ಮಹಾಲಿಂಗಪುರ: ಪಟ್ಟಣದ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆಯ 21 ನೌಕರರು ಸಮಯಕ್ಕೆ ಸರಿಯಾಗಿ ವೇತನ ಸಿಗದೇ ಜೀವನ ನಿರ್ವಹಣೆಗೆ ಪರದಾಡುತ್ತಿದ್ದಾರೆ.

ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಂಬಂಧಿಸಿದಂತೆ ಸುಪರ್ವೈಸರ್, ರಾತ್ರಿ ಕಾವಲುಗಾರ, ಜೆಸಿಬಿ ನಿರ್ವಾಹಕ ಸೇರಿದಂತೆ ಕಾರ್ಮಿಕರಾಗಿ 9 ಜನ ಹಾಗೂ ಟಿಪ್ಪರ್, ಟ್ರ್ಯಾಕ್ಟರ್ ಸೇರಿದಂತೆ ಇನ್ನಿತರ ಕಸ ವಿಲೇವಾರಿ ಮಾಡುವ ವಾಹನಗಳ ಚಾಲಕರಾಗಿ 12 ಜನ ಕೆಲಸ ಮಾಡುತ್ತಿದ್ದಾರೆ. ತಾಳಿಕೋಟೆಯ ಗುತ್ತಿ ಬಸವೇಶ್ವರ ಮ್ಯಾನ್ಪವರ್ ಏಜೆನ್ಸಿಯ ಸಂಗನಗೌಡ ವಡವಡಗಿ ಎಂಬುವವರು ಕಾರ್ಮಿಕ ಮತ್ತು ಚಾಲಕರ ಗುತ್ತಿಗೆ ಪಡೆದಿದ್ದಾರೆ.

ಕಳೆದ ಜನವರಿಯಿಂದ ಹೊರಗುತ್ತಿಗೆ ನೌಕರರಿಗೆ ವೇತನ ಪಾವತಿ ಆಗಿರಲಿಲ್ಲ. ಜೀವನ ನಿರ್ವಹಣೆಗೆ ಅನುಕೂಲವಾಗಲು ಎರಡು ತಿಂಗಳ ವೇತನದ ಲೆಕ್ಕ ಹಾಕಿ ಪುರಸಭೆಯು ಕಾರ್ಮಿಕರ ಗುತ್ತಿಗೆಗೆ ₹3.96 ಲಕ್ಷ ಹಾಗೂ ಚಾಲಕರ ಗುತ್ತಿಗೆಗೆ ₹4.91 ಲಕ್ಷ ಗುತ್ತಿಗೆದಾರನಿಗೆ ಕಳೆದ ಜುಲೈ 14ರಂದು ಬಿಡುಗಡೆ ಮಾಡಿದೆ. ಆದರೆ, ಗುತ್ತಿಗೆದಾರ ಕೇವಲ ಒಂದು ತಿಂಗಳ ವೇತನವನ್ನು ಮಾತ್ರ ಹೊರಗುತ್ತಿಗೆ ನೌಕರರಿಗೆ ಪಾವತಿಸಿದ್ದು, ಇದರಿಂದ ನೌಕರರು ಆಕ್ರೋಶಗೊಂಡಿದ್ದಾರೆ.

‘ಆರು ತಿಂಗಳಿಂದ ವೇತನವಿಲ್ಲದೆ ಜೀವನ ನಡೆಸುವುದೇ ಕಷ್ಟವಾಗಿದೆ. ಶಾಲೆಗಳು ಆರಂಭವಾಗಿದ್ದು, ಶುಲ್ಕ ಪಾವತಿಸಲು ದುಡ್ಡಿಲ್ಲ. ಪಂಚಮಿ ಬಂದಿದ್ದು, ಹಬ್ಬ ಆಚರಣೆಗೂ ದುಡ್ಡಿಲ್ಲ. ಈಗ ಎರಡು ತಿಂಗಳ ವೇತನವನ್ನು ಗುತ್ತಿಗೆದಾರನಿಗೆ ಪುರಸಭೆ ನೀಡಿದ್ದರೂ ನಮಗೆ ಕೇವಲ ಒಂದೇ ತಿಂಗಳ ವೇತನ ಪಾವತಿಸಿದ್ದಾರೆ. ಇದರಿಂದ ಇನ್ನಷ್ಟು ಕಷ್ಟಕ್ಕೆ ತಳ್ಳಿದಂತಾಗಿದೆ’ ಎಂದು ನೌಕರರು ಅಳಲು ತೋಡಿಕೊಂಡರು.

ಕಾರ್ಮಿಕರ ಗುತ್ತಿಗೆಯನ್ನು 2024ರ ಆಗಸ್ಟ್ 30 ಹಾಗೂ ಚಾಲಕರ ಗುತ್ತಿಗೆಯನ್ನು 2024ರ ಅಕ್ಟೋಬರ್ 30ರಂದು ಗುತ್ತಿಗೆದಾರ ಪಡೆದಿದ್ದಾರೆ. ಒಂದು ವರ್ಷದ ಅವಧಿಯ ಗುತ್ತಿಗೆ ಇದಾಗಿದೆ. ಕಾರ್ಮಿಕರ ಗುತ್ತಿಗೆಗೆ ಟೆಂಡರ್ ಮೊತ್ತ ₹28.96 ಲಕ್ಷ ಗೆ ₹1.45 ಲಕ್ಷ ಹಾಗೂ ಚಾಲಕರ ಗುತ್ತಿಗೆಗೆ ಟೆಂಡರ್ ಮೊತ್ತ ₹32.11 ಲಕ್ಷಕ್ಕೆ ₹1.61 ಲಕ್ಷ ನಿಶ್ಚಿತ ಠೇವಣಿ ಪಾವತಿಸಿದ್ದಾರೆ.

‘ಹೊರಗುತ್ತಿಗೆ ನೌಕರರ ಎರಡು ತಿಂಗಳ ವೇತನವನ್ನು ಬಿಡುಗಡೆ ಮಾಡಿ ಸಂಬಂಧಿಸಿದ ಗುತ್ತಿಗೆದಾರನಿಗೆ ವೇತನದ ಹಣವನ್ನು ಪಾವತಿಸಲಾಗಿದೆ. ಆದರೆ, ಗುತ್ತಿಗೆದಾರ ಒಂದೇ ತಿಂಗಳ ವೇತನ ನೀಡಿದ್ದು, ಇನ್ನೊಂದು ತಿಂಗಳ ವೇತನ ಪಾವತಿಸಲು ಸೂಚಿಸಲಾಗಿದೆ. ಇಲ್ಲದಿದ್ದರೆ ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಎನ್.ಎ. ಲಮಾಣಿ ತಿಳಿಸಿದರು.

ಹೊರಗುತ್ತಿಗೆ ನೌಕರರ ಇಪಿಎಫ್ ಇಎಸ್ಐಯನ್ನು ಗುತ್ತಿಗೆದಾರ ಪ್ರತಿ ತಿಂಗಳು ಪಾವತಿಸುತ್ತಿದ್ದಾರೆ. ಅನುದಾನ ಕೊರತೆಯಿಂದಾಗಿ ಸರಿಯಾಗಿ ಗುತ್ತಿಗೆದಾರನಿಗೆ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ಹೊರಗುತ್ತಿಗೆ ನೌಕರರಿಗೆ ತೊಂದರೆಯಾಗಿದೆ.
ಎನ್.ಎ.ಲಮಾಣಿ ಮುಖ್ಯಾಧಿಕಾರಿ ಪುರಸಭೆ ಮಹಾಲಿಂಗಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.