ಬೀಳಗಿ: ಬಹುಮತವಿದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಸರ್ಕಾರವು ಸಂವಿಧಾನ ವಿರೋಧಿಯಾಗಿ ದ್ವೇಷ ಭಾಷಣ ಮಸೂದೆಯನ್ನು ಅಂಗೀಕರಿಸಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಆರೋಪಿಸಿದರು.

ಸ್ಥಳೀಯ ತಹಶಿಲ್ದಾರ್ ಕಚೇರಿ ಎದುರು ಬುಧವಾರ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ದ್ವೇಷ ಭಾಷಣ ಮಸೂದೆ ಅಂಗೀಕಾರ ವಿರೋಧಿಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಮಾತನಾಡಿ, ಕಳೆದ ಎರಡೂವರೆ ವರ್ಷಗಳಿಂದ ರಾಜ್ಯದಲ್ಲಿ ಅಸಮರ್ಪಕ ಆಡಳಿತ ನಡೆಯುತ್ತಿದ್ದು, ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವ ವಿರೋಧ ಪಕ್ಷದವರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿ ಜೈಲಿಗಟ್ಟುವ ಹುನ್ನಾರ ನಡೆದಿದೆ. ರಾಜ್ಯಪಾಲರು ಕೂಡಲೇ ಎರಡೂ ಸದನಲ್ಲಿ ಅಂಗೀಕಾರವಾಗಿರುವ ಈ ಮಸೂದೆಯನ್ನು ತಿರಸ್ಕರಿಸಬೇಕು. ಇಲ್ಲದಿದ್ದರೆ ಮಠಾಧೀಶರು, ಮಾಧ್ಯಮದವರು ಹಾಗೂ ವಿವಿಧ ಸಂಘಟನೆಗಳನ್ನು ಒಗ್ಗೂಡಿಸಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ಹೊಳಬಸು ಬಾಳಶೆಟ್ಟಿ, ಮುಖಂಡರಾದ ಮಲ್ಲಿಕಾರ್ಜುನ ಅಂಗಡಿ, ಎಂ. ವೈ. ವಡವಾಣಿ ಮಾತನಾಡಿದರು. ನ್ಯಾಯವಾದಿ ಎಂ. ಬಿ. ಭೂಸರಡ್ಡಿ ಮನವಿ ಪತ್ರ ಓದಿ ತಹಶೀಲ್ದಾರರಿಗೆ ಅರ್ಪಿಸಿದರು.

ಪಟ್ಟಣ ಪಂಚಾಯತ ಅಧ್ಯಕ್ಷ ಮುತ್ತು ಬೋರ್ಜಿ, ಮುಖಂಡರಾದ ಮಲ್ಲಪ್ಪ ಶಂಭೋಜಿ, ಕಾವೇರಿ ರಾಠೋಡ, ದ್ರಾಕ್ಷಾಯಣಿ ಜಂಬಗಿ, ಸಿದ್ದು ಮಾದರ, ಯಲ್ಲಪ್ಪ ಹಳ್ಳೂರ, ಮಲ್ಲಪ್ಪ ತೋಳಮಟ್ಟಿ, ಪ್ರಕಾಶ ಕಟಗೇರಿ, ಶಂಕ್ರಪ್ಪ ಬನಪ್ಪನವರ, ಗಂಗಾಧರ ಕಲಬುರ್ಗಿ, ಶಿವಪ್ಪ ಕದಾಂಪೂರ, ಗಂಗಾಧರ ಬಿಂಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.