ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏ ಸವದಿ ನೌಕರರನ್ನು ಕರೆದು ಮಾತಾಡಪ್ಪ: ಫೋನ್ ಕರೆ ಮಾಡಿ ಸಿದ್ದರಾಮಯ್ಯ ಸಲಹೆ

Last Updated 12 ಡಿಸೆಂಬರ್ 2020, 10:28 IST
ಅಕ್ಷರ ಗಾತ್ರ

ಬಾಗಲಕೋಟೆ: ಬಾದಾಮಿಯ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.

ಈ ವೇಳೆ ವೇದಿಕೆಯಲ್ಲಿ ಕುಳಿತೇ ಸಭೆಯ ನಡುವೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಕರೆ ಮಾಡಿ ಸಾರಿಗೆ ನೌಕರರ ಮುಷ್ಕರದ ಬಗ್ಗೆ ಸಿದ್ದರಾಮಯ್ಯ ಚರ್ಚಿಸಿದರು. ಕೂಡಲೇ ಸಮಸ್ಯೆ ಪರಿಹರಿಸುವಂತೆ ಹೇಳಿದರು.

‘ಸವದಿ ಕೆಎಸ್‌ಆರ್‌ಟಿಸಿ ನೌಕರರನ್ನು ಕರೆದು ಸಮಸ್ಯೆ ಇತ್ಯರ್ಥ ಮಾಡಪ್ಪಾ.. ಏಯ್, ಜನಗಳಿಗೆ ತೊಂದ್ರೆಯಾಗುತ್ತೆ..ಅಲ್ಟಿಮೇಟ್ ನಿನ್ನ ಬೈತಾರೆ’ ಎಂದು ತಮ್ಮ ಎಂದಿನ ಶೈಲಿಯಲ್ಲಿ ಸಚಿವರಿಗೆ ಕಿವಿಮಾತು ಹೇಳಿದರು.

‘ಸವದಿ ನಿನ್ನ ಕಷ್ಟ ನನ್ಗೆ ಗೊತ್ತಿದೆ. ಕುಳಿತು ಮಾತನಾಡಿ, ಮುಷ್ಕರ ಕೈಬಿಡುವಂತೆ ಮಾಡಿ’ ಎಂದು ಸಲಹೆ ನೀಡಿದರು.

ಹಾಂ.. ನಾನು ಬಾದಾಮಿಯಲ್ಲಿದ್ದೇನೆ. ನಾಡಿದು ಬೆಂಗಳೂರಿಗೆ ಬರುತ್ತೇನೆ. ಸಾರಿಗೆ ನೌಕರರನ್ನು ತಕ್ಷಣ ಕರೆದು ಸಮಸ್ಯೆ ಬಗೆಹರಿಸಿ. ಹಳ್ಳಿ ಜನರಿಗೆ ತೊಂದರೆ ಆಗುತ್ತಿದೆ ಎಂದು ಫೋನ್ ಸಂಭಾಷಣೆಯ ವೇಳೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT