ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಮಲಪ್ರಭೆಗೆ ನೀರು ಬಿಡುಗಡೆ; ಗೋವನಕೊಪ್ಪ ಹಳೆಯ ಸೇತುವೆ ಜಲಾವೃತ

Last Updated 17 ಆಗಸ್ಟ್ 2020, 7:26 IST
ಅಕ್ಷರ ಗಾತ್ರ

ಬಾಗಲಕೋಟೆ: ಸವದತ್ತಿಯ ನವಿಲು ತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಬಿಟ್ಟಿರುವುದರಿಂದ ಬಾದಾಮಿ ಹಾಗೂ ಹುನಗುಂದ ತಾಲ್ಲೂಕುಗಳ 34 ಹಳ್ಳಿಗಳಿಗೆ ಪ್ರವಾಹ ಭೀತಿ ಎದುರಾಗಿದೆ.

ಪ್ರವಾಹದಿಂದ ಗೋವಿನಕೊಪ್ಪ-ಗದಗ ಜಿಲ್ಲೆ ಕೊಣ್ಣೂರು ನಡುವಿನ ಚಿಕ್ಕ ಸೇತುವೆ ಸಂಪೂರ್ಣ ಜಲಾವೃತವಾಗಿದೆ.

ಗೋವಿನಕೊಪ್ಪದಿಂದ ಕೊಣ್ಣೂರ ಮಾಗ೯ವಾಗಿ ತೆರಳುವ ಸಂಪರ್ಕ ಸೇತುವೆ ರಸ್ತೆ ಬಂದ್ ಆಗಿದ್ದು ಹೊಸ ಸೇತುವೆ ಮೂಲಕ ಸಂಚಾರ ನಡೆದಿದೆ. ಗೋವನಕೊಪ್ಪ ಬಳಿ ನದಿ ಪಾತ್ರದ ಹೊಲಗದ್ದೆಗಳಿಗೆ ನೀರು ನುಗ್ಗಿದೆ. ಬೆಳೆಗಳು ಜಲಾವೃತವಾಗಿವೆ.

ನದಿಯಲ್ಲಿ ನೀರಿನ ಮಟ್ಟ ಹೆಚ್ಚಾದರೆ ಸುತ್ತಲಿನ ಕರ್ಲಕೊಪ್ಪ, ಬೀರನೂರು, ಹಾಗನೂರು, ತಳಕವಾಡ, ಕಿತ್ತಲಿ ಗ್ರಾಮಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ.

ನದಿ ಪಾತ್ರದ ಜನರಿಗೆ ಸುರಕ್ಷಿತ ತಾಣಗಳಿಗೆ ತೆರಳುವಂತೆ ಜಿಲ್ಲಾಡಳಿತದ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT