ಬಾಗಲಕೋಟೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾರ ಕನಕದಾಸರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಭೀಮಪ್ಪ ಗೊರವರ ಸ್ಮರಣಾರ್ಥ ನೀಡುವ ಕನಕಸಿರಿ ಪ್ರಶಸ್ತಿಯನ್ನು ನೀಲಪ್ಪ ಅಂಬಲಿಯವರ ಅವರಿಗೆ ಪ್ರದಾನ ಮಾಡಲಾಯಿತು.

ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಅನಿಲಕುಮಾರ ದಡ್ಡಿ, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಸಮುದಾಯದ ಮುಖಂಡರಾದ ಬಿ.ಡಿ.ಸಿದ್ದಾಪುರ, ಎಚ್.ಬಿ.ಗೊರವರ, ಮಳಿಯಪ್ಪ ಗುಳಬಾಳ, ಧರ್ಮಣ್ಣ ಸುಣಗದ, ಸೋಮು ಕೈರವಾಡಗಿ, ಆತ್ಮಾನಂದ ಜಾಲಿಹಾಳ, ಸಿದ್ದು ಪೂಜಾರ ಉಪಸ್ಥಿತರಿದ್ದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು:

ಭಕ್ತ ಕನಕದಾಸರ ಕಾವ್ಯ ಭಾಷೆ ಅತ್ಯಂತ ಸರಳವಾಗಿದ್ದು, ಸಾಮಾಜಿಕ ಸಮಾನತೆ ಮತ್ತು ಮಾನವ ಕಳಕಳಿ ಹೊಂದಿರುವುದರಿಂದ ಅವರ ಚಿಂತನೆಗಳು ಎಲ್ಲಕಾಲಕ್ಕೂ ಪ್ರಸ್ತುತವಾಗಿವೆ ಎಂದು ಪ್ರಾಚಾರ್ಯ ಅರುಣಕುಮಾರ ಗಾಳಿ ಹೇಳಿದರು.

ಕನಕದಾಸರ ಆದರ್ಶಗಳನ್ನು ಪಾಲಿಸುತ್ತಾ ಅವರು ಹಾಕಿಕೊಟ್ಟಿರುವ ಪಥದಲ್ಲಿ ಮುನ್ನಡೆಯಬೇಕು ಎಂದರು.

ಎಸ್.ಆರ್. ನರಸಾಪೂರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಕಾಲೇಜು:

ಕನಕದಾಸರಂತಹ ಹಲವು ಮಹಾತ್ಮರ ಬದುಕು-ಬರಹ, ಸಂದೇಶ ಹಾಗೂ ಸಾಧನೆ ಮನುಕುಲಕ್ಕೆ ದಾರಿದೀಪ ಎಂದು ಪ್ರಾಚಾರ್ಯ ಶ್ರೀನಿವಾಸ ನರಗುಂದ ಹೇಳಿದರು.

ಉಪನ್ಯಾಸಕಿ ಗೀತಾ ಕಿಲಬನೂರ ಮಾತನಾಡಿ, ಕನಕದಾಸರ ಕೀರ್ತನೆಗಳಲ್ಲಿ ಕಂಡುಬರುವ ಮಾನವೀಯ ಮೌಲ್ಯ, ಸಾಮಾಜಿಕ ಕಳಕಳಿ, ಜಾತಿ ಪದ್ಧತಿ, ಸಾಮಾಜಿಕ ಮೌಢ್ಯ ಮುಂತಾದವುಗಳ ಕುರಿತು ಮಾತನಾಡಿದರು.

ವಿದ್ಯಾರ್ಥಿಗಳಾದ ಸಾರಿಯಾ ಜಲಗೇರಿ, ಪ್ರಶಾಂತ ಭಜಂತ್ರಿ, ನಿಂಗಪ್ಪ ಕೆಂಗರ, ಮಂಜುಳಾ ಗೌಡರ, ಸ್ನೇಹಾ ಅರಬಿ ಮತ್ತು ಉಪನ್ಯಾಸಕಿ ಕೀರ್ತಿ ದಾಸರ ಮಾತನಾಡಿದರು.

ಉಪನ್ಯಾಸಕ ಕೆ.ಜಿ.ಲಮಾಣಿ, ಐಕ್ಯೂಎಸಿ ಸಂಯೋಜಕ ಪ್ರೊ.ಎಸ್.ಎಸ್.ಹಂಗರಗಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.