ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಬಿಸಿಲು: ಟಗರುಗಳಿಗೆ ಫ್ಯಾನ್‌ ವ್ಯವಸ್ಥೆ

ಎಚ್.ಎಸ್.ಘಂಟಿ
Published 2 ಮೇ 2024, 2:46 IST
Last Updated 2 ಮೇ 2024, 2:46 IST
ಅಕ್ಷರ ಗಾತ್ರ

ಗುಳೇದಗುಡ್ಡ (ಬಾಗಲಕೋಟೆ ಜಿಲ್ಲೆ): ಗುಳೇದಗುಡ್ಡ ಪಟ್ಟಣ ಹೊರತುಪಡಿಸಿದರೆ ತಾಲ್ಲೂಕಿನಲ್ಲಿ 38 ಗ್ರಾಮಗಳಿದ್ದು ಇಲ್ಲಿ ಕೆರೆ, ಬಾವಿ, ಹಳ್ಳ ಕೊಳ್ಳಗಳು ಸಂಪೂರ್ಣವಾಗಿ ಬತ್ತಿವೆ. ಪ್ರಾಣಿ ಪಕ್ಷಿಗಳಿಗೆ ಹೆಚ್ಚಿದ ಬಿರುಬಿಸಿಲಿನಿಂದ ಸಂಕಷ್ಟವಾಗಿದೆ.

ತಾಲ್ಲೂಕಿನ ಕೊಟ್ನಳ್ಳಿ, ಸಬ್ಬಲಹುಣಸಿ, ನಾಗರಾಳ ಎಸ್.ಪಿ, ಹಾನಾಪುರ, ಹುಲ್ಲಿಕೇರಿ ಎಸ್.ಪಿ ಮುಂತಾದ ಗ್ರಾಮಗಳಲ್ಲಿ ಕುರಿಗಾಹಿಗಳು ಕುರಿ ಮೇಯಿಸುವ ವೇಳೆ ಬದಲಿಸಿಕೊಂಡಿದ್ದಾರೆ. ಬೆಳಿಗ್ಗೆ 8 ರಿಂದ 11 ಗಂಟೆ, ಸಂಜೆ 4 ರಿಂದ 6 ಗಂಟೆಯವರೆಗೆ ಮಾತ್ರ ಮೇಕೆ, ಕುರಿ ಮೇಯಿಸುತ್ತಾರೆ. ಮಧ್ಯಾಹ್ನ ಮಾತ್ರ ಮರಗಳ ನೆರಳಿನ ಅಶ್ರಯ ಪಡೆಯುತ್ತಾರೆ.

‘ಬಿಸಿಲಿನ ಧಗೆಯಿಂದ ಕುರಿ, ಟಗರುಗಳು ಮೃತಪಟ್ಟಿವೆ. ಬಿಸಿಲಿನ ಬೇಗೆ ತಪ್ಪಿಸಲು ಶೆಡ್, ಮನೆಯಲ್ಲಿ ಪ್ರತೇಕ ಕೊಠಡಿ ಮಾಡಿ ಅಲ್ಲಿ ಟಗರುಗಳಿಗೆ ಫ್ಯಾನ್‌ ಹಚ್ಚಲಾಗಿದೆ’ ಎಂದು ಸಬ್ಬಲಹುಣಸಿಯ ಕುರಿಗಾರ ಮಲ್ಲಪ್ಪ ನಡಶೇಸಿ ಹೇಳಿದರು.

ಬಿಸಿಲಿನ ತಾಪಕ್ಕೆ ಸಾಮೂಹಿಕ ದನ ಮೇಯಿಸುವುದನ್ನು ಹಳ್ಳಿಗಳಲ್ಲಿ ನಿಲ್ಲಿಸಿದ್ದಾರೆ. ದನದ ಮಾಲೀಕರು ಮನೆಯಲ್ಲೇ ಮೇವು, ನೀರಿನ ವ್ಯವಸ್ಥೆ ಮಾಡಿದ್ದಾರೆ.

‘ಬೇಸಿಗೆಯಲ್ಲಿ ಜಾನುವಾರುಗಳಿಗಳಿಗೆ ಉತ್ತಮ ನೀರನ್ನು ಕುಡಿಸಬೇಕು. ದನಕರು ಮತ್ತು ಕುರಿಗಳಿಗೆ ಗ್ರಾಮದಲ್ಲಿ ನೀರಿನ ತೊಟ್ಟಿ ನಿರ್ಮಿಸಲಾಗುತ್ತಿದೆ. ಹೀಗಾಗಿ ಪಶುಗಳಿಗೆ ಸದ್ಯ ಯಾವುದೇ ರೋಗಗಳು ಕಂಡು ಬಂದಿಲ್ಲ‘ ಎಂದು ಪಶು ವೈದ್ಯಾಧಿಕಾರಿ ಡಾ.ಸುರೇಶ ಜಾಧವ ಹೇಳಿದರು.

ಗುಳೇದಗುಡ್ಡ: ಗುಳೇದಗುಡ್ಡ ಪಟ್ಟಣ ಹೊರತುಪಡಿಸಿದರೆ ತಾಲ್ಲೂಕಿನಲ್ಲಿ 38 ಗ್ರಾಮಗಳಿದ್ದು ಇಲ್ಲಿ ಕೆರೆ ಬಾವಿ ಹಳ್ಳ ಕೊಳ್ಳಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ. ಇದರಿಂದ ಪ್ರಾಣಿ ಪಕ್ಷಿಗಳು ಹೆಚ್ಚಿದ ಬಿರುಬಿಸಿಲಿನಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿವೆ.
ಡಾ.ಸುರೇಶ ಜಾಧವ ಪಶು ವೈದ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT