ಗುಳೇದಗುಡ್ಡ: ‘ತಾವೆಲ್ಲರೂ ನನಗೆ ನಮ್ಮ ಕುಟುಂಬಕ್ಕೆ ಆಶೀರ್ವಾದ ಮಾಡಿ ಶಾಸಕನನ್ನಾಗಿ ಮಾಡಿದ್ದಿರಿ, ನಿಮ್ಮ ಋಣ ತೀರಿಸುವ ಅವಕಾಶವಿದ್ದು, ಹಂಗರಗಿ ಗ್ರಾಮದ ಅಭಿವೃದ್ಧಿ ಮಾಡುವ ಮೂಲಕ ಋಣವನ್ನು ತೀರಿಸುತ್ತೇನೆ. ಋಣದ ಅರಿವು ಅಭಿಮಾನ ನನಗೆ ಇದೆ’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಅವರು ತಾಲ್ಲೂಕಿನ ಹಂಗರಗಿ ಗ್ರಾಮ ದಲ್ಲಿ ಮಂಗಳವಾರ ಜರುಗಿದ ಸಂಜೀವಿನಿ ನೂತನ ಕಟ್ಟಡ ಹಾಗೂ ಗ್ರಾಮ ಪಂಚಾಯಿತಿ ಗ್ರಂಥಾಲಯದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ ದರು.

ಇಂದು ರಾಜಕೀಯ ಹಣದ ಬಲದ ಮೇಲೆ ನಿಂತಿದೆ. ವ್ಯವಸ್ಥೆ ಬೇಕಾದರೆ ಎತ್ತಿಕೊಳ್ಳುತ್ತೆ, ಬೇಡವಾದರೆ ತಳ್ಳುತ್ತೆ. ಶಾಸಕನಾದ ಮೇಲೆ ನನಗೆ ಯಾವ ರೀತಿ ನಡೆಯಬೇಕು ಎಂಬುದು ಗೊತ್ತಿದೆ. ಈಗಾಗಲೇ ತಾವು ಹೇಳಿದ ಎಲ್ಲ ಕೆಲಸಗಳಿಗೆ ಅನುದಾನ ನೀಡಿದ್ದೇನೆ. ಮುಂದೆಯೂ ಗ್ರಾಮದ ಅಭಿವೃದ್ದಿಗೆ ಸದಾ ಬದ್ದನಾಗಿದ್ದೇನೆ. ಇಂದು ಗ್ರಂಥಾಲಯ ಉದ್ಘಾಟಿಸಿದ್ದು ತುಂಬಾ ಸಂತೋಷ ನೀಡಿದೆ. ತಮ್ಮ ಮಕ್ಕಳನ್ನು ದಿನಕ್ಕೆ ಎರಡು ತಾಸು ಓದಲು ಕಳಿಸಿದರೆ ಮಾಡಿದ ಕೆಲಸ ಸಾರ್ಥಕವಾಗುತ್ತದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರಮೋದ ಕವಡಿಮಟ್ಟಿ, ತಾಲ್ಲೂಕು ಪಂಚಾಯಿತಿ ಇಒ ಮಲ್ಲಿಕಾ ರ್ಜುನ ಬಡಿಗೇರ ಮಾತನಾಡಿದರು. ಸೋಮನಕೊಪ್ಪದ ರಾಮಾನಂದ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸ್ವ ಉದ್ಯೋಗ ಕೈಗೊಳ್ಳಲು ಕಡಿಮೆ ಬಡ್ಡಿ ದರದಲ್ಲಿ ಹಲವು ಸಂಜೀವಿನಿ ಸಂಘಗಳಿಗೆ, ಅಂಗವಿಕಲರಿಗೆ, ಮಹಿಳಾ ಸಂಘದವರಿಗೆ ಸಾಲದ ಚೆಕ್ ವಿತರಿಸಲಾಯಿತು.

ಮುಖಂಡ ಮಹೇಶ ಹೊಸಗೌಡರ, ಡಿ.ಆರ್.ಪೂಜಾರಿ, ವಿಠ್ಠಲ ಗೂಳನ್ನವರ, ಪ್ರಕಾಶ ಮೇಟಿ, ಕನಕಪ್ಪ ಬಂದಕೇರಿ, ನೀಲಪ್ಪ ಶಿವಪೂರ, ಸಯ್ಯದ್ ಸಲೀಂ ಖಾಜಿ, ಯಲ್ಲಪ್ಪ ಕುರಿ, ರಜಾಕ್ ಸಾಬ ಖಾಜಿ, ಫಕೀರಪ್ಪ ಉಗಲವಾಟ, ನರೇಗಾ ಯೋಜನೆಯ ಉಪ ನಿರ್ದೇಶಕ ರಾಮಚಂದ್ರ ಮೈತ್ರಿ, ಪಿಡಿಒ ಲಕ್ಷ್ಮಣ ಶಾಂತಗೇರಿ ಭಾಗವಹಿಸಿದ್ದರು.

ಮುಖಂಡ ಪ್ರಕಾಶ ಮೇಟಿ, ಮಾಜಿ ಜಿ.ಪಂ.ಉಪಾಧ್ಯಕ್ಷ ಕೃಷ್ಣಾ ಓಗೆನ್ನವರ ಮಾತನಾಡಿದರು. ರಂಗನಾಥ ಮೊಕಾಸಿ, ಕನಕಪ್ಪ ಬಂದಕೇರಿ, ಶೇಖಪ್ಪ ಉಡಚಿಂಚಿ, ಬಸಣ್ಣ ಹೂಲಗೇರಿ, ಸುಭಾಷ ಬಡಿಗೇರ, ತುಕ್ಕಪ್ಪ ವಡ್ಡರ, ಶ್ರೀಕಾಂತ ಮಾಸ್ತರ ಮುಂತಾದವರು ಭಾಗವಹಿಸಿದ್ದರು.

ಅಧಿಕಾರಿಗಳಿಗೆ ತಾಕೀತು

ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲ ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿ ಸೌಲಭ್ಯಗಳನ್ನು ಆಗಾಗ ಪರಿಶೀಲಿಸಿ ಸೌಲಭ್ಯ ಒದಗಿಸುವುದರೊಂದಿಗೆ ವಿದ್ಯಾರ್ಥಿಗಳೊಂದಿಗೆ ಕನಿಷ್ಠ ತಿಂಗಳಿಗೊಮ್ಮೆಯಾದರೂ ಸಂವಾದ ಮಾಡಿ ತಮ್ಮಲ್ಲಿರುವ ಜ್ಞಾನವನ್ನು ಹಂಚಿಕೊಳ್ಳಬೇಕು ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.