ಮಂಗಳವಾರ, ಡಿಸೆಂಬರ್ 6, 2022
21 °C
ಪಟಪಟನೆ ರಾಜ್ಯ, ಜಿಲ್ಲೆ, ತಾಲ್ಲೂಕುಗಳ ಹೆಸರು ಹೇಳುವ ಬಾಲಕ

ಬುಕ್‌ ಆಫ್ ರೆಕಾರ್ಡ್ಸ್‌ನಲ್ಲಿ ಪ್ರದ್ಯೋತ

ಆರ್.ಎಸ್.ಹೊನಗೌಡ Updated:

ಅಕ್ಷರ ಗಾತ್ರ : | |

Prajavani

ಜಮಖಂಡಿ: ದೇಶದ ವಿವಿಧ ರಾಜ್ಯಗಳು, ಜಿಲ್ಲೆಗಳು ಹಾಗೂ ತಾಲ್ಲೂಕುಗಳ ಹೆಸರನ್ನು ಪಟಪಟನೆ ಹೇಳುವ ನಗರದ 2 ವರ್ಷ 8 ತಿಂಗಳ ಬಾಲಕ ಪ್ರದ್ಯೋತ ಗುದಿಗೇನವರ ಹೆಸರು ಈಗ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ.

ಇಲ್ಲಿನ ಪ್ರಭಾತ ನಗರದ ನಿವಾಸಿ ಶಿಕ್ಷಕ ರಾಕೇಶ ಗುದಿಗೇನವರ ಹಾಗೂ ರಶ್ಮಿ ದಂಪತಿ ಪುತ್ರ ಪ್ರದ್ಯೋತ ಮನೆಯಲ್ಲಿನ ಪ್ರತಿಯೊಂದು ವಸ್ತುವಿನ ಹೆಸರು, ಅವುಗಳನ್ನು ಇಡುವ ಜಾಗ, ಅವುಗಳ ಉಪಯೋಗ ಮತ್ತು ಅವುಗಳನ್ನು ಬಳಸುವ ವಿಧಾನ ಮನನ ಮಾಡಿಕೊಂಡಿದ್ದಾನೆ. 

ಮಗನಲ್ಲಿರುವ ಅದಮ್ಯ ಆಸಕ್ತಿ ಹಾಗೂ ಅನನ್ಯ ಪ್ರತಿಭೆ ಗಮನಿಸಿದ್ದ ಅಮ್ಮ ರಶ್ಮಿ, ಜೀವನಕ್ಕೆ ಆಗಿಬರುವ, ತಮ್ಮ ಸುತ್ತಲೂ ಕಾಣಸಿಗುವ ಪ್ರತಿಯೊಂದೂ ವಸ್ತುಗಳನ್ನು ವಾಹನ, ಗಾಡಿಗಳು, ಪಕ್ಷಿಗಳ ಪರಿಚಯಿಸಿ ಮತ್ತಷ್ಟು ಜ್ಞಾನ ತುಂಬಿದ್ದಾರೆ.

ರಾಜ್ಯದ ರಾಜಧಾನಿ, ಒಂಬತ್ತು  ಕೇಂದ್ರಾಡಳಿತ ಪ್ರದೇಶ, ತಿಂಗಳು, ಮಾಸಗಳು, ಖಂಡಗಳು, 17 ಭಾರತದ ನದಿಗಳ,  ಕನ್ನಡದ ವ್ಯಂಜನಗಳು, ಬಹುವಚನಗಳು, 29 ವಿರುದ್ಧಾರ್ಥಕ ಪದಗಳು,  ವಾರ, ಕಾಲ, ದಿಕ್ಕುಗಳನ್ನು, ಏಳು ಲ್ಯಾಪ್ ಟಾಪ್ ಭಾಗ, 32 ದೇಹದ ಭಾಗ, ಎಂಟು ಆಕಾರ, ಒಂಬತ್ತು ಬಣ್ಣಗಳು, ಎಂಟು ಮಂದಿ ಮಹಾ ನಾಯಕರು, 27 ವಿವಿಧ ಮಾದರಿಯ ವಾಹನಗಳು, 23 ಹಣ್ಣು, 27 ಪ್ರಾಣಿಗಳನ್ನು ಗುರುತಿಸಿ ಇಂಗ್ಲಿಷ್ ನಲ್ಲಿ  ಹೆಸರನ್ನು ಸರಳವಾಗಿ ಹೇಳುತ್ತಾನೆ.

ಏಳು ಪ್ರಾಣಿಗಳ ಹಾಗೂ ನಾಲ್ಕು ಹಕ್ಕಿಗಳ ಧ್ವನಿ ಮಿಮಿಕ್ರಿ ಮಾಡುತ್ತಾನೆ, ಅವನ ಪರಿಚಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಹಾಗೂ ಭಾರತದ ಚಿಹ್ನೆಗಳಿಗೆ ಸಂಬಂಧಿಸಿದ ಎಂಟು ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಇಂಗ್ಲಿಷ್‌ನಲ್ಲಿ ಕೇಳಿದಾಗ ಉತ್ತರಿಸುತ್ತಾನೆ. 10 ದೇವರುಗಳನ್ನು ಗುರುತಿಸಿ ಹೆಸರು ಹೇಳುತ್ತಾನೆ. 25 ಅಕ್ಷನ್ ವರ್ಡ್ಸ್ ಗಳನ್ನು ಮಾಡಿ ತೋರಿಸುತ್ತಾನೆ. ಐದು ಮಂತ್ರಗಳನ್ನು, ಬಸವಣ್ಣನ ವಚನ, ಆರು ಸಾಲು ಹನುಮಾನ್ ಚಾಲೀಸ್ ಹೇಳುತ್ತಾನೆ. ನಾವು ಮಾತನಾಡುವ ದಿನಬಳಕೆಯ ಇಂಗ್ಲಿಷ್ ಅರ್ಥಮಾಡಿಕೊಳ್ಳುತ್ತಾನೆ ಮತ್ತು ಅದಕ್ಕೆ  ನಿರರ್ಗಳವಾಗಿ ಪ್ರತಿಕ್ರಿಯಿಸುತ್ತಾನೆ.

‘ನಮ್ಮ ಮಗನ ನಮ್ಮ ಕುಟುಂಬದಲ್ಲಿಯೇ ತುಂಬಾ ಚುರುಕಾಗಿದ್ದಾನೆ. ಒಂದೇ ದಿನದಲ್ಲಿ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಂಗತಿಗಳ ಗುರುತಿಸಿ ಅವುಗಳ ಹೆಸರು ಹೇಳಿದ. ಆಗ ನಮಗೆ ಅವನ ಸಾಮರ್ಥ್ಯದ ಬಗ್ಗೆ ತಿಳಿಯಿತು. ಆಟವಾಡುತ್ತಾ ಅವನು ಇಷ್ಟಪಟ್ಟು ಎಲ್ಲವನ್ನು ಕಲಿಯುತ್ತಿದ್ದಾನೆ. ಅವನ ಸಾಮರ್ಥ್ಯ ವಿಡಿಯೊ ಮೂಲಕ ಬುಕ್ ಆಫ್ ರೆಕಾರ್ಡ್ ಗೆ ಕಳಿಸಿದ್ದೇವೆ’ ಎನ್ನುತ್ತಾರೆ ರಾಕೇಶ–ರಶ್ಮಿ ದಂಪತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು