ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಇತಿಹಾಸಕಾರರನ್ನು ಹುಟ್ಟುಹಾಕುವ ಕೆಲಸವಾಗಲಿ: ಗವಿಸಿದ್ದಯ್ಯ

Published 26 ಆಗಸ್ಟ್ 2023, 14:11 IST
Last Updated 26 ಆಗಸ್ಟ್ 2023, 14:11 IST
ಅಕ್ಷರ ಗಾತ್ರ

ಜಮಖಂಡಿ: ಇತಿಹಾಸಕಾರರು ವಿವಿಧ ರೀತಿಯಲ್ಲಿ ಸಂಶೋಧನೆ ಮಾಡಬೇಕು. ಇಂತಹ ಕಾರ್ಯಕ್ರಮಗಳ ಮೂಲಕ ಯುವ ಇತಿಹಾಸಕಾರರನ್ನು ಹುಟ್ಟುಹಾಕುವ ಕೆಲಸವಾಗಬೇಕು ಎಂದು ರಾಜ್ಯ ಪತ್ರಗಾರ ಇಲಾಖೆಯ ನಿರ್ದೇಶಕ ಗವಿಸಿದ್ದಯ್ಯ ಹೇಳಿದರು.

ಇಲ್ಲಿನ ಬಿಎಲ್‌ಡಿಇ ಸಂಸ್ಥೆಯ ದರ್ಬಾರ್ ಹಾಲ್‌ನಲ್ಲಿ ಶನಿವಾರ ಕರ್ನಾಟಕ ಇತಿಹಾಸ ಪರಿಷತ್ತಿನ 33ನೇ ಮಹಾಅಧಿವೇಶನದಲ್ಲಿ ಮಹಾಅಧೀವೇಶನದ ಪ್ರೂಸಿಡಿಂಗ್ಸ್ ಬಿಡುಗಡೆಗೊಳಿಸಿ ಮಾತನಾಡಿದರು.

ಸರ್ಕಾರಕ್ಕೆ ಸಲಹೆ ಸೂಚನೆಗಳನ್ನು ನೀಡುವ ಪ್ರಭಂದ, ಲೇಖನಗಳನ್ನು ಬರೆಯಬೇಕು. ನೀವು ಬರೆದ ಬರವಣಿಗೆಯು ಆಲೋಚನೆ ಮಾಡುವಂತಾಗಬೇಕು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಾಮಾಜಿಕ ಕಾರ್ಯವಾಗಬೇಕು, ಪತ್ರಗಾರ ಇಲಾಖೆಯ ವೆಬ್ ಸೈಟ್ ನಲ್ಲಿ 1.80 ಕೋಟಿ ಪುಟಗಳ ಮಾಹಿತಿಯನ್ನು ಹಾಕಲಾಗಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದರು.

ರಾಜ್ಯ ಇತಿಹಾಸ ಪರಿಷತ್‌ ಅಧ್ಯಕ್ಷ ಆರ್.ರಾಜಣ್ಣ ಮಾತನಾಡಿ, ಸರ್ಕಾರದಿಂದ ಮಹಾಅಧಿವೇಶನ ನಡೆಸಲು ಹಣದ ಸಹಾಯ ಮಾಡಿದರೆ ಯೋಜನಾಬದ್ಧವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗುತ್ತದೆ. ಈ ಬಗ್ಗೆ ಸಚಿವರ ಮೂಲಕ ಒತ್ತಡ ಹಾಕಲಾಗುವುದು ಎಂದರು.

ಬಿಎಲ್ ಡಿಇ ಮಹಾವಿದ್ಯಾಲಯದ ಸಮಕುಲಪತಿ ಜಯರಾಜ, ಕುವೆಂಪು ಕೇಂದ್ರಿಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಸಮ್ಮೇಳನದ ಸರ್ವಾಧ್ಯಕ್ಷ ಎಸ್.ಎ.ಬಾರಿ, ನಿಕಟಪೂರ್ವ ಅಧ್ಯಕ್ಷ ಎಸ್.ಚಂದ್ರಶೇಖರ, ಕೆ.ಎಲ್.ಎನ್.ಮೂರ್ತಿ, ಪ್ರೋ.ಎಸ್.ಎಚ್.ಲಗಳಿ, ಸ್ನಾತಕೋತ್ತರ ವಿಭಾಗಗಳ ನಿರ್ದೇಶಕ ಬಿ.ಎಮ್. ನುಚ್ಚಿ, ಪ್ರೊ.ಆಯ್.ಕೆ.ಪತ್ತಾರ, ಪ್ರೊ.ವಾಸುದೇವ ಬಡಿಗೇರ, ಅಮರೇಶಎ ಯತ್ತಗಲ್ ಸೇರಿದಂತೆ ಇತರರು ಇದ್ದರು.

ರಾಜರ್ಷಿ ಡಾ.ಡಿ.ವೀರೇಂದ್ರ ಹೆಗಡೆ ಪ್ರಶಸ್ತಿಯನ್ನು ಪ್ರೊ ಎಸ್.ರಾಜಶೇಖರ (2021), ಪ್ರೊ ಎಸ್.ವಿ.ಪಾಡಿಗಾರ (2022), ಪ್ರೊ ಅಜಿಪ ಪ್ರಸಾದ (2023), ಕುಂದನ ಪ್ರಶಸ್ತಿಯನ್ನು ಶ್ವೇತಾ ಭಸ್ಮೆಯವರಿಗೆ ನೀಡಿ ಗೌರವಿಸಿದರು..

ಸ್ವಾಗತವನ್ನು ಪ್ರಾಚಾರ್ಯ ಎನ್.ಎಂ.ರೂಳ್ಳಿ, ನಿರೂಪಣೆಯನ್ನು ಮಂಜುನಾಥ ಪಾಟೀಲ, ಶ್ರೀನಿವಾಸ ಕಟ್ಟಿಮನಿ, ವಂದನಾರ್ಪಣೆಯನ್ನು ಎಸ್.ಬಿ.ಕಾಂಪ್ಲಿ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT