ಬಾಗಲಕೋಟೆ: ಬಹಳ ಭಿನ್ನ ಹಾಗೂ ಬಹು ಸಂಸ್ಕೃತಿ ಹಿನ್ನೆಲೆಯ ಬಹುತ್ವ ದೇಶ ನಮ್ಮದಾಗಿದ್ದರೂ ಜಾತಿ ವ್ಯವಸ್ಥೆಯಿಂದಾಗಿ ಮುಟ್ಟಿಸಿಕೊಳ್ಳದ ದೇಶವಾಗಿದ್ದು, ಪರಸ್ಪರ ಸೇರದವರಾಗಿದ್ದೇವೆ. ಈ ಹಿನ್ನೆಲೆಯಲ್ಲಿ ಬಹುತ್ವ ಭಾರತವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಲೇಖಕರ ಮೇಲಿದೆ ಎಂದು ಹಿರಿಯ ಲೇಖಕ ಕುಂ. ವೀರಭದ್ರಪ್ಪ ಹೇಳಿದರು.

ನಗರದ ಸಕ್ರಿ ಪದವಿ ಪೂರ್ವ ಕಾಲೇಜಿನ ಸರಳಬಾಯಿ ಭಾಗವತ ಸಭಾಭವನದಲ್ಲಿ ಸಕ್ರಿ ಪದವಿಪೂರ್ವ ಕಾಲೇಜಿನ ಕನ್ನಡ ಸಂಘ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಕನ್ನಡ ಉಪನ್ಯಾಸಕರ ಒಕ್ಕೂಟದ ಸಹಯೋಗದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಉಮೇಶ ತಿಮ್ಮಾಪುರ ಅವರ ‘ಕಗ್ಗಲ್ಲ ಕ್ರಾಸ್’ ಕಥಾಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ನಮ್ಮನ್ನು ಆಳುವ ವ್ಯವಸ್ಥೆ ದಂತಕಥೆಗಳನ್ನು ಸೃಷ್ಟಿಸುತ್ತಿದೆ. ಹೀಗಾಗಿ ದೇವಾಲಯಗಳು ಆಕರ್ಷಕ ಕೇಂದ್ರಗಳಾಗುತ್ತಿವೆ. ದೇವರು, ಕಥೆಗಳ ಹೆಸರಿನಲ್ಲಿ ಜನರನ್ನು ಮೋಸಗೊಳಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟರು.

ಉಮೇಶ ತಿಮ್ಮಾಪುರ ಕಥೆಗಳಲ್ಲಿ ಸರಳತೆಯಿದ್ದು, ಗ್ರಾಮೀಣ ಭಾಷೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಭಿನ್ನವಾದ ಬದುಕನ್ನು ಕಟ್ಟಿಕೊಡುವ ಕೆಲಸವನ್ನು ಅವರು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದ ಅವರು, ಗ್ರಾಮೀಣ ಕಥೆಗಾರರು ಹಾದಿಗಳಿಲ್ಲದ ಕಡೆ ಹಾದಿ ಸೃಷ್ಟಿಸುತ್ತಾರೆ. ಕಲ್ಲುಮುಳ್ಳಿನ ನಡುವೆ ಸಾಗುತ್ತಾರೆ ಎಂದರು.

ಕಥೆಗಾರ ಪ್ರಕಾಶ ಖಾಡೆ ಸಂವಿಧಾನ ಪೀಠಿಕೆ ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೃತಿ ಕುರಿತು ಲೇಖಕ ಡಾ.ವೈ.ಎಂ.ಯಾಕೊಳ್ಳಿ ಮಾತನಾಡಿದರು. ವಿದ್ಯಾಪ್ರಸಾರಕ ಮಂಡಳದ ಗೌರವ ಕಾರ್ಯದರ್ಶಿ ಡಾ.ಗಿರೀಶ ಮಾಸೂರಕರ ಅಧ್ಯಕ್ಷತೆ ವಹಿಸಿದ್ದರು.

ಡಾ.ಶೇಖರ ಮಾನೆ, ರಾಜು ನಾಯ್ಕರ, ಕಿರಣ ಬಾಳಾಗೋಳ, ಕವಿತಾ ಪ್ರಕಾಶನದ ಗಣೇಶ ಅಮೀನಗಡ, ಕೃತಿಕಾರ ಉಮೇಶ ತಿಮ್ಮಾಪುರ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಪಾಂಡುರಂಗ ಸನ್ನಪ್ಪನವರ ಇದ್ದರು.

ಬಸವಲಿಂಗಯ್ಯ ಮಠಪತಿ ಪ್ರಾರ್ಥಿಸಿದರು. ಸಕ್ರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಅಶೋಕ ಕಂದಗಲ್ಲ ಸ್ವಾಗತಿಸಿದರು. ಚಂದ್ರಶೇಖರ ದೇಸಾಯಿ ವಂದಿಸಿದರು. ರವಿ ಕಂಗಳ ನಿರೂಪಿಸಿದರು.

ಶೇ 70ರಷ್ಟು ಲೇಖಕರು ಎಡಪಂಥೀಯರು

‘ಎಡಪಂಥೀಯರು ಅರ್ಬನ್ ನಕ್ಸಲರನ್ನು ಯಾವಾಗ ಜೈಲಿಗೆ ಹಾಕುತ್ತೀರಿ ಎಂದು ಪತ್ರಿಕೆಗಳ ಮೂಲಕ ಕೇಳುವವರು ಈಗ ಹೆಚ್ಚಿದ್ದಾರೆ. ಆದರೆ, ನೊಬೆಲ್ ಪುರಸ್ಕೃತರಾದ ಶೇ 70ರಷ್ಟು ಲೇಖಕರು ಎಡಪಂಥೀಯರು ಎಂದು ನೆನಪಿಟ್ಟುಕೊಳ್ಳಬೇಕು’ ಎಂದು ಕುಂ.ವೀರಭದ್ರಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.