ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳಬಟ್ಟಿ ಕೊಳೆ ತುಂಬಿದ್ದ ಬಿಂದಿಗೆಗಳ ಕೆರೆಯ ನೀರಿನಡಿ ಬಚ್ಚಿಟ್ಟಿದ್ದರು!

ಬಾಗಲಕೋಟೆ: ದಂಧೆಕೋರರ ತಂತ್ರ; ಅಧಿಕಾರಿಗಳಿಗೇ ಅಚ್ಚರಿ
Last Updated 26 ಫೆಬ್ರವರಿ 2021, 16:14 IST
ಅಕ್ಷರ ಗಾತ್ರ

ಬಾಗಲಕೋಟೆ: ಅಬಕಾರಿ ಇಲಾಖೆಯ ಕಣ್ತಪ್ಪಿಸಲು ಹುನಗುಂದ ತಾಲ್ಲೂಕಿನ ಅಮೀನಗಡ ತಾಂಡಾದ ಕಳ್ಳಬಟ್ಟಿ ಸಾರಾಯಿ ತಯಾರಕರು ಕಂಡುಕೊಂಡ ಮಾರ್ಗ ಸ್ವತಃ ಇಲಾಖೆಯ ಹಿರಿಯ ಅಧಿಕಾರಿಗಳನ್ನೇ ಅಚ್ಚರಿಗೀಡು ಮಾಡಿದೆ.

ದಂಧೆಕೋರರು ಈ ಮೊದಲು ಕಳ್ಳಬಟ್ಟಿ ಕಾಯಿಸಲು ತಾಂಡಾದ ಸುತ್ತಲಿನ ಅರಣ್ಯಪ್ರದೇಶ, ಗುಡ್ಡಗಾಡಿನ ನಿರ್ಜನ ‍ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ ಕಳೆದ 10 ತಿಂಗಳಿನಿಂದ ಇಲಾಖೆ ಅಧಿಕಾರಿಗಳಿಂದ ನಡೆಯುತ್ತಿರುವ ನಿರಂತರ ದಾಳಿಯಿಂದ ಕಂಗೆಟ್ಟ ಅವರು ಈ ಬಾರಿ ಕಳ್ಳಬಟ್ಟಿ ಕೊಳೆ ಅಡಗಿಸಿ ಇಡಲು ವಿಭಿನ್ನ ಮಾರ್ಗ ಕಂಡುಕೊಂಡು ಅದಕ್ಕೆ ಅಮೀನಗಡ ಕೆರೆಯನ್ನೇ ಬಳಸಿಕೊಂಡಿದ್ದಾರೆ.

ಕೊಳೆಯಲು ಹಾಕಿದ ರಸಾಯನವನ್ನು ಪ್ಲಾಸ್ಟಿಕ್‌ ಕೊಡಗಳಲ್ಲಿ (ಬಿಂದಿಗೆ) ತುಂಬಿ ಅವುಗಳ ಬಾಯಿ ಬಿಗಿಯಾಗಿ ಮುಚ್ಚಿ ಅಮೀನಗಡ ತಾಂಡಾದ ಕೆರೆಯ ನೀರು ತುಂಬಿದ ಅಂಗಳದೊಳಗೆ ಗುಂಡಿ ತೋಡಿ ಅಲ್ಲಿ ಅಡಗಿಸಿ ಇಟ್ಟಿದ್ದಾರೆ. ಅದೇ ಜಾಗದಲ್ಲಿ ಕೊಡಗಳ ಇಟ್ಟಿರುವ ಗುರುತಿಗೆ ಅವುಗಳ ಮುಚ್ಚಳದ ಬಳಿ ದೊಡ್ಡ ಗಾತ್ರದ ಕಲ್ಲುಗಳ ಕಟ್ಟಿದ್ದಾರೆ.

ಆ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಮೀನುಗಾರಿಕೆ ಇಲಾಖೆ ಸಿಬ್ಬಂದಿಯೊಂದಿಗೆ ಶುಕ್ರವಾರ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಬೆಲ್ಲದ ಕೊಳೆಯ ರಸಾಯನ ತುಂಬಿದ್ದ 40 ಬಿಂದಿಗೆಗಳನ್ನು ವಶಪಡಿಸಿಕೊಂಡರು.

ಮೀನುಗಾರಿಕೆ ಇಲಾಖೆ ಸಿಬ್ಬಂದಿ ಕೆರೆಯ ನೀರಿನಲ್ಲಿ ಮುಳುಗಿ ಬಣ್ಣ ಬಣ್ಣದ ಕೊಡಗಳಲ್ಲಿ ತುಂಬಿ ಇಟ್ಟಿದ್ದ ರಸಾಯನವನ್ನು ಹೊರಗೆ ತಂದರು.

’ನನ್ನ 10 ವರ್ಷಗಳ ಸೇವಾವಧಿಯಲ್ಲಿ ಇದೇ ಮೊದಲ ಬಾರಿಗೆ ಕಳ್ಳಬಟ್ಟಿ ತಯಾರಿಕೆಗೆ ದಂಧೆಕೋರರು ಇಂತಹ ತಂತ್ರ ಬಳಸಿದ್ದು ಗಮನಿಸಿದೆನು. ಕೊಡಗಳನ್ನು ಬಚ್ಚಿಟ್ಟಿದ್ದ ಕಡೆ ನೀರೊಳಗಿಂದ ಸಣ್ಣದಾಗಿ ಗುಳ್ಳೆಗಳು ಮೇಲೇಳುತ್ತಿದ್ದವು. ಅವು ಕೂಡ ಬೆಲ್ಲದ ಕೊಳೆ ತುಂಬಿದ ಕೊಡಗಳ ಪತ್ತೆ ಮಾಡಲು ಸಾಧ್ಯವಾಯಿತು‘ ಎಂದು ಜಿಲ್ಲಾ ಅಬಕಾರಿ ಇಲಾಖೆ ಉಪ ಆಯುಕ್ತ ರಮೇಶ ಕುಮಾರ್ ’ಪ್ರಜಾವಾಣಿ‘ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT