ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹುನಗುಂದ ಪುರಸಭೆ: ₹7.02 ಲಕ್ಷ ಉಳಿತಾಯ ಬಜೆಟ್’

Published 4 ಮಾರ್ಚ್ 2024, 15:59 IST
Last Updated 4 ಮಾರ್ಚ್ 2024, 15:59 IST
ಅಕ್ಷರ ಗಾತ್ರ

ಹುನಗುಂದ: ಪಟ್ಟಣದ ಪುರಸಭೆಯ 2024-25ನೇ ಸಾಲಿನ ಬಜೆಟ್‌ಗೆ ಪುರಸಭೆ ಆಡಳಿತಾಧಿಕಾರಿ ಅನುಮೋದನೆ ನೀಡಿ ಠರಾವು ಅಂಗೀಕರಿಸಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಪಿ.ಕೆ.ಗುಡದಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಎಸ್.ಎಫ್.ಸಿ ಮುಕ್ತ ನಿಧಿ, ವೇತನ ಅನುದಾನ, ವಿದ್ಯುತ್ ಶಕ್ತಿ ಅನುದಾನ, ಆಸ್ತಿ ತೆರಿಗೆ, ಅಭಿವೃದ್ಧಿ ,ನೀರಿನ ಕರ, ಅಂಗಡಿ ಬಾಡಿಗೆ, ಲೈಸನ್ಸ್, ಕಟ್ಟಡ ಪರವಾನಗಿ, ಖಾತಾ ಬದಲಾವಣೆ, ಸಾಮಾನ್ಯ ಕರಗಳು, ಭೂಮಿ ಮಾರಾಟ, 15ನೇ ಹಣಕಾಸು, ಮುಖ್ಯಮಂತ್ರಿ ಅನುದಾನ, ವಿಶೇಷ ಅನುದಾನ, ಬರ ಪರಿಹಾರ, ಮಾರಾಟ ತೆರಿಗೆ, ಗ್ರಂಥಾಲಯ ಕರ, ರಾಯಲ್ಟಿ, ಆದಾಯ ತೆರಿಗೆ ಸೇರಿದಂತೆ ಇನ್ನೀತರ ಮೂಲಗಳಿಂದ ₹16.50 ಕೋಟಿ ಅನುದಾನ ನಿರೀಕ್ಷೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ಸಿಬ್ಬಂದಿ ವೇತನ, ನೀರು ಸರಬರಾಜು, ಪ್ರಿಂಟಿಂಗ್‌, ದಪ್ತರ್, ಕೌನ್ಸಿಲ್ ಸಂಬಂಧಿತ ವೆಚ್ಚ, ಸಾರ್ವಜನಿಕ ಶೌಚಾಲಯ, ಕಾಂಪೌಂಡ್ ಗೋಡೆ, ವಾಣಿಜ್ಯ ಮಳಿಗೆ, ಹೊಸ ಗಟಾರು ನಿರ್ಮಾಣ, ಇತ್ಯಾದಿ ಸೇರಿ ಒಟ್ಟು ₹16.43 ಕೋಟಿ ಖರ್ಚು ಅಂದಾಜಿಸಲಾಗಿದ್ದು, ₹ 7.02 ಲಕ್ಷ ಉಳಿತಾಯ ಬಜೆಟ್‌ಗೆ ಅನುಮೋದನೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT