ಬಾಗಲಕೋಟೆ: ‘ಇನ್ನೆರಡು ತಿಂಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮುಖಚಹರೆ ಆಧಾರಿತ (ಫೇಸ್ ಐಡೆಂಟಿಫಿಕೇಷನ್) ಹಾಜರಾತಿ ಮತ್ತು ‘ನೀತಿ ವಿಜ್ಞಾನ’ ಪಠ್ಯ ಕಲಿಕೆ ಆರಂಭಿಸಲಾಗುವುದು’ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

‘ನೈತಿಕ ಶಿಕ್ಷಣದ ಕೊರತೆಯಿಂದ ಮಕ್ಕಳಿಗೆ ಹಲವು ಸಮಸ್ಯೆ ಕಾಡುತ್ತಿವೆ. ಬಾಲ ಗರ್ಭಿಣಿಯರ ಸಂಖ್ಯೆ ತಡೆಯೊಡ್ಡುವುದೂ ಸೇರಿ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು ‘ನೀತಿ ವಿಜ್ಞಾನ’ ಪಠ್ಯ ಕಲಿಸಲಾಗುವುದು’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಸೇರಿ 22 ಸದಸ್ಯರಿಂದ ನೀತಿ ಶಿಕ್ಷಣ ಕುರಿತು ಅಭಿಪ್ರಾಯ ಪಡೆಯಲಾಗಿದೆ. ಹಿಂದೆ ಇದ್ದಂತೆ ನೀತಿ ಶಿಕ್ಷಣ ಬೋಧನೆ ಮತ್ತೆ ಆರಂಭವಾಗಲಿದೆ’ ಎಂದರು.

‘ಒಳಮೀಸಲಾತಿ ಜಾರಿಯಾದ ಕೂಡಲೇ 16,500 ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು. ಆದರ್ಶ ಶಾಲೆಗಳಲ್ಲಿ ಈ ವರ್ಷದಿಂದ ಪಿಯುಸಿ ಕಾಲೇಜು ಆರಂಭಿಸಲು ಅನುಮತಿ ನೀಡಲಾಗಿದೆ. ಶಾಲೆಗಳಿಗೆ ಮೂಲಸೌಲಭ್ಯ ಒದಗಿಸಲು ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.