ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಪ್ರಚಾರದ ವೇಳೆ ಮೋದಿ ಚಿತ್ರ: ಬಾಗಲಕೋಟೆಯ ಯುವತಿಗೆ ಪತ್ರ ಬರೆದ ಪ್ರಧಾನಿ

Published 13 ಮೇ 2024, 16:17 IST
Last Updated 13 ಮೇ 2024, 16:17 IST
ಅಕ್ಷರ ಗಾತ್ರ

ಬಾಗಲಕೋಟೆ: ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಾಯಿ ಇರುವ ಭಾವಚಿತ್ರ ನೀಡಿದ್ದ ಯುವತಿ ನಾಗರತ್ನಾ ಬಸವರಾಜ ಮೇಟಿಯವರಿಗೆ ಮೋದಿ ಧನ್ಯವಾದ ತಿಳಿಸಿ, ಪತ್ರ ಬರೆದಿದ್ದಾರೆ.

ಏಪ್ರಿಲ್ 29ರಂದು ಬಾಗಲಕೋಟೆಗೆ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಮೋದಿ ಅವರಿಗೆ ನಾಗರತ್ನಾ ಅವರು ಚಿತ್ರವನ್ನು ದೂರದಿಂದ ತೋರಿಸಿದ್ದರು. ಆಗ ಮೋದಿ ಅವರು ವಿಶೇಷ ಭದ್ರತಾ ಸಿಬ್ಬಂದಿಗೆ ಚಿತ್ರವನ್ನು ಸಂಗ್ರಹಿಸಿಕೊಳ್ಳುವಂತೆ ತಿಳಿಸಿದ್ದಲ್ಲದೇ, ಪತ್ರ ಬರೆಯುವುದಾಗಿ ಹೇಳಿದ್ದರು.

‘ಈ ಕಲಾತ್ಮಕ ಚಿತ್ರವು ಮಾನವನ ಭಾವನೆಗಳ ಪ್ರಾಮುಖ್ಯತೆ ತೋರಿಸುತ್ತದೆ. ಹೊಸ ಭಾರತ ಮತ್ತು ಯುವಶಕ್ತಿಯ ಭವಿಷ್ಯ ನಿರ್ಮಾಣಕ್ಕೆ ನನ್ನನ್ನು ಪ್ರೇರೇಪಿಸುತ್ತದೆ. ಕೌಶಲ ಹಾಗೂ ರಚನಾತ್ಮಕ ಚಟುವಟಿಕೆಯನ್ನು ನಿಮ್ಮ ಕೆಲಸದಲ್ಲಿ ಅಳವಡಿಸಿಕೊಳ್ಳಿ. ಶುಭವಾಗಲಿ’ ಎಂದು ಮೋದಿ ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT