ಭಾನುವಾರ, ಜೂನ್ 26, 2022
22 °C
ಕರ್ನಾಟಕ ಬಯಲಾಟ ಅಕಾಡೆಮಿ: ಏಪ್ರಿಲ್‌ನಲ್ಲಿ ಪ್ರಶಸ್ತಿ ಪ್ರದಾನ

ಕರ್ನಾಟಕ ಬಯಲಾಟ ಅಕಾಡೆಮಿ: ಐವರಿಗೆ ಗೌರವ, 10 ಮಂದಿಗೆ ವಾರ್ಷಿಕ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಬಯಲಾಟ ಅಕಾಡೆಮಿ: ಐವರಿಗೆ ಗೌರವ, 10 ಮಂದಿಗೆ ವಾರ್ಷಿಕ ಪ್ರಶಸ್ತಿ

ಬಾಗಲಕೋಟೆ: ಕರ್ನಾಟಕ ಬಯಲಾಟ ಅಕಾಡೆಮಿಯು ಪ್ರಸಕ್ತ ಸಾಲಿನಲ್ಲಿ ಐವರು ಕಲಾವಿದರಿಗೆ ಗೌರವ ಪ್ರಶಸ್ತಿ, 10 ಕಲಾವಿದರಿಗೆ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದೆ. 

ಗೌರವ ಪ್ರಶಸ್ತಿ ತಲಾ ₹50 ಸಾವಿರ, ವಾರ್ಷಿಕ ಪ್ರಶಸ್ತಿ ತಲಾ ₹25 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಏಪ್ರಿಲ್ ಮೊದಲ ವಾರ ಬಾಗಲಕೋಟೆಯಲ್ಲಿ ನಡೆಯಲಿದೆ ಎಂದು ಎಂದು ಅಕಾಡೆಮಿ ರಿಜಿಸ್ಟ್ರಾರ್ ಎನ್.ಹೇಮಾವತಿ ಅವರು ತಿಳಿಸಿದ್ದಾರೆ. 

ಗೌರವ ಪ್ರಶಸ್ತಿ ಪುರಸ್ಕೃತರು: ಮಂಡ್ಯ ಜಿಲ್ಲೆ ದೊಡ್ಡಬೋಗನಹಳ್ಳಿಯ ನಾಗಮ್ಮ ಕೃಷ್ಣಯ್ಯ (ಗೊಂಬೆಯಾಟ), ಬಾಗಲಕೋಟೆ ಜಿಲ್ಲೆಯ ಶಿರೂರಿನ ಶಾಂತಪ್ಪ ಬಾಡದ (ದೊಡ್ಡಾಟ), ಕೊಪ್ಪಳ ಜಿಲ್ಲೆ ಅಳವಂಡಿ ಗ್ರಾಮದ ಹನುಮಂತಪ್ಪ ಎಲಿಗಾರ (ಸಣ್ಣಾಟ), ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಇಂಗಳಗಿಯ ಎಂ.ಎಸ್.ಮಾಳವಾಡ (ದೊಡ್ಡಾಟ), ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಸಿದ್ದಮ್ಮನಹಳ್ಳಿಯ ಡಿ.ಬಿ.ಶಿವಣ್ಣ.

ವಾರ್ಷಿಕ ಪ್ರಶಸ್ತಿ ಪುರಸ್ಕೃತರು: ಬೀದರ್ ಜಿಲ್ಲೆ ಔರಾದ ತಾಲ್ಲೂಕಿನ ಜಿಗರಾರ ಗ್ರಾಮದ ರಾಮಶೆಟ್ಟಿ ಬಂಬುಳಗೆ (ದೊಡ್ಡಾಟ), ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಚಿಕ್ಕಲದಿನ್ನಿಯ ನಾಗಪ್ಪ ಸೂರ್ಯವಂಶಿ (ಸಣ್ಣಾಟ), ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಲೋಕಾಪೂರದ ದುರಗವ್ವ (ಪಾರಿಜಾತ), ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಗುಂಡಣ್ಣನವರ ಓಣಿ ಕಬನೂರಿನ ರಾಮಪ್ಪ ಕುರಬರ (ದೊಡ್ಡಾಟ), ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಕೆರೆ ಮಾಸ್ತಿಹೊಳೆಯ ನಿಂಗನಗೌಡ ಪಾಟೀಲ (ಸಣ್ಣಾಟ).

ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಕೊಂಕಣಗಾಂವ ಗ್ರಾಮದ ರೇವಗೊಂಡ ಬಿರಾದಾರ (ಬಯಲಾಟ), ಬಳ್ಳಾರಿ ತಾಲ್ಲೂಕು ಎಮ್ಮಿಗನೂರಿನ ಕೆ.ಹೇಮಾರಡ್ಡಿ (ಬಯಲಾಟ), ಬೆಂಗಳೂರು ನಗರದ ಡಾ.ಟಿ.ಗೋವಿಂದರಾಜು (ತೊಗಲು ಗೊಂಬೆ), ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲ್ಲೂಕಿನ ಯಲ್ಲಾಲಿಂಗ ನಗರದ ಜಿ.ವೀರನಗೌಡ ಚಂದ್ರಪ್ಪ(ದೊಡ್ಡಾಟ), ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಚಮಕೇರಿಯ ಶಿವಪ್ಪ ಕುಂಬಾರ (ಪಾರಿಜಾತ). 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು