರೆ, ರವೀಂದ್ರ ಜಡೇಜ, ಅಕ್ಷರ್, ಕುಲದೀಪ್ ಮತ್ತು ವರುಣ್ ಸಿದ್ಧರಾಗಿದ್ದಾರೆ.

ಸೋಮವಾರ ತಂಡದ ತಾಲೀಮಿನಿಲ್ಲಿ ಎಲ್ಲ ಆಟಗಾರರೂ ಭಾಗವಹಿಸಿದ್ದರು. ಸಾಂದರ್ಭಿಕವಾಗಿ ಎಡಗೈ ಸ್ಪಿನ್ನರ್ ಆಗಿರುವ ಅಭಿಷೇಕ್ ಕೂಡ ನೆಟ್ಸ್ನಲ್ಲಿ ಬೌಲಿಂಗ್ ಅಭ್ಯಾಸ ಮಾಡಿದರು.

ಯುಎಇ ತಂಡಕ್ಕೆ ಭಾರತದ ಮಾಜಿ ಆಟಗಾರ ಲಾಲಚಂದ್ ರಜಪೂತ್ ಮಾರ್ಗದರ್ಶನ ನೀಡುತ್ತಿದ್ದಾರೆ. ಮೊಹಮ್ಮದ್ ವಾಸೀಂ, ರಾಹುಲ್ ಚೋಪ್ರಾ ಮತ್ತು ಸಿಮ್ರನ್ಜೀತ್ ಸಿಂಗ್ ಅವರು ತಂಡದ ಭರವಸೆಯ ಆಟಗಾರರಾಗಿದ್ದಾರೆ. ಅವರೆಲ್ಲರಿಗೂ ತಮ್ಮ ಸಾಮರ್ಥ್ಯವನ್ನು ತೋರಲು ಇದೊಂದು ಸುವರ್ಣಾವಕಾಶವಾಗಲಿದೆ.

ಬಾಲಕ ಶುಭಮನ್ಗೆ ಬೌಲಿಂಗ್ ಮಾಡಿದ್ದ ಸಿಮ್ರನ್ಜೀತ್!:

‘ಶುಭಮನ್ ಗಿಲ್ ಅವರು ಚಿಕ್ಕವರಿದ್ದಾಗಿನಿಂದಲೂ ನನಗೆ ಪರಿಚಯ. ಆದರೆ ಅವರಿಗೆ ನನ್ನ ನೆನಪು ಇದೆಯೋ ಇಲ್ಲವೋ ಗೊತ್ತಿಲ್ಲ. 2011–12ರ ಸಮಯ ಇರಬಹುದು. ಶುಭಮನ್ ಅವರು 11 ಅಥವಾ 12 ವರ್ಷದವರಿರಬೇಕು. ಆಗ ಮೊಹಾಲಿಯ ಪಿಸಿಎ ಅಕಾಡೆಮಿಯಲ್ಲಿ ಬೆಳಿಗ್ಗೆ 6 ರಿಂದ 11ರವರೆಗೆ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದರು. ನಾನು ಮತ್ತು ಅವರ ತಂದೆ ಬೌಲಿಂಗ್ ಮಾಡುತ್ತಿದ್ದೆವು‘ ಎಂದು ಯುಎಇಯ ಎಡಗೈ ಸ್ಪಿನ್ನರ್ ಸಿಮ್ರನ್ಜೀತ್ ಸಿಂಗ್ ಸ್ಮರಿಸಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ನಾನು ನಿಗದಿತ ಅಭ್ಯಾಸದ ವೇಳೆಯ ನಂತರವೂ ಹೆಚ್ಚು ಹೊತ್ತು ಬೌಲಿಂಗ್ ಅಭ್ಯಾಸದಲ್ಲಿ ತೊಡಗಿರುತ್ತೇನೆ. ಶುಭಮನ್ ಅವರಿಗೆ ನೆಟ್ಸ್ನಲ್ಲಿ ಬಹಳಷ್ಟು ಬೌಲಿಂಗ್ ಮಾಡಿದ್ದೇನೆ’ ಎಂದರು. ಸಿಮ್ರನ್ಜೀತ್ ಅವರು ಪಂಜಾಬ್ ರಾಜ್ಯದ ಲುಧಿಯಾನದವರು. 35 ವರ್ಷದ ಎಡಗೈ ಸ್ಪಿನ್ನರ್ ಯುಎಇ ತಂಡದ ಪ್ರಮುಖ ಆಟಗಾರರಾಗಿದ್ದಾರೆ.

ಭಾರತದ ಎದುರು ಆಡುವುದು ನಮಗೆ ಕಠಿಣ ಸವಾಲಾಗಿದೆ ಎಂಬುದರ ಅರಿವು ಇದೆ. ಆದರೆ ಇದು ನಮ್ಮನ್ನು ನಾವೇ ಪರೀಕ್ಷೆಗೆ ಒಡ್ಡಿಕೊಳ್ಳಲು ಉತ್ತಮ ಅವಕಾಶವೂ ಆಗಿದೆ.
ಲಾಲ್ಚಂದ್ ರಜಪೂತ್ ಯುಎಇ ತಂಡದ ಕೋಚ್

ತಂಡಗಳು

ಭಾರತ: ಸೂರ್ಯಕುಮಾರ್ ಯಾದವ್ (ನಾಯಕ) ಶುಭಮನ್ ಗಿಲ್ ಅಭಿಷೇಕ್ ಶರ್ಮಾ ತಿಲಕ್ ವರ್ಮಾ ಹಾರ್ದಿಕ್ ಪಾಂಡ್ಯ ಜಿತೇಶ್ ಶರ್ಮಾ (ವಿಕೆಟ್ಕೀಪರ್) ಶಿವಂ ದುಬೆ ಅಕ್ಷರ್ ಪಟೇಲ್ ಜಸ್ಪ್ರೀತ್ ಬೂಮ್ರಾ ಅರ್ಷದೀಪ್ ಸಿಂಗ್ ವರುಣ್ ಚಕ್ರವರ್ತಿ ಕುಲದೀಪ್ ಯಾದವ್ ಹರ್ಷಿತ್ ರಾಣಾ ಸಂಜು ಸ್ಯಾಮ್ಸನ್ ರಿಂಕು ಸಿಂಗ್.

ಯುಎಇ: ಮೊಹಮ್ಮದ್ ವಸೀಂ (ನಾಯಕ) ಅಲಿಶಾನ್ ಶರಾಫು ಆರ್ಯಾಂಶ್ ಶರ್ಮಾ' ಅಸಿಫ್ ಖಾನ್ ಧ್ರುವ ಪರಾಶರ್ ಇಥನ್ ಡಿಸೋಜಾ ಹೈದರ್ ಅಲಿ ಹರ್ಷಿತ್ ಕೌಶಿಕ್ ಜುನೈದ್ ಸಿದ್ದೀಕ್ ಮತಿವುಲ್ಲಾ ಖಾನ್ ಮೊಹಮ್ಮದ್ ಫಾರೂಕ್ ಮೊಹಮ್ಮದ್ ಜವಾದುಲ್ಲಾ ಮೊಹಮ್ಮದ್ ಝೋಹೈಬ್ ರಾಹುಲ್ ಚೋಪ್ರಾ ರೋಹಿದ್ ಖಾನ್ ಸಿಮ್ರನ್ಜೀತ್ ಸಿಂಗ್ ಸಗೀರ್ ಖಾನ್.

ಪಂದ್ಯ ಆರಂಭ: ರಾತ್ರಿ 8

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.