ಗುಳೇದಗುಡ್ಡ: ಪಟ್ಟಣದಲ್ಲಿ ಜಗದೀಶ, ರಾಧಾಕೃಷ್ಣ ಮಂದಿರದಲ್ಲಿ ಪುರಿ ಜಗನ್ನಾಥಸ್ವಾಮಿ ದೇವರ ಭವ್ಯ ರಥೋತ್ಸವ ಶುಕ್ರವಾರ ಬಹಳ ಸಡಗರ, ಸಂಭ್ರಮದಿಂದ ಜರುಗಿತು.

ಪಟ್ಟಣದ ಜಗದೀಶ ರಾಧಾಕೃಷ್ಣ ಮಂದಿರದಿಂದ ಹೊರಟ ರಥಯಾತ್ರೆ ಅರಳಿಕಟ್ಟಿ, ಪುರಸಭೆ, ಕಾಬ್ರಾ ಓಣೆ. ಸರಾಫ ಬಜಾರ, ಕಂಠಿಪೇಟೆ, ಗಚ್ಚಿನಕಟ್ಟಿ, ಚೌಬಜಾರ ಮೂಲಕ ಹಾಯ್ದು ಮರಳಿ ಜಗದೀಶ ಮಂದಿರಕ್ಕೆ ಬಂದು ತಲುಪಿತು. ಜಗನ್ನಾಥಸ್ವಾಮಿ ದೇವರ ರಥೋತ್ಸವದ ನಿಮಿತ್ತ ಜಗದೀಶ, ರಾಧೆ ಕೃಷ್ಣ ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು.

ಇಲ್ಲಿನ ಮಾರವಾಡಿ ಸಮಾಜ ಬಾಂಧವರು ಜಗನ್ನಾಥಸ್ವಾಮಿ ದೇವರ ಭವ್ಯ ರಥೋತ್ಸವವನ್ನು ಬಹಳ ವಿಜೃಂಭಣೆಯಿಂದ ನಡೆಸಿದರು. ರಥೋತ್ಸವದಲ್ಲಿ ನಾಸಿಕ್, ಇಚ್ಚಲಕರಂಜಿ, ಇಳಕಲ್ಲ, ರಾಯಚೂರ, ಬೆಂಗಳೂರು, ಸೋಲಾಪೂರ, ಪಂಢರಾಪೂರ, ಬಾಗಲಕೋಟೆ, ಮಹಾರಾಷ್ಟ್ರ, ಸೂರತ್, ರಬಕವಿ ಬನ್ನಟ್ಟಿ, ಜಮಖಂಡಿ ಹೀಗೆ ವಿವಿಧ ನಗರ ಪಟ್ಟಣಗಳಿಂದ ಅಪಾರ ಭಕ್ತರು ಆಗಮಿಸಿ ಅದ್ಧೂರಿ ರಥೋತ್ಸವಕ್ಕೆ ಸಾಕ್ಷಿಯಾದರು.

’ಈ ಜಗನ್ನಾಥಸ್ವಾಮಿ ದೇವರ ರಥಯಾತ್ರೆ ದೇಶದ ಅಹಮದಾಬಾದ್, ಜಗನ್ನಾಥಪುರಿ ಹೊರತು ಪಡಿಸಿದರೆ ಗುಳೇದಗುಡ್ಡದಲ್ಲಿ ಮಾತ್ರ ಕಾಣಬಹುದಾಗಿದೆ. ದೇಶದ ಒಟ್ಟು ಮೂರು ಭಾಗಗಳಲ್ಲಿ ಈ ರಥೋತ್ಸವ ಜರುಗುತ್ತದೆ. ಅದರಲ್ಲಿ ಗುಳೇದಗುಡ್ಡ ಕೂಡಾ ಒಂದು ಹೇಳಲು ಹೆಮ್ಮೆ ಅನಿಸುತ್ತದೆ’ ಎಂದು ಜಗನ್ನಾಥ ಸ್ವಾಮಿ ದೇವಸ್ಥಾನ ಅಧ್ಯಕ್ಷ ನಾರಾಯಣದಾಸ ಮುಂದ್ರಾ ಹೇಳಿದರು.

ದೇವಸ್ಥಾನದ ಆರ್ಚಕ ಜಗದೀಶ ಪೂಜಾರಿ, ಶ್ಯಾಮಸುಂದರಜಿ ಪುರೋಹಿತ, ಲಕ್ಷ್ಮೀನಾರಾಯಣ ಝಂವರ, ರಾಜೇಂದ್ರ ತೋತಲಾ, ಸಂಜಯ ಕಾಬ್ರಾ, ಶ್ರೀನಿವಾಸ ಇನಾನಿ, ಸಂಪತ್ತ ರಾಠಿ, ಸಂಪತ್ತ ಕಾಬ್ರಾ, ಸುರೇಶ ಇನಾನಿ, ಸುರಜ ದರಕ, ಗೋಪಾಲ ಮಾಲಪಾಣಿ, ಅಶೋಕ ಕಾಬ್ರಾ, ರಾಧೇಶ್ಯಾಮ ಮುಂದ್ರಾ ಗೋವಿಂದ ಇನಾನಿ, ಭರತ ದರಕ, ದೀಪಕ ಧೂತ, ಮುಂದ್ರಾ ಮುಂತಾದವರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.