ಶನಿವಾರ, ಆಗಸ್ಟ್ 17, 2019
27 °C

ರಾಷ್ಟ್ರೀಯ ವಿಪತ್ತು ಘೋಷಣೆಗೆ ಎಚ್ಕೆ ಆಗ್ರಹ

Published:
Updated:

ಬಾಗಲಕೋಟೆ: ‘ಉತ್ತರ ಕರ್ನಾಟಕ ಭಾಗ ಪ್ರವಾಹದಿಂದ ನಲುಗಿದೆ. ಈ ಪ್ರಾಕೃತಿಕ ಅವಘಡವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ನೆರವಿಗೆ ಬನ್ನಿ’ ಎಂದು ಶಾಸಕ ಎಚ್‌.ಕೆ.ಪಾಟೀಲ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯದ ಅಧ್ಯಯನಕ್ಕೆ ನಿಯೋಜನೆಗೊಂಡಿರುವ ಕೆಪಿಸಿಸಿ ತಂಡದ ನೇತೃತ್ವ ವಹಿಸಿರುವ ಅವರು, ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಈಗಿನ ಪರಿಸ್ಥಿತಿ ಅವಲೋಕಿಸಿದರೆ ಪ್ರವಾಹದ ಸಂಕಷ್ಟಕ್ಕೆ ಸಿಲುಕಿದವರು ಮತ್ತೆ ಬದುಕು ಕಟ್ಟಿಕೊಳ್ಳುವುದು ಅಸಾಧ್ಯದ ಮಾತು. ಹಾಗಾಗಿ ಅವರಿಗೆ ಸರ್ಕಾರದಿಂದ ಎಲ್ಲ ರೀತಿ ನೆರವು ಅಗತ್ಯವಿದೆ ಎಂದು ಹೇಳಿದ ಅವರು, ಕೃಷ್ಣಾ ಕೊಳ್ಳದಲ್ಲಿ ಅಧ್ಯಯನ ನಡೆಸಿ ಹಳ್ಳಿಗಳ ಪುನರ್‌ಸೃಷ್ಟಿಯ ಜೊತೆಗೆ ಇಂತಹ ಅವಘಡಗಳು ಮತ್ತೆ ಮತ್ತೆ ಮರುಕಳಿಸದಂತೆ ಶಾಶ್ವತ ಯೋಜನೆ ರೂಪಿಸಲು ಸರ್ಕಾರ ಮುಂದಾಗಬೇಕು‘ ಎಂದು ಆಗ್ರಹಿಸಿದರು.

Post Comments (+)